ETV Bharat / bharat

2000 ರೂ. ನೋಟ್​ ಹಿಂಪಡೆದುಕೊಂಡ ಆರ್​ಬಿಐ... ನೋಟು ಇದ್ದವರು ಹೀಗೆ ಮಾಡಿ...! ಭಯಬೇಡ - ಆರ್​ಬಿಐ ಅಭಯ

author img

By

Published : May 19, 2023, 7:11 PM IST

Updated : May 19, 2023, 8:14 PM IST

ಎಲ್ಲಾ ಬ್ಯಾಂಕುಗಳು ಸೆಪ್ಟೆಂಬರ್ 30, 2023 ರವರೆಗೆ 2000 ಬ್ಯಾಂಕ್ ನೋಟುಗಳಿಗೆ ಠೇವಣಿ ಮತ್ತು ಅಥವಾ ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್​ ಘೋಷಿಸಿದೆ. ಯಾರೂ ಈ ಬಗ್ಗೆ ಭಯಪಡುವುದು ಬೇಡ, ನೋಟು ಬದಲಾವಣೆಗೆ ನಾಲ್ಕು ತಿಂಗಳು ಕಾಲಾವಕಾಶ ಇದೆ ಎಂದು, ನಿಮ್ಮ ನೋಟುಗಳನ್ನು ಹತ್ತಿರದ ಶಾಖೆಗಳಿಗೆ ತೆರಳಿ ಬದಲಾಯಿಸಿಕೊಳ್ಳಬಹುದು ಎಂದು ಅಭಯ ನೀಡಿದೆ

Etv Bharat
Etv Bharat

ನವದೆಹಲಿ: 2000 ಮುಖಬೆಲೆಯ ನೋಟುಗಳ ವಿನಿಮಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳಿಗೆ ಸಲಹೆ ನೀಡಿದೆ. ಮೇ 23, 2023 ರಿಂದ ಪ್ರಾರಂಭವಾಗುವ ಯಾವುದೇ ಬ್ಯಾಂಕ್‌ನಲ್ಲಿ 2000 ರೂ. ನೋಟುಗಳನ್ನು ಇತರ ಮುಖಬೆಲೆಯ ನೋಟುಗಳಾಗಿ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ಇದೇ ವೇಳೆ ಸ್ಪಷ್ಟಪಡಿಸಿದೆ.

ಎಲ್ಲಾ ಬ್ಯಾಂಕುಗಳು ಸೆಪ್ಟೆಂಬರ್ 30, 2023 ರವರೆಗೆ 2000 ರೂ.ಮುಖಬೆಲೆಯ ನೋಟುಗಳಿಗೆ ಬ್ಯಾಂಕ್​ಗಳು ತಮ್ಮ ಶಾಖೆಗಳಲ್ಲಿ ಠೇವಣಿ ಮತ್ತು ಅಥವಾ ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್​ ಘೋಷಿಸಿದೆ. ಯಾರೂ ಕೂಡ ಪ್ಯಾನಿಕ್​ ಆಗಬಾರದು. ಈ ನೋಟುಗಳ ವಿನಿಮಯಕ್ಕೆ ನಾಲ್ಕು ತಿಂಗಳವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಆರ್​ಬಿಐ ತಿಳಿಸಿದೆ.

ಆರ್​ಬಿಐನಿಂದ ಮಹತ್ವದ ನಿರ್ಧಾರ: ಆರ್​ಬಿಐ ಮಹತ್ವದ ನಿರ್ಧಾರಯೊಂದನ್ನು ತೆಗೆದುಕೊಂಡಿದೆ. 2,000 ರೂ. ಮುಖಬೆಲೆಯ ನೋಟ ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿಂತೆಗೆದುಕೊಂಡಿದೆ. ಆದರೆ, 2,000 ರೂ. ಬೆಲೆಯ ಲೀಗಲ್ ಟೆಂಡರ್ ಮುಂದುವರಿಯಲಿದೆ ಎಂದು ಆರ್‌ಸಿಬಿ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 30ರೊಳಗೆ ನಿಮ್ಮ ಬಳಿ ಇರುವ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಬಹುದು. ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 1ರಿಂದ 2,000 ರೂ. ನೋಟುಗಳು ಚಲಾವಣೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದು ಹೊರಡಿಸಿರುವ ಸುತ್ತೋಲೆಯಲ್ಲಿ ದೃಢಪಡಿಸಿದೆ. ಹೀಗಾಗಿ ಯಾರ ಬಳಿ 2 ಸಾವಿರ ರೂ. ಮುಖಬೆಲೆಯ ನೋಟುಗಳ ಸಂಗ್ರಹವಿದೆಯೋ ಅಂತಹವರು ತಕ್ಷಣ ಬ್ಯಾಂಕ್​ಗಳಿಗೆ ಜಮೆ ಮಾಡುವಂತೆ ಆರ್​ಬಿಐ ಕೋರಿಕೊಂಡಿದೆ.

  • Exchange of Rs 2000 banknotes into banknotes of other denominations can be made upto a limit of Rs 20,000 at a time at any bank starting from May 23, 2023, says RBI

    All banks shall provide deposit and/or exchange facility for Rs 2000 banknotes until September 30, 2023: RBI https://t.co/fMTiM5xeCM pic.twitter.com/V7PJeXBIza

    — ANI (@ANI) May 19, 2023 " class="align-text-top noRightClick twitterSection" data="

Exchange of Rs 2000 banknotes into banknotes of other denominations can be made upto a limit of Rs 20,000 at a time at any bank starting from May 23, 2023, says RBI

All banks shall provide deposit and/or exchange facility for Rs 2000 banknotes until September 30, 2023: RBI https://t.co/fMTiM5xeCM pic.twitter.com/V7PJeXBIza

— ANI (@ANI) May 19, 2023 ">

20,000 ರೂ.ವರೆಗೆ ಎರಡು ಸಾವಿರ ಮುಖಬೆಲೆಯ ನೋಟುಗಳಿಗೆ ವಿನಿಮಯ ಅನುಮತಿ: ಕಾರ್ಯಾಚರಣೆಯ ಅನುಕೂಲತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬ್ಯಾಂಕ್ ಶಾಖೆಗಳ ನಿಯಮಿತ ಚಟುವಟಿಕೆಗಳಲ್ಲಿ ಅಡಚಣೆಯನ್ನು ತಪ್ಪಿಸಲು, ಆರ್‌ಬಿಐ 2000 ರೂ. ನೋಟುಗಳನ್ನು ಮೇ 23, 2023 ರಿಂದ ಯಾವುದೇ ಬ್ಯಾಂಕ್‌ನಲ್ಲಿ 20,000 ರೂ.ವರೆಗೆ ಎರಡು ಸಾವಿರ ಮುಖಬೆಲೆಯ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಿದೆ.

2016ರಲ್ಲಿ ನೋಟು ಅಮಾನ್ಯೀಕರಣ: ಇದರ ಹೊರತಾಗಿ, ಮೇ 23ರಿಂದ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ ಒಂದು ಸಮಯದಲ್ಲಿ 20,000 ರೂಪಾಯಿಗಳ ಮಿತಿಯವರೆಗೆ 2000 ರೂಪಾಯಿಗಳ ಬ್ಯಾಂಕ್ ನೋಟುಗಳ ವಿನಿಮಯದ ಸೌಲಭ್ಯವನ್ನು ನೀಡಲಾಗುತ್ತದೆ. ನವೆಂಬರ್ 2016ರಲ್ಲಿ ನೋಟು ಅಮಾನ್ಯೀಕರಣದ ನಂತರ, 2000 ಸಾವಿರದ ನೋಟುಗಳನ್ನು ಪರಿಚಯಿಸಲಾಗಿತ್ತು. ತಕ್ಷಣದ ಕ್ಯೂ ಹಾಗೂ ಹಳೆಯ ನೋಟುಗಳ ಬದಲಿಗೆ ಹೊಸ ನೋಟುಗಳನ್ನು ಪಡೆಯುವ ಸಲುವಾಗಿ ಆಗ ಆರ್​ಬಿಐ ಈ ನೋಟುಗಳನ್ನು ಹೊರ ತಂದಿತ್ತು.

2016 ಕ್ಕೂ ಮೊದಲು ಜಾರಿಯಲ್ಲಿದ್ದ ಅಂದಿನ 500 ಮತ್ತು 1000 ರೂಪಾಯಿಗಳ ನೋಟುಗಳನ್ನು ಅಮಾನ್ಯೀಕರಣ ಮಾಡಲಾಗಿತ್ತು. ಈ ವೇಳೆ, ಭ್ರಷ್ಟಾಚಾರವನ್ನು ಕೊನೆಗೊಳಿಸಲು ಮತ್ತು ನಕಲಿ ನೋಟು ಮುದ್ರಣಕ್ಕೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿಕೊಂಡಿತ್ತು. ನೋಟು ಅಮಾನ್ಯೀಕರಣದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿರೋಧ ಪಕ್ಷಗಳು, ಸರ್ಕಾರ ಯೋಚಿಸದೇ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದವು.

ಇದು ಸರ್ಕಾರಕ್ಕೆ ಯಾವುದೇ ದೊಡ್ಡ ಪ್ರಯೋಜನ ತಂದುಕೊಟ್ಟಿಲ್ಲ ಹಾಗೂ ಬೊಕ್ಕಸಕ್ಕೆ ಹೊರೆ ಎಂದು ವಿರೋಧ ಪಕ್ಷಗಳು ಹರಿಹಾಯ್ದಿದ್ದವು. ಈ ಬಗ್ಗೆ ಸುಪ್ರೀಂಕೋರ್ಟ್​ನಲ್ಲೂ ಸಹ ಪ್ರಶ್ನಿಸಲಾಗಿತ್ತು.

ಎರಡು ಸಾವಿರ ರೂ. ನೋಟು ಹಿಂಪಡೆಯಲು ಪ್ರಮುಖ ಕಾರಣವೇನು?: ಈಗ ಚಲಾವಣೆಯಲ್ಲಿರುವ 2,000ರೂ ಮುಖಬೆಲೆಯ ನೋಟುಗಳಲ್ಲಿ ಶೇ.89ರಷ್ಟು ನೋಟುಗಳನ್ನು 2017ರ ಮಾರ್ಚ್​ಗೂ ಮುನ್ನವೇ ಮುದ್ರಣ ಮಾಡಿ ಬಿಡುಗಡೆಗೊಳಿಸಿದಂತಹವುಗಳಾಗಿವೆ. ಇವುಗಳ ಕಾಲಾವಧಿ 4-5 ವರ್ಷ ಮಾತ್ರ. ಇದರಿಂದ ಈ ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ. 2,000 ರೂಪಾಯಿ ಮುಖ ಬೆಲೆಯ ನೋಟುಗಳ ಚಲಾವಣೆ ಪ್ರಮಾಣ ಕಡಿಮೆ ತೀರಾ ಆಗಿರುವುದು ಒಂದು ಪ್ರಮುಖ ಕಾರಣವಾಗಿದೆ. ಜೊತೆಗೆ ಜನರ ಹಣಕಾಸಿನ ವಹಿವಾಟಿಗೆ ಬೇರೆ ನೋಟುಗಳನ್ನು ಸಾಕಷ್ಟು ಬಳಕೆ ಮಾಡುತ್ತಿರುವುದರಿಂದ ಈ 2,000 ರೂ. ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್​ ಲೋನ್: ಬಡ್ಡಿ ಎಷ್ಟು, ಹೇಗೆ ಸಿಗುತ್ತೆ? ಇಲ್ಲಿದೆ ಮಾಹಿತಿ

ನವದೆಹಲಿ: 2000 ಮುಖಬೆಲೆಯ ನೋಟುಗಳ ವಿನಿಮಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳಿಗೆ ಸಲಹೆ ನೀಡಿದೆ. ಮೇ 23, 2023 ರಿಂದ ಪ್ರಾರಂಭವಾಗುವ ಯಾವುದೇ ಬ್ಯಾಂಕ್‌ನಲ್ಲಿ 2000 ರೂ. ನೋಟುಗಳನ್ನು ಇತರ ಮುಖಬೆಲೆಯ ನೋಟುಗಳಾಗಿ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ಇದೇ ವೇಳೆ ಸ್ಪಷ್ಟಪಡಿಸಿದೆ.

ಎಲ್ಲಾ ಬ್ಯಾಂಕುಗಳು ಸೆಪ್ಟೆಂಬರ್ 30, 2023 ರವರೆಗೆ 2000 ರೂ.ಮುಖಬೆಲೆಯ ನೋಟುಗಳಿಗೆ ಬ್ಯಾಂಕ್​ಗಳು ತಮ್ಮ ಶಾಖೆಗಳಲ್ಲಿ ಠೇವಣಿ ಮತ್ತು ಅಥವಾ ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್​ ಘೋಷಿಸಿದೆ. ಯಾರೂ ಕೂಡ ಪ್ಯಾನಿಕ್​ ಆಗಬಾರದು. ಈ ನೋಟುಗಳ ವಿನಿಮಯಕ್ಕೆ ನಾಲ್ಕು ತಿಂಗಳವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಆರ್​ಬಿಐ ತಿಳಿಸಿದೆ.

ಆರ್​ಬಿಐನಿಂದ ಮಹತ್ವದ ನಿರ್ಧಾರ: ಆರ್​ಬಿಐ ಮಹತ್ವದ ನಿರ್ಧಾರಯೊಂದನ್ನು ತೆಗೆದುಕೊಂಡಿದೆ. 2,000 ರೂ. ಮುಖಬೆಲೆಯ ನೋಟ ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿಂತೆಗೆದುಕೊಂಡಿದೆ. ಆದರೆ, 2,000 ರೂ. ಬೆಲೆಯ ಲೀಗಲ್ ಟೆಂಡರ್ ಮುಂದುವರಿಯಲಿದೆ ಎಂದು ಆರ್‌ಸಿಬಿ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 30ರೊಳಗೆ ನಿಮ್ಮ ಬಳಿ ಇರುವ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಬಹುದು. ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 1ರಿಂದ 2,000 ರೂ. ನೋಟುಗಳು ಚಲಾವಣೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದು ಹೊರಡಿಸಿರುವ ಸುತ್ತೋಲೆಯಲ್ಲಿ ದೃಢಪಡಿಸಿದೆ. ಹೀಗಾಗಿ ಯಾರ ಬಳಿ 2 ಸಾವಿರ ರೂ. ಮುಖಬೆಲೆಯ ನೋಟುಗಳ ಸಂಗ್ರಹವಿದೆಯೋ ಅಂತಹವರು ತಕ್ಷಣ ಬ್ಯಾಂಕ್​ಗಳಿಗೆ ಜಮೆ ಮಾಡುವಂತೆ ಆರ್​ಬಿಐ ಕೋರಿಕೊಂಡಿದೆ.

  • Exchange of Rs 2000 banknotes into banknotes of other denominations can be made upto a limit of Rs 20,000 at a time at any bank starting from May 23, 2023, says RBI

    All banks shall provide deposit and/or exchange facility for Rs 2000 banknotes until September 30, 2023: RBI https://t.co/fMTiM5xeCM pic.twitter.com/V7PJeXBIza

    — ANI (@ANI) May 19, 2023 " class="align-text-top noRightClick twitterSection" data=" ">

20,000 ರೂ.ವರೆಗೆ ಎರಡು ಸಾವಿರ ಮುಖಬೆಲೆಯ ನೋಟುಗಳಿಗೆ ವಿನಿಮಯ ಅನುಮತಿ: ಕಾರ್ಯಾಚರಣೆಯ ಅನುಕೂಲತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬ್ಯಾಂಕ್ ಶಾಖೆಗಳ ನಿಯಮಿತ ಚಟುವಟಿಕೆಗಳಲ್ಲಿ ಅಡಚಣೆಯನ್ನು ತಪ್ಪಿಸಲು, ಆರ್‌ಬಿಐ 2000 ರೂ. ನೋಟುಗಳನ್ನು ಮೇ 23, 2023 ರಿಂದ ಯಾವುದೇ ಬ್ಯಾಂಕ್‌ನಲ್ಲಿ 20,000 ರೂ.ವರೆಗೆ ಎರಡು ಸಾವಿರ ಮುಖಬೆಲೆಯ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಿದೆ.

2016ರಲ್ಲಿ ನೋಟು ಅಮಾನ್ಯೀಕರಣ: ಇದರ ಹೊರತಾಗಿ, ಮೇ 23ರಿಂದ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ ಒಂದು ಸಮಯದಲ್ಲಿ 20,000 ರೂಪಾಯಿಗಳ ಮಿತಿಯವರೆಗೆ 2000 ರೂಪಾಯಿಗಳ ಬ್ಯಾಂಕ್ ನೋಟುಗಳ ವಿನಿಮಯದ ಸೌಲಭ್ಯವನ್ನು ನೀಡಲಾಗುತ್ತದೆ. ನವೆಂಬರ್ 2016ರಲ್ಲಿ ನೋಟು ಅಮಾನ್ಯೀಕರಣದ ನಂತರ, 2000 ಸಾವಿರದ ನೋಟುಗಳನ್ನು ಪರಿಚಯಿಸಲಾಗಿತ್ತು. ತಕ್ಷಣದ ಕ್ಯೂ ಹಾಗೂ ಹಳೆಯ ನೋಟುಗಳ ಬದಲಿಗೆ ಹೊಸ ನೋಟುಗಳನ್ನು ಪಡೆಯುವ ಸಲುವಾಗಿ ಆಗ ಆರ್​ಬಿಐ ಈ ನೋಟುಗಳನ್ನು ಹೊರ ತಂದಿತ್ತು.

2016 ಕ್ಕೂ ಮೊದಲು ಜಾರಿಯಲ್ಲಿದ್ದ ಅಂದಿನ 500 ಮತ್ತು 1000 ರೂಪಾಯಿಗಳ ನೋಟುಗಳನ್ನು ಅಮಾನ್ಯೀಕರಣ ಮಾಡಲಾಗಿತ್ತು. ಈ ವೇಳೆ, ಭ್ರಷ್ಟಾಚಾರವನ್ನು ಕೊನೆಗೊಳಿಸಲು ಮತ್ತು ನಕಲಿ ನೋಟು ಮುದ್ರಣಕ್ಕೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿಕೊಂಡಿತ್ತು. ನೋಟು ಅಮಾನ್ಯೀಕರಣದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿರೋಧ ಪಕ್ಷಗಳು, ಸರ್ಕಾರ ಯೋಚಿಸದೇ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದವು.

ಇದು ಸರ್ಕಾರಕ್ಕೆ ಯಾವುದೇ ದೊಡ್ಡ ಪ್ರಯೋಜನ ತಂದುಕೊಟ್ಟಿಲ್ಲ ಹಾಗೂ ಬೊಕ್ಕಸಕ್ಕೆ ಹೊರೆ ಎಂದು ವಿರೋಧ ಪಕ್ಷಗಳು ಹರಿಹಾಯ್ದಿದ್ದವು. ಈ ಬಗ್ಗೆ ಸುಪ್ರೀಂಕೋರ್ಟ್​ನಲ್ಲೂ ಸಹ ಪ್ರಶ್ನಿಸಲಾಗಿತ್ತು.

ಎರಡು ಸಾವಿರ ರೂ. ನೋಟು ಹಿಂಪಡೆಯಲು ಪ್ರಮುಖ ಕಾರಣವೇನು?: ಈಗ ಚಲಾವಣೆಯಲ್ಲಿರುವ 2,000ರೂ ಮುಖಬೆಲೆಯ ನೋಟುಗಳಲ್ಲಿ ಶೇ.89ರಷ್ಟು ನೋಟುಗಳನ್ನು 2017ರ ಮಾರ್ಚ್​ಗೂ ಮುನ್ನವೇ ಮುದ್ರಣ ಮಾಡಿ ಬಿಡುಗಡೆಗೊಳಿಸಿದಂತಹವುಗಳಾಗಿವೆ. ಇವುಗಳ ಕಾಲಾವಧಿ 4-5 ವರ್ಷ ಮಾತ್ರ. ಇದರಿಂದ ಈ ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ. 2,000 ರೂಪಾಯಿ ಮುಖ ಬೆಲೆಯ ನೋಟುಗಳ ಚಲಾವಣೆ ಪ್ರಮಾಣ ಕಡಿಮೆ ತೀರಾ ಆಗಿರುವುದು ಒಂದು ಪ್ರಮುಖ ಕಾರಣವಾಗಿದೆ. ಜೊತೆಗೆ ಜನರ ಹಣಕಾಸಿನ ವಹಿವಾಟಿಗೆ ಬೇರೆ ನೋಟುಗಳನ್ನು ಸಾಕಷ್ಟು ಬಳಕೆ ಮಾಡುತ್ತಿರುವುದರಿಂದ ಈ 2,000 ರೂ. ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್​ ಲೋನ್: ಬಡ್ಡಿ ಎಷ್ಟು, ಹೇಗೆ ಸಿಗುತ್ತೆ? ಇಲ್ಲಿದೆ ಮಾಹಿತಿ

Last Updated : May 19, 2023, 8:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.