ಹೈದರಾಬಾದ್: ಇವರು, ತಾನು ಏನೇ ಮಾಡಿದ್ರೂ ಅದರಲ್ಲಿ ವಿಶೇಷತೆ ಇರಬೇಕೆಂದು ಬಯಸಿದ್ದರು. ಅಂದುಕೊಂಡಂತೆ ಇದೀಗ ಸಾಧನೆಯನ್ನೂ ಮಾಡಿದ್ದಾರೆ. ನಾವು ನಿಮಗಿಲ್ಲಿ ಹೇಳ ಹೊರಟಿರುವುದು ಬುರ್ರಾ ಲಾಸ್ಯ ಎಂಬ ಯುವತಿಯ ಬಗ್ಗೆ. ಸಾಮಾನ್ಯವಾಗಿ ಎಲ್ಲರೂ ಕ್ರೀಡೆಯಿಂದ ನಿವೃತ್ತರಾದ ನಂತರ ‘ಕೋಚ್’ ಆಗ್ತಾರೆ. ಆದ್ರೆ ಇಲ್ಲಿ ಬುರ್ರಾ ಲಾಸ್ಯ ತನ್ನ 21ರ ಸಣ್ಣ ವಯಸ್ಸಿಗೇ ಕ್ರಿಕೆಟ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಯಿಂದ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ತೆಲಂಗಾಣದಿಂದ ಯುವತಿ ಇಂಥದ್ದೊಂದು ಸಾಧನೆ ತೋರಿದ್ದಾರೆ. ಈ ಬಗ್ಗೆ ಅವರೇ ಮಾತನಾಡಿದ್ದು, ಏನ್ ಹೇಳಿದ್ದಾರೆ ನೋಡೋಣ.
ತಂದೆ-ತಾಯಿ ಇಬ್ಬರೂ ಕ್ರೀಡಾಪಟುಗಳು: ನನ್ನ ತಂದೆ ಬುರ್ರಾ ರಮೇಶ್ ವಿಶ್ವವಿದ್ಯಾನಿಲಯದಲ್ಲಿ ವಾಲಿಬಾಲ್ ಆಟಗಾರರು. ತಾಯಿ ಸುನಿತಾ ರಾಷ್ಟ್ರೀಯ ಕ್ರೀಡಾಪಟು. ಎಲ್ಲೇ ಕ್ರೀಡಾ ಸ್ಪರ್ಧೆಗಳಿದ್ದರೂ ಇಬ್ಬರೂ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ನನಗೆ ಏನೇ ಮಾಡಿದರೂ ಸ್ಪೆಷಲ್ ಆಗಿ ಮಾಡಬೇಕೆನಿಸಿತು. ಹಾಗಾಗಿ ಹುಡುಗಿಯರು ಕಡಿಮೆ ಇರುವ ಕ್ರಿಕೆಟ್‌ನತ್ತ ಗಮನಹರಿಸಿದೆ.
ಬಾಲ್ಯದಲ್ಲೇ ಕ್ರಿಕೆಟ್ ಆಡುತ್ತಿದ್ದ ಲಾಸ್ಯ: ಬಾಲ್ಯದಿಂದಲೂ ನಾನು ನನ್ನ ಕಿರಿಯ ಸಹೋದರ ಮತ್ತು ಅವನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದೆ. ಒಮ್ಮೆ ವಿಶ್ವಕಪ್ ವೀಕ್ಷಿಸಿದಾಗ, ಈ ಆಟದ ಜನಪ್ರಿಯತೆ ಬಗ್ಗೆ ಅರ್ಥವಾಯಿತು. ನಾನು ಓದು ಮುಗಿಸಿದ ನಂತರ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಬಯಸಿದೆ. ಆಗ ನನಗೆ ಹದಿನಾರು ವರ್ಷ. ನನ್ನ ಆಸಕ್ತಿಯನ್ನು ತಾಯಿ ಪ್ರೋತ್ಸಾಹಿಸಿದರು. ನನ್ನ ಹುಟ್ಟೂರು ಜಯಶಂಕರ್ ಜಿಲ್ಲೆಯ ಭೂಪಾಲಪಲ್ಲಿ. ತಂದೆ ಪ್ರಸ್ತುತ ಜಿಲ್ಲಾ ಗ್ರಂಥಾಲಯದ ಅಧ್ಯಕ್ಷರಾಗಿದ್ದು, ತಾಯಿ ಜಿಲ್ಲಾ ಯುವ ಕ್ರೀಡಾ ಅಧಿಕಾರಿ ಎಂದು ಲಾಸ್ಯ ಹೇಳುತ್ತಾರೆ.
ತರಬೇತಿಯಲ್ಲಿ ಆಸಕ್ತಿ: ನಾನು ಡೇನಿಯಲ್, ರಾಂಪಾಟೀಲ್ ಮತ್ತು ವಿ.ವಿ.ಎಸ್.ಲಕ್ಷ್ಮಣ್ ಕ್ರಿಕೆಟ್ ಅಕಾಡೆಮಿಗಳಲ್ಲಿ ತರಬೇತಿ ಪಡೆದಿದ್ದೇನೆ. ಆಲ್ ರೌಂಡರ್ ಆಗಿ ರಾಜ್ಯ ಮಟ್ಟದ 19 ವರ್ಷದೊಳಗಿನವರ ತಂಡದಲ್ಲಿ ಆಡಿದ್ದೇನೆ. ನಾವು ಕಲಿತಿರುವ ಜ್ಞಾನವನ್ನು ನಾಲ್ವರಿಗೆ ಹಂಚಬೇಕು ಎಂಬುದು ನನ್ನ ತತ್ವ.
ಹಾಗಾಗಿ, ಮೊದಲಿನಿಂದಲೂ ಹೊಸಬರಿಗೆ ಸಹಾಯ ಮಾಡುತ್ತಿದ್ದೆ. ನನ್ನ ತರಬೇತುದಾರ ನನ್ನ ಆಸಕ್ತಿ ನೋಡಿ ಸಮಯ ಸಿಕ್ಕಾಗಲೆಲ್ಲಾ ನನಗೆ ಕಲಿಸಿದರು. ಕ್ರಮೇಣ ಅದು ಅಭ್ಯಾಸವಾಯಿತು. ಲಾಕ್‌ಡೌನ್‌ನಲ್ಲಿ ಸಾಕಷ್ಟು ಸಮಯ ಸಿಕ್ಕಿತು. ನಾನು ಐಸಿಸಿ ವೆಬ್‌ಸೈಟ್‌ನಿಂದ ಕೋಚಿಂಗ್ ಪುಸ್ತಕಗಳು ಮತ್ತು ಮಾಹಿತಿಯನ್ನು ಡೌನ್‌ಲೋಡ್ ಮಾಡಿ ಓದುತ್ತಿದ್ದೆ ಎಂದಿದ್ದಾರೆ.
ಐಸಿಸಿಯಿಂದ ಎರಡು ಬಾರಿ ಕೋಚ್ ಆಗಿ ಆಯ್ಕೆ: ನನಗೆ ಏನಾದ್ರೂ ಅನುಮಾನವಿದ್ದರೆ ತರಬೇತುದಾರರ ಸಹಾಯ ಪಡೆಯುತ್ತಿದ್ದೆ. ವಿಶ್ವಾದ್ಯಂತ ವರ್ಷಕ್ಕೆ ಎರಡು ಬಾರಿ ಕೋಚ್‌ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಐಸಿಸಿ ನಡೆಸುತ್ತದೆ ಎಂದು ನಾನು ಕೇಳಿದ್ದೇನೆ. ನನಗೂ ಆಸಕ್ತಿ ಇದೆ, ಹಾಗಾಗಿ ಇದನ್ನು ಪ್ರಯತ್ನಿಸಲು ನಾನು ಅರ್ಜಿ ಸಲ್ಲಿಸಿದೆ. ಆಡುವ ಮತ್ತು ತರಬೇತಿಯ ಆಸಕ್ತಿಗಳ ಬಗ್ಗೆ ಅದರಲ್ಲಿ ಪ್ರಶ್ನೆಗಳನ್ನು ನೀಡಲಾಯಿತು. ಅಂತಿಮ ಆಯ್ಕೆಯು ಉತ್ತರಗಳನ್ನು ಆಧರಿಸಿರುತ್ತದೆ.
ಕೋಚ್ ಆದ ತೆಲಂಗಾಣದ ಮೊದಲ ಯುವತಿ: ಎರಡು ಬ್ಯಾಚ್‌ಗಳಲ್ಲಿ 30-40 ಜನರನ್ನು ಆಯ್ಕೆ ಮಾಡಲಾಗಿದೆ. Google Meetsನಲ್ಲಿ ಸುಮಾರು 20 ದಿನಗಳವರೆಗೆ 'ಆ್ಯಕ್ಟಿವಿಟಿ ಕೋರ್ಸ್' ಹೆಸರಿನಲ್ಲಿ ಇನ್‌ಪುಟ್‌ಗಳನ್ನು ನೀಡಲಾಗುತ್ತದೆ. ಅವುಗಳನ್ನು ಪೂರ್ಣಗೊಳಿಸಬೇಕು. ನಾನು ಅದನ್ನು ಯಶಸ್ವಿಯಾಗಿ ಮಾಡಿದ್ದೇನೆ ಮತ್ತು ಮೂರರಲ್ಲೂ ಲೆವೆಲ್-1 ಪ್ರಮಾಣಪತ್ರವನ್ನು ಪಡೆದುಕೊಂಡಿದ್ದೇನೆ. ಈ ಸಾಧನೆ ಮಾಡಿದ ತೆಲಂಗಾಣದ ಮೊದಲ ಹುಡುಗಿ ನಾನಾಗಿದ್ದೇನೆ. ನನ್ನ ಜೊತೆಗೆ ಬೇರೆ ರಾಜ್ಯದ ಇಬ್ಬರು ಹುಡುಗಿಯರೂ ಇದ್ದಾರೆ ಎಂದು ಲಾಸ್ಯ ಹೇಳಿದರು.
ಆಟದ ಮೇಲೆಯೇ ಗಮನ ಹರಿಸಿ: ತರಬೇತುದಾರರ ಪ್ರಮಾಣಪತ್ರದೊಂದಿಗೆ, ಪ್ರಾಥಮಿಕ ಹಂತದ ಆಟಗಾರರಿಗೆ ಅಧಿಕೃತವಾಗಿ ಆಟವನ್ನು ಕಲಿಸಬಹುದು. ನನ್ನ ಅಧ್ಯಯನದಲ್ಲಿಯೂ ಮುಂದುವರೆಯುತ್ತೇನೆ. ನಾನು ಕೆ.ಎಲ್.ವಿಶ್ವವಿದ್ಯಾನಿಲಯದಿಂದ ವ್ಯವಹಾರ ಆಡಳಿತದಲ್ಲಿ ನನ್ನ ಬ್ಯಾಚುಲರ್ ಮಾಡಿದ್ದೇನೆ. ಈಗ ಅಮೆರಿಕಾದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದೇನೆ. ನಾನು ಬೆಳಗ್ಗೆ 5 ರಿಂದ 8 ರವರೆಗೆ ಅಭ್ಯಾಸ ಮಾಡುತ್ತೇನೆ. ಸಂಜೆ ಕಾಲೇಜು ಮುಗಿಸಿ ಮೈದಾನಕ್ಕೆ ಹೋಗುತ್ತಿದ್ದೆ. ಕಿಟ್ ಬ್ಯಾಗ್ ಹಿಡಿದು ಕಾಲೇಜಿಗೆ ಹೋಗುತ್ತಿದ್ದೇನೆ. ನಾನು ನನ್ನ ಕಿಟ್ ಅನ್ನು ಅಮೆರಿಕಕ್ಕೂ ತಂದಿದ್ದೇನೆ. ನಾನು ಪ್ರತಿದಿನ ಅಭ್ಯಾಸ ಮಾಡಲು ಯೋಜನೆಗಳನ್ನು ಮಾಡುತ್ತಿದ್ದೇನೆ.
ಇದನ್ನೂ ಓದಿ: 'ರಾಮನ ಆಶೀರ್ವಾದ ನಿಮ್ಮೊಂದಿಗಿರಲಿ..': ರಾಹುಲ್ ಯಾತ್ರೆಗೆ ಶುಭ ಕೋರಿದ ರಾಮಮಂದಿರ ಮುಖ್ಯ ಅರ್ಚಕ
ಕೊರೊನಾ ನಂತರ ಎಲ್ಲವೂ ಆನ್‌ಲೈನ್ ಆಗಿರುವುದರಿಂದ ನಾನು ಅದೇ ರೀತಿಯಲ್ಲಿ ತರಬೇತಿಯನ್ನು ಮುಂದುವರಿಸಲು ಬಯಸುತ್ತೇನೆ. ನಮ್ಮ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಬೇಕು. ಹೆಚ್ಚಿನ ಹುಡುಗಿಯರಿಗೆ ತರಬೇತಿ ನೀಡಿ ಅವರನ್ನು ಅತ್ಯುತ್ತಮ ಆಟಗಾರರನ್ನಾಗಿ ಮಾಡುವುದು ಮತ್ತು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯನ್ನು ಪ್ರತಿನಿಧಿಸುವುದು ನನ್ನ ಕನಸಾಗಿದೆ ಎಂದು ಬುರ್ರಾ ಲಾಸ್ಯ ಹೇಳಿದ್ದಾರೆ.