ETV Bharat / bharat

ಬೆಂಗಳೂರು, ಹೈದರಾಬಾದ್‌ ರಿಯಲ್‌ ಎಸ್ಟೇಟ್‌ ಕಂಪನಿಗಳ ಮೇಲೆ IT ದಾಳಿ; ₹22 ಕೋಟಿ ಮೌಲ್ಯದ ನಗದು, ಚಿನ್ನಾಭರಣ ವಶ - ರಿಯಲ್ ಎಸ್ಟೇಟ್ ಡೆವಲಪರ್ ಕಂಪನಿ ದಾಳಿ

ಈಗಾಗಲೇ ವಶಪಡಿಸಿಕೊಂಡ ಸಾಕ್ಷ್ಯಗಳ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಕೆಲವು ಭೂ ಮಾಲೀಕರು ಬೆಂಗಳೂರು ಮೂಲದ ಡೆವಲಪರ್‌ ಕಂಪನಿಯೊಂದಿಗೆ ಜಂಟಿ ಅಭಿವೃದ್ಧಿ ಒಪ್ಪಂದವನ್ನು (ಜೆಡಿಎ) ಮಾಡಿಕೊಂಡಿರುವುದಾಗಿ ಕಂಡು ಬಂದಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.

22-Crore Worth Cash, Jewellery Seized From Bengaluru, Hyderabad Realty Groups

author img

By

Published : Jul 12, 2022, 11:43 AM IST

ಬೆಂಗಳೂರು: ಎರಡು ಪ್ರಖ್ಯಾತ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಸೇರಿದ ಬೆಂಗಳೂರು ಹಾಗೂ ಹೈದರಾಬಾದ್ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, 22 ಕೋಟಿ ರೂಪಾಯಿ ಮೊತ್ತದ ನಗದು ಹಾಗೂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಹೇಳಿದೆ. ಒಟ್ಟಾರೆ 40 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ವಶಪಡಿಸಿಕೊಂಡ ಸಾಕ್ಷ್ಯಗಳ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಕೆಲ ಭೂ ಮಾಲೀಕರು ಬೆಂಗಳೂರು ಮೂಲದ ಡೆವಲಪರ್‌ ಕಂಪನಿಯೊಂದಿಗೆ ಜಂಟಿ ಅಭಿವೃದ್ಧಿ ಒಪ್ಪಂದವನ್ನು (ಜೆಡಿಎ) ಮಾಡಿಕೊಂಡಿರುವುದಾಗಿ ಕಂಡು ಬಂದಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.

"ವಿವಿಧ ಯೋಜನೆಗಳ ಅಭಿವೃದ್ಧಿಗಾಗಿ ಡೆವಲಪರ್‌ಗೆ ನೀಡಿದ ಭೂಮಿಗೆ ಬದಲಾಗಿ ಭೂಮಾಲೀಕರು ಡೆವಲಪರ್‌ಗಳಿಂದ ಸೂಪರ್ ಬಿಲ್ಟ್-ಅಪ್ ಪ್ರದೇಶವನ್ನು ಪಡೆದುಕೊಂಡಿದ್ದಾರೆ. ಆದರೆ ಈ ಯೋಜನೆಗಳು ಪೂರ್ಣಗೊಂಡು ಪ್ರಮಾಣಪತ್ರಗಳನ್ನು ಪಡೆದಿದ್ದರೂ, ಭೂ ಮಾಲೀಕರು ಈ ವಹಿವಾಟಿನಿಂದ ಗಳಿಸಿದ ಕ್ಯಾಪಿಟಲ್​ ಗೇನ್ಸ್​ (ಬಂಡವಾಳ ಲಾಭ) ಅನ್ನು ಸರ್ಕಾರಕ್ಕೆ ತಿಳಿಸಿಲ್ಲ” ಎಂದು ಇಲಾಖೆ ಹೇಳಿದೆ. ಹೀಗೆ ಬಹಿರಂಗಪಡಿಸದ ಬಂಡವಾಳ ಲಾಭದ ಮೊತ್ತವು 400 ಕೋಟಿ ರೂ.ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.

ವಶಪಡಿಸಿಕೊಂಡ ದಾಖಲೆಗಳ ಪ್ರಕಾರ, ರಿಯಲ್ ಎಸ್ಟೇಟ್‌ನಲ್ಲಿನ ಘಟಕಗಳ ಮಾರಾಟದಿಂದ ಬಂದಿರುವ ಆದಾಯಕ್ಕೆ ಸಂಬಂಧಿಸಿದಂತೆ 90 ಕೋಟಿ ರೂಪಾಯಿಗಳ ಆದಾಯವನ್ನು ಬಚ್ಚಿಡಲಾಗಿದೆ. ಇದುವರೆಗೆ ನಡೆದ ಶೋಧ ಕಾರ್ಯದಲ್ಲಿ 3.50 ಕೋಟಿ ರೂಪಾಯಿ ಅಘೋಷಿತ ನಗದು ಹಾಗೂ 18.50 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಡಿಟಿ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.