ETV Bharat / bharat

ಶಬರಿಮಲೆ ಅಯ್ಯಪ್ಪನ ಭಕ್ತರಿಗೆ ಗುಡ್​ ನ್ಯೂಸ್​: 22 ವಿಶೇಷ ರೈಲು ಸೇವೆ ನೀಡಲಿರುವ ದಕ್ಷಿಣ ಮಧ್ಯ ರೈಲ್ವೆ

author img

By ETV Bharat Karnataka Team

Published : Nov 21, 2023, 4:35 PM IST

ದಕ್ಷಿಣ ಮಧ್ಯ ರೈಲ್ವೆಯಿಂದ ಶಬರಿಮಲೆಗೆ ತೆರಳುವ ಭಕ್ತರಿಗೆ ಅನುಕೂಲವಾಗಲಿ ಎಂದು ವಿವಿಧ ಮಾರ್ಗಗಳಿಗೆ 22 ವಿಶೇಷ ರೈಲುಗಳನ್ನು ಬಿಡಲಾಗಿದೆ.

Etv Bharat22-special-trains-have-been-released-to-sabarimala-devotees-by-south-central-railway
ಶಬರಿಮಲೆ ಅಯ್ಯಪ್ಪನ ಭಕ್ತರಿಗೆ ಗುಡ್​ ನ್ಯೂಸ್​: 22 ವಿಶೇಷ ರೈಲು ಸೇವೆ ನೀಡಲಿರುವ ದಕ್ಷಿಣ ಮಧ್ಯ ರೈಲ್ವೆ

ಹೈದರಾಬಾದ್: ಶಬರಿಮಲೆಗೆ ತೆರಳುವ ಅಯ್ಯಪ್ಪನ ಭಕ್ತರಿಗಾಗಿ ಅನುಕೂಲವಾಗಲಿ ಎಂದು 22 ವಿಶೇಷ ರೈಲುಗಳನ್ನು ಬಿಡಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವ ದಿನ, ಎಲ್ಲಿಂದ ಎಲ್ಲಿಗೆ ರೈಲು?: ಸಿಕಂದರಾಬಾದ್ ನಿಂದ ಕೊಲ್ಲಂಗೆ ಈ ತಿಂಗಳ 26 ಮತ್ತು ಡಿಸೆಂಬರ್ 3, ಕೊಲ್ಲಂ-ಸಿಕಂದರಾಬಾದ್​ಗೆ ನ.28 ಹಾಗೂ ಡಿ.5, ನರಸಾಪುರ- ಕೊಟ್ಟಾಯಂಗೆ ನ.26 ಹಾಗೂ ಡಿ.3, ಕೊಟ್ಟಾಯಂ-ನರಸಾಪುರಗೆ ನ.27 ಹಾಗೂ ಡಿ.4, ಕಾಚಿಗುಡ-ಕೊಲ್ಲಂಗೆ ನ.22, 29 ಹಾಗೂ ಡಿ.6, ಕೊಲ್ಲಂ-ಕಾಚಿಗುಡಕ್ಕೆ ನ. 24 ಹಾಗೂ ಡಿ.1 ಮತ್ತು 8, ಕಾಕಿನಾಡ-ಕೊಟ್ಟಾಯಂಗೆ ನ.23 ಮತ್ತು 30, ಕೊಟ್ಟಾಯಂ-ಕಾಕಿನಾಡಕ್ಕೆ ನ.25 ಮತ್ತು ಡಿ.2, ಸಿಕಂದರಾಬಾದ್-ಕೊಲ್ಲಂಗೆ ನ.24 ಮತ್ತು ಡಿ.1, ನ.25 ಮತ್ತು ಡಿ.2 ರಂದು ಕೊಲ್ಲಂ ನಿಂದ ಸಿಕಂದರಾಬಾದ್​ಗೆ ವಿಶೇಷ ರೈಲುಗಳ ಸಂಚಾರ ಇರಲಿದೆ. ಇವುಗಳಲ್ಲಿ ಸ್ಲೀಪರ್ ಮತ್ತು ಜನರಲ್ ಬೋಗಿಗಳ ಜೊತೆಗೆ ಮೊದಲ, ಎರಡನೇ ಮತ್ತು ಮೂರನೇ ವರ್ಗದ ಎಸಿ ಬೋಗಿಗಳು ಸೇರಿವೆ.

ಸುರಕ್ಷತಾ ಮಾನದಂಡಗಳನ್ನು ಅನುಸರಿಸಬೇಕು - ರೈಲ್ವೆ ಜಿಎಂ : ಲೋಕೋ ಪೈಲಟ್​ಗಳು ರೈಲುಗಳನ್ನು ಚಲಾಯಿಸುವುವಾಗ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ರೈಲ್ವೆ ಜಿಎಂ ಅರುಣ್ ಕುಮಾರ್ ಜೈನ್ ತಿಳಿಸಿದ್ದಾರೆ. ರೈಲ್ವೆ ನಿಲ್ದಾಣದಿಂದ ಆರು ವಿಭಾಗಗಳ ಅಧಿಕಾರಿಗಳೊಂದಿಗೆ ಸೋಮವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಲಾಯಿತು. ಈ ವೇಳೆ, ಲೋಕೋ ಪೈಲಟ್​ಗಳು, ಸಹಾಯಕ ಲೋಕೋ ಪೈಲಟ್​ಗಳು ಮತ್ತು ರೈಲ್ವೆ ಸಿಬ್ಬಂದಿಗೆ ಕೌನ್ಸೆಲಿಂಗ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: 11 ರಾಜ್ಯ ಸಂಪರ್ಕಿಸುವ 9 'ವಂದೇ ಭಾರತ್​ ಎಕ್ಸ್‌ಪ್ರೆಸ್‌' ರೈಲುಗಳಿಗೆ ಇಂದು ಪ್ರಧಾನಿ ಮೋದಿ ಚಾಲನೆ

ಹೈದರಾಬಾದ್ - ಬೆಂಗಳೂರು ವಂದೇ ಭಾರತ್ ಎಕ್ಸ್​ಪ್ರೆಸ್: ಕಳೆದ ಸೆ.24ರಂದು ಕಾಚಿಗುಡ-ಯಶವಂತಪುರ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದ್ದರು. ಈ ಸ್ಥಳೀಯ ಸೆಮಿ-ಹೈ ಸ್ಪೀಡ್ ರೈಲು ಹೈದರಾಬಾದ್ ನಗರದ ಕಾಚಿಗುಡ ರೈಲು ನಿಲ್ದಾಣದಿಂದ ಸಂಚಾರ ಪ್ರಾರಂಭಿಸಿ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣಕ್ಕೆ ತಲುಪುತ್ತದೆ.

ಈ ರೈಲು ಮಹಬೂಬ್‌ನಗರ, ಕರ್ನೂಲ್ ಟೌನ್, ಅನಂತಪುರ ಮತ್ತು ಧರ್ಮಾವರಂ ಮಾರ್ಗವಾಗಿ ಪ್ರಯಾಣಿಸುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾಚಿಗುಡ- ಯಶವಂತಪುರ ನಡುವಿನ 610 ಕಿ.ಮೀ ದೂರವನ್ನು 8 ಗಂಟೆ 30 ನಿಮಿಷಗಳಲ್ಲಿ ಕ್ರಮಿಸುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರದಿಂದ ಕಾಚಿಗುಡ-ಯಶವಂತಪುರ ನಡುವಿನ ಪ್ರಯಾಣದ ಸಮಯ 2 ಗಂಟೆ 50 ನಿಮಿಷ ತಗ್ಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.