ದಿಘಾ (ಪಶ್ಚಿಮ ಬಂಗಾಳ): ಪೂರ್ವ ಭಾರತದ ಅತಿದೊಡ್ಡ ಮೀನು ಹರಾಜು ಕೇಂದ್ರವಾದ ದಿಘಾ ನದೀಮುಖದಲ್ಲಿ ಮೀನುಗಾರರು 22 ತೇಲಿಯಾ ಭೋಲಾ ಮೀನುಗಳನ್ನು ಬಲೆಗೆ ಬೀಳಿಸಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 1 ಕೋಟಿ ರೂ ಎಂದು ಅಂದಾಜಿಸಲಾಗಿದೆ.
ಭುವನ್ ಬೇರಾದಿಂದ ಟ್ರಾಲರ್ ಶನಿವಾರ 22 ಟೆಲಿಯಾ ಭೋಲಾ ಮೀನುಗಳನ್ನು ತಂದಿತ್ತು. ಈ ಪ್ರತಿಯೊಂದು ಮೀನಿನ ತೂಕವು 20-22 ಕೆ.ಜಿ. ತೂಗುತ್ತದೆ. ಕೋಲ್ಕತ್ತಾದ ಕಂಪನಿಯೊಂದರಲ್ಲಿ ಪ್ರತಿ ಕೆಜಿಗೆ 14,800 ರೂ. ದರದಲ್ಲಿ ಮೀನನ್ನು ಹರಾಜು ಮಾಡಲಾಗಿದೆ.
ಈ ದೊಡ್ಡ ಮೀನುಗಳನ್ನು ನೋಡಲು ಪ್ರವಾಸಿಗರು ಮತ್ತು ಮೀನು ವ್ಯಾಪಾರಿಗಳು ಮುಗಿಬಿದ್ದಿದ್ದರು.. ಈ ಮೀನುಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ತೇಲಿಯಾ ಭೋಲಾ ಮೀನು ತುಂಬಾ ದುಬಾರಿಯಾಗಿದ್ದು, ಅದರಿಂದ ಜೀವರಕ್ಷಕ ಔಷಧಗಳನ್ನು ತಯಾರಿಸಲಾಗುತ್ತದೆ.
ಇದನ್ನು ಓದಿ:VIDEO: ಉಡುಪಿ ಮೀನುಗಾರರ ಬಲೆಗೆ ಬಿದ್ದ ನೂರಾರು ತೊರಕೆ ಮೀನುಗಳು