ETV Bharat / bharat

ಪೊಲೀಸ್​ ಅಧಿಕಾರಿಯ ಉಚಿತ ಆನ್​ಲೈನ್​ ಕ್ಲಾಸ್​: 22 ವಿದ್ಯಾರ್ಥಿಗಳು JPSC ಪರೀಕ್ಷೆ ಪಾಸ್​!

ಈ ಹಿಂದೆ ದಿಯೋಘರ್‌ನಲ್ಲಿದ್ದಾಗ ಅಲ್ಲಿನ ಅಂಬೇಡ್ಕರ್ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಬಗ್ಗೆ ಡಿಎಸ್​ಪಿ ವಿಕಾಸ್ ಚಂದ್ರ ಶ್ರೀವಾಸ್ತವ್ ಪಾಠ ಮಾಡುತ್ತಿದ್ದರು. ಅಲ್ಲಿಂದ ವರ್ಗಾವಣೆಯಾದ ಬಳಿಕ 'ಡಿಎಸ್​ಪಿ ಕಿ ಪಾಠಶಾಲಾ' ಎಂಬ ಯೂಟ್ಯೂಬ್​ ಚಾನಲ್ ಆರಂಭಿಸಿದ್ದಾರೆ. ಇದು ಯುಪಿಎಸ್​ಸಿ ಆಕಾಂಕ್ಷಿಗಳಿಗೆ ವರದಾನವಾಗಿದೆ.

2-students-studying-under-dsp-ki-pathshala-qualify-in-jpsc-civil-service-exam-in-ranchi
ಪೊಲೀಸ್​ ಅಧಿಕಾರಿಯ ಉಚಿತ ಆನ್​ಲೈನ್​ ಕ್ಲಾಸ್​
author img

By

Published : Jun 2, 2022, 6:21 AM IST

ರಾಂಚಿ (ಜಾರ್ಖಂಡ್​​): ಜಾರ್ಖಂಡ್​​ನಲ್ಲಿ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಲೇ ಪೊಲೀಸ್​ ಅಧಿಕಾರಿಯೊಬ್ಬರು ಬಡ ವಿದ್ಯಾರ್ಥಿಗಳ ಜ್ಞಾನಾರ್ಜನೆ ವೃದ್ಧಿಸುತ್ತಿದ್ದಾರೆ. ಆನ್​ಲೈನ್​ ಪಾಠ ಮಾಡುತ್ತಲೇ ಯುವಕರ ಕಲಿಕೆಗೆ ಪ್ರೋತ್ಸಾಹದ ನೀರು ಹರಿಸುತ್ತಿದ್ದಾರೆ. ಇವರ ಬಳಿ ಪಾಠ ಕಲಿತ 22 ಜನರು ಜಾರ್ಖಂಡ್​​ ಲೋಕಸೇವಾ ಆಯೋಗ (ಜೆಪಿಎಸ್​​ಸಿ)ದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಇಬ್ಬರು ಟಾಪ್ ಹತ್ತರಲ್ಲಿ ಉತ್ತೀರ್ಣ​ ಆಗಿದ್ದಾರೆ.

ಹೌದು, ಡಿಎಸ್​ಪಿ ವಿಕಾಸ್ ಚಂದ್ರ ಶ್ರೀವಾಸ್ತವ್ ಎಂಬುವವರೇ ಬಡ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದ್ದಾರೆ. ತಮ್ಮ ಪೊಲೀಸ್​ ಕೆಲಸದೊಂದಿಗೆ ಯೂಟ್ಯೂಬ್​ನಲ್ಲಿ ಪಾಠ ಮಾಡುತ್ತಿರುವ ಇವರು, ಎರಡೂ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ದಿಯೋಘರ್‌ನಲ್ಲಿದ್ದಾಗ ಅಲ್ಲಿನ ಅಂಬೇಡ್ಕರ್ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಬಗ್ಗೆ ಪಾಠ ಮಾಡುತ್ತಿದ್ದರು.

ಈ ನಡುವೆ ಅವರು ರಾಂಚಿಗೆ ವರ್ಗಾವಣೆಯಾದರು. ಆದರೂ, ದಿಯೋಘರ್‌ನಲ್ಲಿ ತಮ್ಮನ್ನು ನಂಬಿದ ವಿದ್ಯಾರ್ಥಿಗಳನ್ನು ಮರೆಯದ ವಿಕಾಸ್ ಚಂದ್ರ ಶ್ರೀವಾಸ್ತವ್, 'ಡಿಎಸ್​ಪಿ ಕಿ ಪಾಠಶಾಲಾ' ಎಂಬ ಹೆಸರಲ್ಲಿ ಯೂಟ್ಯೂಬ್ ಚಾನಲ್ ಆರಂಭಿಸಿದರು. ಅಲ್ಲಿಂದ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪಾಠಗಳನ್ನು ಹೇಳುತ್ತಿದ್ದಾರೆ. ಯುಪಿಎಸ್‌ಸಿ, ಜೆಪಿಎಸ್‌ಪಿ, ಬ್ಯಾಂಕ್ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಬೇಕಾದ ವಿಷಯಗಳನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡುತ್ತಾರೆ. ಇದರಿಂದ ಜಾರ್ಖಂಡ್​ನ​ ವಿವಿಧ ಭಾಗದ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ.

ಪ್ರಸ್ತುತ 'ಡಿಎಸ್​ಪಿ ಕಿ ಪಾಠಶಾಲಾ' ಯೂಟ್ಯೂಬ್​ ಚಾನಲ್​ಗೆ ಸುಮಾರು 17 ಸಾವಿರ ಚಂದಾದಾರರು ಇದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕರಲ್ಲಿ ಅಭಿನವ್ ಕುಮಾರ್ ಮತ್ತು ಭೋಲಾ ಪಾಂಡೆ ಎಂಬುವರು ಟಾಪ್ ಹತ್ತರಲ್ಲಿ ಪಾಸ್​ ಆಗಿದ್ದಾರೆ. ಇದರಿಂದ ಡಿಎಸ್​ಪಿ ವಿಕಾಸ್ ಚಂದ್ರ ಸಹ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸೋಲೇ ಗೆಲುವಿನ ಮೆಟ್ಟಿಲು: ಯಪಿಎಸ್​​ಸಿ ಪರೀಕ್ಷೆ ಪಾಸ್ ಮಾಡಿದ ಬಸ್​ ಡ್ರೈವರ್ ಮಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.