ETV Bharat / bharat

ಗುಜರಾತ್​ನ ನೂತನ 40 ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್​: ಇದರಲ್ಲಿ ಯಾವ ಪಕ್ಷದವರು, ಎಷ್ಟು ಜನ? - ಕಾಂಗ್ರೆಸ್​

ಗುಜರಾತ್​ನಲ್ಲಿ ನೂತನವಾಗಿ ಆಯ್ಕೆಯಾದ 182 ಶಾಸಕರ ಪೈಕಿ 40 ಜನ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ ಎಂದು ಎಡಿಆರ್ ಸಂಸ್ಥೆ ಹೇಳಿದೆ.

22-percent-gujarat-mlas-have-criminal-cases-adr
ಗುಜರಾತ್​ನ ನೂತನ 40 ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್​: ಇದರಲ್ಲಿ ಯಾವ ಪಕ್ಷದವರು, ಎಷ್ಟು ಜನ?
author img

By

Published : Dec 11, 2022, 6:03 PM IST

ನವದೆಹಲಿ: ಇತ್ತೀಚಿಗೆ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ 182 ಶಾಸಕರ ಪೈಕಿ ಶೇ.22ರಷ್ಟು ಎಂದರೆ 40 ಜನರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಇದರಲ್ಲಿ 29 ಮಂದಿ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿದ್ದಾರೆ ಎಂಬ ಅಂಶ ಹೊರಬಿದ್ದಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎಂಬ ಸಂಸ್ಥೆ ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳ ವಿಶ್ಲೇಷಣೆ ನಡೆಸಿ, ಈ ಮಾಹಿತಿ ಹೊರ ಹಾಕಿದೆ. ಇದೀಗ ಒಟ್ಟು 40 ಜನ ವಿಜೇತ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್​ ಪ್ರಕರಣಗಳು ಇವೆ. ಇದರಲ್ಲಿ 26 ಜನ ಬಿಜೆಪಿಗೆ ಸೇರಿದ್ದಾರೆ. ಉಳಿದಂತೆ ಕಾಂಗ್ರೆಸ್​ನ 9 ಜನ, ಆಮ್​ ಆದ್ಮಿ ಪಕ್ಷದ ಇಬ್ಬರು ಮತ್ತು ಇಬ್ಬರು ಪಕ್ಷೇತರರು ಹಾಗೂ ಸಮಾಜವಾದಿ ಪಕ್ಷದ ಒಬ್ಬ ಶಾಸಕನ ವಿರುದ್ಧವೂ ಕ್ರಿಮಿನಲ್​ ಕೇಸ್​ ಇದೆ.

ಅಲ್ಲದೇ, ಒಟ್ಟಾರೆ 40 ಜನರಲ್ಲಿ ಪೈಕಿ ಮೂವರ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣಗಳು ದಾಖಲಾಗಿವೆ. ನಾಲ್ವರ ವಿರುದ್ಧ ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಒಬ್ಬರ ವಿರುದ್ಧ ಐಪಿಸಿ ಸೆಕ್ಷನ್ 376 ರ ಅಡಿಯಲ್ಲಿ ಅತ್ಯಾಚಾರ ಪ್ರಕರಣ ಕೂಡ ದಾಖಲಾಗಿದೆ ಎಂದು ಎಡಿಆರ್​ ತಿಳಿಸಿದೆ.

29 ಜನ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವವರ ಪೈಕಿ 20 ಮಂದಿ ಬಿಜೆಪಿಗೆ ಸೇರಿದ್ದರೆ, ನಾಲ್ವರು ಕಾಂಗ್ರೆಸ್, ಇಬ್ಬರು ಆಪ್​, ಇಬ್ಬರು ಪಕ್ಷೇತರರು ಮತ್ತು ಒಬ್ಬರು ಸಮಾಜವಾದಿ ಪಕ್ಷದ ಶಾಸಕರಾಗಿದ್ದಾರೆ ಎಂದು ಎಡಿಆರ್​ ವಿಶ್ಲೇಷಿಸಿದೆ.

ಇದನ್ನೂ ಓದಿ: ಗುಜರಾತ್​ ಚುನಾವಣೆ: ಡ್ರಗ್ಸ್ ಸೇರಿ 801 ಕೋಟಿ ರೂ ಮೌಲ್ಯದ ವಸ್ತುಗಳು ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.