ETV Bharat / bharat

20 ವರ್ಷಗಳಿಂದ ನಾಪತ್ತೆಯಾದ ಮಕ್ಕಳು: ಕರುಳ ಕುಡಿಗಳನ್ನು ಕಾಣಲು ಹಪಹಪಿಸುತ್ತಿದ್ದಾರೆ ಹೆತ್ತವರು

author img

By

Published : Sep 21, 2021, 9:53 AM IST

Updated : Sep 21, 2021, 10:36 AM IST

ಮಹಮ್ಮದ್ ಶಫಿ ರಾಹ್ (30) ಮತ್ತು ಮುಷ್ತಾಕ್ ಅಹ್ಮದ್ ರಾಹ್ (25) ಎಂಬ ಇಬ್ಬರು ಮಕ್ಕಳನ್ನು ನೋಡಲು ವೃದ್ಧ ತಂದೆ ತಾಯಿ ಕಳೆದ 20 ವರ್ಷಗಳಿಂದ ಕಾಯುತ್ತಿದ್ದಾರೆ.

Srinagar
ಕರುಳ ಕುಡಿಗಳನ್ನು ಕಾಣಲು ಹಪಹಪಿಸುತ್ತಿದೆ ಹೆತ್ತ ಕರುಳು

ಶ್ರೀನಗರ (ಜಮ್ಮು-ಕಾಶ್ಮೀರ): ಅಬ್ದುಲ್ ಅಹದ್ ರಾಹ್ ಮತ್ತು ಅವರ ಪತ್ನಿ ಖದೀಜಾ ಎಂಬವರು ಕಳೆದ ಎರಡು ದಶಕಗಳಿಂದ ತಮ್ಮ ಇಬ್ಬರು ಪತ್ತೆಯಾಗದ ಮಕ್ಕಳನ್ನು ನೋಡಲು ಹಪಹಪಿಸುತ್ತಿದ್ದಾರೆ. ಅನೇಕ ರೋಗಗಳಿಂದ ಬಳಲುತ್ತಿರುವ ಈ ವೃದ್ಧ ದಂಪತಿ ಸಾವು ಬರುವ ಮುನ್ನ ತಮ್ಮ ಮಕ್ಕಳನ್ನು ನೋಡಬೇಕೆಂದು ನೋವಿನಿಂದ ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.

ರಾಹ್ ಅವರ ಇಬ್ಬರು ಪುತ್ರರಾದ ಮಹಮ್ಮದ್ ಶಫಿ ರಾಹ್ (30) ಮತ್ತು ಮುಷ್ತಾಕ್ ಅಹ್ಮದ್ ರಾಹ್ (25) 1995ರಲ್ಲಿ ಶ್ರೀನಗರವನ್ನು ಬಿಟ್ಟು ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಉದ್ಯೋಗ ಹುಡುಕಿಕೊಂಡು ತೆರಳಿದ್ದರು. ಅಲ್ಲಿ ಅವರಿಗೆ ಟ್ಯಾನರಿಯಲ್ಲಿ ಕೆಲಸ ಸಿಕ್ಕಿತ್ತು.

ಆದರೆ, ಸೆಪ್ಟೆಂಬರ್ 5, 2000ದಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ (ಐಸಿ -814) ಹೈಜಾಕ್​ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನೇಪಾಳದಲ್ಲಿ ದಾಳಿ ನಡೆಸಿ ಅನೇಕ ಕಾಶ್ಮೀರಿ ಉದ್ಯಮಿಗಳನ್ನು ಬಂಧಿಸಿದರು. ಆ ಬಳಿಕ ಅವರಲ್ಲಿ ಅನೇಕರನ್ನು ಬಿಡುಗಡೆ ಮಾಡಿದರೂ 20 ವರ್ಷಗಳಾದರೂ ಇವರ ಮಕ್ಕಳು ಪತ್ತೆಯಾಗಿಲ್ಲ.

ಮಕ್ಕಳ ಕಣ್ಮರೆ ಬಗ್ಗೆ ರಾಹ್​ ಹೇಳಿದ್ದೇನು?

ಈ ಬಗ್ಗೆ ಅಬ್ದುಲ್ ಅಹದ್ ರಾಹ್ ಮಾತನಾಡಿದ್ದಾರೆ. "ನನ್ನ ಪುತ್ರರ ಬಂಧನದ ಸುದ್ದಿ ತಿಳಿದಾಗ ನಾನು ತಕ್ಷಣ ನೇಪಾಳಕ್ಕೆ ಹೋದೆ. ಅಲ್ಲಿ ಅವರನ್ನು ಜೋಧ್‌ಪುರ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಯಿತು. ನಂತರ ನಾನು ನನ್ನ ಸಹೋದರನೊಂದಿಗೆ ಜೋಧಪುರಕ್ಕೆ ತೆರಳಿದೆ. ಮೊದಲಿಗೆ ನನ್ನ ಪುತ್ರರು ಒಂದೇ ಜೈಲಿನಲ್ಲಿರುವುದಾಗಿ ಅಲ್ಲಿನ ಅಧಿಕಾರಿಗಳು ಹೇಳಿದರು. ಆ ಬಳಿಕ ಶ್ರೀನಗರದಿಂದ ಅಫಿಡವಿಟ್ ತರುವಂತೆ ಅಧಿಕಾರಿಗಳು ಸೂಚಿಸಿದರು. ಅದರಂತೆ ನಾನು ಅಫಿಡವಿಡ್​ ತೆಗೆದುಕೊಂಡು ಹೋದೆ" ಎಂದರು.

"ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಜೋಧ್‌ಪುರ ಜೈಲಿಗೆ ಹೋದಾಗ ಅವರು ನನ್ನ ಮಕ್ಕಳನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ. ಯಾವುದೇ ಸಂದರ್ಶಕರನ್ನು ಅನುಮತಿಸದಂತೆ ಶ್ರೀನಗರ ಆಡಳಿತವು ನಮಗೆ ಸೂಚನೆ ನೀಡಿದೆ ಅಂತ ಅವರು ಹೇಳಿದರು" ಎಂದರು.

"ಜೋಧಪುರದಲ್ಲಿ ಸಿಐಡಿ ಕೂಡ ನಮಗೆ ಬೆದರಿಕೆ ಹಾಕಿತು. ಜೋಧ್‌ಪುರ ಜೈಲಿನ ಮೇಲೆ ದಾಳಿಯಾಗುತ್ತದೆ ಎಂಬ ಸುದ್ದಿಯಿದೆ. ಆದ್ದರಿಂದ ಹಿಂತಿರುಗಿ. ಇಲ್ಲದಿದ್ದರೆ ಅದೇ ಆರೋಪದ ಮೇಲೆ ನಾವು ನಿಮ್ಮನ್ನು ಬಂಧಿಸುತ್ತೇವೆ ಎಂದು ಬೆದರಿಸಿದರು" ಅಂತ ರಾಹ್​ ಕಣ್ಣೀರು ಸುರಿಸಿದರು.

ನಾನು ಸಾಯುವ ಮುನ್ನ ಮಕ್ಕಳನ್ನು ನೋಡಬೇಕು: ತಮ್ಮ ಮಕ್ಕಳನ್ನು ಕಾಪಾಡಲು ನ್ಯಾಯ ಒದಗಿಸಿಕೊಡುವಂತೆ ಅನೇಕರ ಬಳಿ ರಾಹ್​ ಮನವಿ ಮಾಡಿಕೊಂಡರೂ ಏನೂ ಪ್ರಯೋಜನವಾಗಲಿಲ್ಲ. "ನನ್ನ ಮಕ್ಕಳ ತಪ್ಪು ಏನು ಎಂದು ಹೇಳಿ. ಒಮ್ಮೆ ಅವರನ್ನು ಭೇಟಿಯಾಗಲು ನನಗೆ ಅವಕಾಶ ಮಾಡಿಕೊಡಿ. ನಾನು ಅನೇಕ ರೋಗಗಳಿಂದ ಬಳಲುತ್ತಿದ್ದೇನೆ. ನಾನು ಎಲ್ಲರನ್ನೂ ಭೇಟಿಯಾಗಿದ್ದೇನೆ. ಆದರೆ ನನ್ನ ಮಕ್ಕಳ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ನನಗೆ ಭರವಸೆ ಮಾತ್ರ ಸಿಕ್ಕಿದೆ. ಅದು ಬಿಟ್ಟರೆ ಬೇರೇನೂ ಇಲ್ಲ. ಅವರ ತಪ್ಪೇನು? ನನಗೆ ನ್ಯಾಯ ಬೇಕು.

ನಾನು ಸಾಯುವ ಮುನ್ನ ನನ್ನ ಮಕ್ಕಳನ್ನು ಕೊನೆಯ ಬಾರಿ ನೋಡಲು ಬಯಸುತ್ತೇನೆ. ನಾನು ನನ್ನ ಹಣವನ್ನೆಲ್ಲ ಶಫಿ ಮತ್ತು ಮುಷ್ತಾಕ್​ನ ಹುಡುಕಾಟದಲ್ಲೇ ವ್ಯಯಿಸಿದ್ದೇನೆ. ಈಗ ಈ ಮನೆ ಮಾತ್ರ ಉಳಿದಿದೆ. ಬೇಕಾದರೆ ನಾನು ಅದನ್ನು ಕೂಡ ಮಾರುತ್ತೇನೆ. ನನಗೆ ನ್ಯಾಯ ಬೇಕು" ಎಂದು ರಾಹ್ ಅಳಲು ತೋಡಿಕೊಂಡರು.

ಬಂಧನಕ್ಕೊಳಗಾದವರ ಬಿಡುಗಡೆ ಆಗಿದೆ

"ಬಂಧನಕ್ಕೆ ಒಳಗಾದವರಲ್ಲಿ ಅನೇಕರನ್ನು ಬಿಡುಗಡೆ ಮಾಡಲಾಗಿದೆ. ಆದರೆ ನನ್ನ ಪುತ್ರರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಬಹುಶಃ ಅವರ ಮೇಲೆ ಒತ್ತಡವಿರಬಹುದು" ಎಂದು ಹೇಳಿದರು. ಇನ್ನು ತಾಯಿ ಖದೀಜಾ ಮಾತನಾಡಿ, "ನಮ್ಮ ಮನೆಯ ಮೇಲೆ ಒಮ್ಮೆ ಪೊಲೀಸರು ದಾಳಿ ನಡೆಸಿದ್ದರು. ನನ್ನ ಪತಿಯನ್ನು ಐದು ದಿನಗಳ ಕಾಲ ಕಾರ್ಗೋದಲ್ಲಿ ಬಂಧಿಸಿಟ್ಟಿದ್ದರು. ಆತನನ್ನು ಬಹಳಷ್ಟು ವಿಚಾರಣೆಗೆ ಒಳಪಡಿಸಿದರು" ಎಂದು ಹೇಳಿದರು.

"ನನ್ನ ಇನ್ನಿಬ್ಬರು ಗಂಡು ಮಕ್ಕಳು ಮನೆ ನೋಡಿಕೊಳ್ಳುತ್ತಿದ್ದಾರೆ. ನನ್ನ ಪತಿಯ ಆರೋಗ್ಯ ಸರಿಯಿಲ್ಲ. ಕಳೆದ ಎರಡು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಅವರಿಗೆ ಹೃದಯ, ಮೂತ್ರಪಿಂಡ ಮತ್ತು ಕೀಲು ನೋವಿನ ಸಮಸ್ತೆ ಇದೆ. ನಾನೂ ಸಹ ಅನಾರೋಗ್ಯ ಪೀಡಿತೆ" ಎಂದು ಕಣ್ಣೀರು ಸುರಿಸಿದ್ದಾರೆ.

Last Updated : Sep 21, 2021, 10:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.