ಬೀರ್ಭೂಮ್ (ಪಶ್ಚಿಮ ಬಂಗಾಳ): ಬೀರ್ಭೂಮ್ ಜಿಲ್ಲೆಯ ಸರ್ಕಾರಿ ಸಮುದಾಯ ಭವನದಲ್ಲಿ ಸುಮಾರು 200 ಬಾಂಬ್ಗಳು ಪತ್ತೆಯಾಗಿದ್ದು, ಪೊಲೀಸರು ಅವನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಈ ಸಮುದಾಯ ಭವನವು ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಬೀರ್ಭೂಮ್ ಜಿಲ್ಲಾಧ್ಯಕ್ಷ ಅನುಬ್ರತಾ ಮೊಂಡಾಲ್ ಅವರ ಗ್ರಾಮವಾದ ನಾನೂರ್ನಲ್ಲಿದೆ. ನಿಖರ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಅಲ್ಲಿ 200 ಬಾಂಬ್ಗಳು ಹಾಗೂ ಬಾಂಬ್ ತಯಾರಕಾ ವಸ್ತುಗಳು ಪತ್ತೆಯಾಗಿವೆ.
ಇದನ್ನೂ ಓದಿ: ಬ್ಯಾಂಕ್ ಖಾತೆಗೆ ನಕಲಿ ಹಣ ಜಮಾ ಮಾಡಲು ಬಂದಿದ್ದ ಮಹಿಳೆ ಅರೆಸ್ಟ್
ಪ್ರಕರಣ ಸಂಬಂಧ ಮೂವರನ್ನು ಬಂಧಿಸಿರುವ ಪೊಲೀಸರು, ಸಿಐಡಿ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸೇರಿ ಗ್ರಾಮದ ಹೊರಗಿನ ಮೈದಾನದಲ್ಲಿ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಇಂದು 4ನೇ ಹಂತದ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, 44 ಕ್ಷೇತ್ರಗಳಿಗೆ ಮತದಾನವಾಗುತ್ತಿದೆ.