ಕೊಲ್ಹಾಪುರ( ಮಹಾರಾಷ್ಟ್ರ): ಕೊರೊನಾ ಸಂಕಷ್ಟದ ಕಾಲದಲ್ಲಿ ಕೊಲ್ಹಾಪುರದ ಯುವತಿಯೊಬ್ಬಳು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಚಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾಳೆ. ಕೇವಲ ಡ್ರೈವರ್ ಆಗಿ ಮಾತ್ರವಲ್ಲ ಮೃತ ರೋಗಿಗಳ ದೇಹವನ್ನು ಸ್ವತಃ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆಗೆ ಸಹಕಾರ ನೀಡುತ್ತಿದ್ದಾಳೆ.
ಕೊಲ್ಹಾಪುರದ ಕಡಮ್ವಾಡಿಯಲ್ಲಿರುವ ಸಾಮಾನ್ಯ ಕುಟುಂಬದಿಂದ ಬಂದ ಪ್ರಿಯಾ ಪಾಟೀಲ್ ಕಳೆದ ಒಂದು ವಾರದಿಂದ ಶವ ಸಾಗಿಸುವ ವಾಹನದ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಎಸ್ಸಿ ವಿದ್ಯಾರ್ಥಿನಿಯಾಗಿರುವ ಪ್ರಿಯಾ ಪಾಟೀಲ್ ಈ ಬಗ್ಗೆ ಮಾತನಾಡಿ, ನಾವು ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ. ಕೊರೊನಾ ಸಮಯದಲ್ಲಿ ನಿಮ್ಮ ಕೈಲಾದ ಸೇವೆ ಮಾಡಿ ಎಂದಿದ್ದಾಳೆ. . ಪ್ರಿಯಾಳ ತಂದೆಯ ಸ್ನೇಹಿತರೊಬ್ಬರು ಕೊರೊನಾದಿಂದ ಮೃತಪಟ್ಟಿದ್ದರು. ಆದರೆ ದೇಹವನ್ನು ಸರಿಯಾದ ಸಮಯಕ್ಕೆ ಅಂತ್ಯಸಂಸ್ಕಾರ ಮಾಡಲಾಗಲಿಲ್ಲ. ಇದರಿಂದ ಪ್ರಿಯಾ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂದು ಸಂಕಲ್ಪ ಮಾಡಿದ್ದಾಳೆ.
ಪ್ರಿಯಾ ಪಾಟೀಲ್ ಮುನ್ಸಿಪಲ್ ಕಾರ್ಪೊರೇಷನ್ ವಾಹನದಲ್ಲಿ ಚಾಲಕಿಯಾಗಿ ಕೆಲಸ ಮಾಡುವ ಬಯಕೆಯ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಭವಾನಿ ಫೌಂಡೇಶನ್‌ನ ವಿಚಾರಣೆಯ ಬಗ್ಗೆ ಎಂಎನ್‌ಸಿಗೆ ತಿಳಿದಾಗ ಅಧಿಕಾರಿಗಳು ಹರ್ಷಲ್ ಸರ್ವ್ ಅವರನ್ನು ಸಂಪರ್ಕಿಸಿದ್ದರು. 20 ವರ್ಷದ ಯುವತಿ ಡ್ರೈವರ್ ಆಗಿ ಕೆಲಸ ಮಾಡುತ್ತಾಳೆ ಎಂದಾಗ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದರಂತೆ.
ಓದಿ:ಆಟೋ ಚಾಲಕನಿಂದ ಬಲವಂತದ ಸೆಕ್ಸ್.. ಕಡಬದಲ್ಲಿ ಗರ್ಭಿಣಿಯಾದ ಯುವತಿ, ಆರೋಪಿ ಅರೆಸ್ಟ್