ETV Bharat / bharat

ಪ್ರಾಣಿಗಳಿಗೂ ಮಾರಕವಾದ ಪ್ಲಾಸ್ಟಿಕ್​.. ಹಸುವಿನ ಹೊಟ್ಟೆಯಲ್ಲಿತ್ತು ಬರೋಬ್ಬರಿ 20 ಕೆಜಿ ಪ್ಲಾಸ್ಟಿಕ್​! - 20 kg plastic in cow stomach in Andhra Pradesh

ಆಂಧ್ರಪ್ರದೇಶದ ಆದಿಲಾಬಾದ್​ ಜಿಲ್ಲೆಯ ಇಚೋಡ ಮಂಡಲದ ಅಡೆಗಾಮ ಎಂಬಲ್ಲಿ ಬರೋಬ್ಬರಿ 20 ಕೆಜಿ ಪ್ಲಾಸ್ಟಿಕ್​ ತ್ಯಾಜ್ಯ ಹಸುವಿನ ಹೊಟ್ಟೆ ಹೊಕ್ಕಿದೆ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಪ್ಲಾಸ್ಟಿಕ್​ ಹೊರತೆಗೆದಿದ್ದಾರೆ.

plastic-in-cow-
ಆಂಧ್ರಪ್ರದೇಶದ ಹಸು
author img

By

Published : Jan 19, 2022, 6:05 PM IST

ಅಮರಾವತಿ(ಆಂಧ್ರಪ್ರದೇಶ): ಪ್ಲಾಸ್ಟಿಕ್​ ಬಳಕೆಗೆ ಸರ್ಕಾರ ಎಷ್ಟೇ ಕಡಿವಾಣ ಹಾಕಿದರೂ ಜನರು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಮಾರಕ ಪ್ಲಾಸ್ಟಿಕ್​ ಪ್ರಾಣಿಗಳ ಜೀವಕ್ಕೆ ಕುತ್ತು ತಂದ ಹಲವು ಘಟನೆಗಳೂ ನಡೆದಿವೆ. ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಆಂಧ್ರಪ್ರದೇಶದ ಆದಿಲಾಬಾದ್​ ಜಿಲ್ಲೆಯ ಇಚೋಡ ಮಂಡಲದ ಅಡೆಗಾಮ ಎಂಬಲ್ಲಿ ಬರೋಬ್ಬರಿ 20 ಕೆಜಿ ಪ್ಲಾಸ್ಟಿಕ್​ ತ್ಯಾಜ್ಯ ಹಸುವಿನ ಹೊಟ್ಟೆಯಲ್ಲಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಈ ಪ್ಲಾಸ್ಟಿಕ್​ಅನ್ನು ಹೊರತೆಗೆದಿದ್ದಾರೆ.

ಕಳೆದ 10 ದಿನಗಳಿಂದ ಹಸು ಸರಿಯಾಗಿ ಹಾಲು ಕೊಡದೇ, ಹೊಟ್ಟೆ ಉಬ್ಬರದಿಂದ ಬಳಲುತ್ತಿತ್ತು. ಇದನ್ನು ಗಮನಿಸಿದ ಹಸುವಿನ ಮಾಲೀಕ ಪಶು ವೈದ್ಯರನ್ನು ಪರೀಕ್ಷಿಸಿದಾಗ ಹೊಟ್ಟೆಯಲ್ಲಿ ಪ್ಲಾಸ್ಟಿಕ್​ ಇರುವುದು ಗೊತ್ತಾಗಿದೆ. ಬಳಿಕ ಶಸ್ತ್ರಚಿಕಿತ್ಸೆ ನಡೆಸಿದಾಗ ಹಸುವಿನ ಹೊಟ್ಟೆಯಿಂದ ಬರೋಬ್ಬರಿ 20 ಕೆಜಿ ತ್ಯಾಜ್ಯ ಹೊರಬಂದಿದೆ. ನರಳಾಡುತ್ತಿದ್ದ ಮೂಕಪ್ರಾಣಿಯ ಜೀವ ಉಳಿದಿದೆ.

ಹಸು ಮೇಯಲು ಹೊರಬಿಟ್ಟಾಗ ಪ್ಲಾಸ್ಟಿಕ್​ ತ್ಯಾಜ್ಯವನ್ನು ತಿಂದ ಕಾರಣ ಅದು ಹೊಟ್ಟೆಯಲ್ಲಿ ಕರಗದೇ ಉಳಿದುಕೊಂಡ ಪರಿಣಾಮ ಹೊಟ್ಟೆ ಊದಿಕೊಂಡು ಒದ್ದಾಡುತ್ತಿತ್ತು. ಇದೀಗ ಶಸ್ತ್ರಚಿಕಿತ್ಸೆ ಮಾಡಿ ಪ್ಲಾಸ್ಟಿಕ್​ ತ್ಯಾಜ್ಯವನ್ನು ಹೊರತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇತ್ತೀಚೆಗೆ ಶ್ರೀಲಂಕಾದಲ್ಲಿ ಕೆಲ ವರ್ಷಗಳ ಅವಧಿಯಲ್ಲಿ 20 ಆನೆಗಳು ಪ್ಲಾಸ್ಟಿಕ್​ ತ್ಯಾಜ್ಯ ಸೇವಿಸಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು.

ಇದನ್ನೂ ಓದಿ: ಸಿಎಂ ಮನೆ ಮುಂದೆ ಕಾನ್ಸ್​ಟೇಬಲ್​ಗಳಿಂದ ಗಾಂಜಾ ಮಾರಾಟ : ಇನ್ಸ್​ಪೆಕ್ಟರ್, ಸಬ್ ಇನ್ಸ್​ಪೆಕ್ಟರ್ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.