ETV Bharat / bharat

ನಾಗರಶೈಲಿಯಲ್ಲಿ ಕಣ್ಮನ ಸೆಳೆಯುವ ಅಯೋಧ್ಯೆಯ ಭವ್ಯ ರಾಮಮಂದಿರ: ಅದರ ವೈಶಿಷ್ಟ್ಯಗಳಿವು ಇಲ್ಲಿವೆ - ನಾಗರಶೈಲಿಯ ಮಂದಿರ

ದೇಶದ ಅಸ್ಮಿತೆಯಾಗಿರುವ ಭವ್ಯ ರಾಮಮಂದಿರ ಹೇಗಿದೆ ಎಂಬುದು ಭಕ್ತರ ಕುತೂಹಲ. ಅಲ್ಲಿನ ಕೆಲ ವೈಶಿಷ್ಟ್ಯಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಂಚಿಕೊಂಡಿದೆ.

ಭವ್ಯ ರಾಮಮಂದಿರ
ಭವ್ಯ ರಾಮಮಂದಿರ
author img

By ETV Bharat Karnataka Team

Published : Jan 4, 2024, 1:04 PM IST

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ಜನವರಿ 22 ರಂದು ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಇದು ದೇಶ, ವಿದೇಶಗಳಲ್ಲಿರುವ ರಾಮ ಭಕ್ತರನ್ನು ತುದಿಗಾಲ ಮೇಲೆ ನಿಲ್ಲಿಸಿದೆ. ಶತಮಾನಗಳಿಂದ ಹೋರಾಟ ನಡೆಸಿಕೊಂಡು ಬಂದು ಈಗ ತಲೆಎತ್ತಿರುವ ರಾಮಮಂದಿರ ಹೇಗಿದೆ. ಅಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದು ಎಲ್ಲ ಭಕ್ತರಲ್ಲಿರುವ ಕುತೂಹಲ.

ಇದನ್ನು ತಣಿಸಲು ರಾಮಮಂದಿರ ನಿರ್ಮಾಣ ಮತ್ತು ನಿರ್ವಹಣೆಯ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಂದಿರದ ಕೆಲವು ವಿಶೇಷತೆಗಳನ್ನು ಬಹಿರಂಗಪಡಿಸಿದೆ. ದೇವಾಲಯವು ಸಾಂಪ್ರದಾಯಿಕ ನಾಗರ ಶೈಲಿಯ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವ ಅತ್ಯದ್ಭುತ ರಚನೆಯಾಗಿದೆ. ಕಣ್ಣು ಕುಕ್ಕುವ ಕಲಾ ಶೈಲಿ, ಮಂಟಪಗಳು ಭಕ್ತರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ.

ರಾಮಮಂದಿರದ 20 ವೈಶಿಷ್ಟ್ಯಗಳು ಇಲ್ಲಿವೆ:

  1. ಮಂದಿರವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ.
  2. 380 ಅಡಿ ಉದ್ದ (ಪೂರ್ವ-ಪಶ್ಚಿಮ), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ.
  3. ಕಟ್ಟಡವು ಮೂರು ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿಯು 20 ಅಡಿ ಎತ್ತರವಿದೆ. ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ.
  4. ಮುಖ್ಯ ಗರ್ಭಗುಡಿಯಲ್ಲಿ ಬಾಲರಾಮನ ಸ್ಥಾಪಿಸಲಾಗುತ್ತದೆ. ಮೊದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ಇದೆ.
  5. ಸಭಾಂಗಣವು ನೃತ್ಯ, ರಂಗ, ಸಭಾ, ಪ್ರಾರ್ಥನಾ ಮತ್ತು ಕೀರ್ತನ ಎಂಬ ಐದು ಮಂಟಪಗಳಿಂದ ಕೂಡಿದೆ.
  6. ದೇವಾನುದೇವತೆಗಳನ್ನು ಸ್ತಂಭಗಳು, ಗೋಡೆಗಳ ಮೇಲೆ ಕೆತ್ತಲಾಗಿದೆ.
  7. ಪೂರ್ವ ಭಾಗದಲ್ಲಿ ಪ್ರವೇಶ ದ್ವಾರವಿದೆ. ಅದನ್ನು 32 ಮೆಟ್ಟಿಲುಗಳಿಂದ ಹತ್ತಿ ಬರಬೇಕು.
  8. ವಿಕಲಚೇತನರು ಮತ್ತು ವೃದ್ಧ ಭಕ್ತರ ಅನುಕೂಲಕ್ಕಾಗಿ ಇಳಿಜಾರು ಮತ್ತು ಲಿಫ್ಟ್‌ಗಳನ್ನು ಅಳವಡಿಸಲಾಗಿದೆ.
  9. ದೇವಾಲಯದ ಸುತ್ತಲಿನ ಗೋಡೆಯು 732 ಮೀಟರ್ ಉದ್ದ ಮತ್ತು 14 ಅಡಿ ಅಗಲವಿದೆ. ಇದನ್ನು ಆಯತಾಕಾರದಲ್ಲಿ ನಿರ್ಮಿಸಲಾಗಿದೆ.
  10. ಆವರಣದ ನಾಲ್ಕು ಮೂಲೆಗಳಲ್ಲಿ ಸೂರ್ಯ, ಭಗವತಿ ದೇವಿ, ಗಣೇಶ ಮತ್ತು ಶಿವನ ನಾಲ್ಕು ದೇಗುಲಗಳಿವೆ. ಉತ್ತರದಲ್ಲಿ ಅನ್ನಪೂರ್ಣ, ದಕ್ಷಿಣದಲ್ಲಿ ನುಮಾನ್ ದೇವಾಲಯವಿದೆ.
  11. ಮಂದಿರದ ಬಳಿ ಐತಿಹಾಸಿಕ ಸೀತಾ ಬಾವಿ (ಸೀತಾ ಕೂಪ್) ಇದೆ.
  12. ಮಂದಿರದ ಸಂಕೀರ್ಣದಲ್ಲಿ ವಾಲ್ಮೀಕಿ, ವಶಿಷ್ಠ, ವಿಶ್ವಾಮಿತ್ರ, ಅಗಸ್ತ್ಯ, ನಿಶಾದ್ ರಾಜ್, ಶಬರಿ ಮತ್ತು ಅಹಲ್ಯಾ ದೇವಿಯ ಮಂದಿರಗಳಿವೆ.
  13. ನೈಋತ್ಯ ಭಾಗದ ಕುಬೇರ್ ತಿಲಾದಲ್ಲಿ ಜಟಾಯುವಿನೊಂದಿನ ವಿಶ್ವರೂಪಿ ಶಿವನ ಪುರಾತನ ಮಂದಿರವಿದೆ.
  14. ದೇವಾಲಯದ ನಿರ್ಮಾಣದಲ್ಲಿ ಎಲ್ಲಿಯೂ ಕಬ್ಬಿಣವನ್ನು ಬಳಸಲಾಗಿಲ್ಲ.
  15. ದೇವಾಲಯದ ಅಡಿಪಾಯವನ್ನು 14 ಮೀಟರ್ ದಪ್ಪದ ರೋಲರ್ ಕಾಂಪ್ಯಾಕ್ಟ್ ಕಾಂಕ್ರೀಟ್ (RCC)ನಿಂದ ನಿರ್ಮಿಸಲಾಗಿದೆ. ಇದು ಕೃತಕ ಬಂಡೆಯಂತೆ ಕಾಣುತ್ತದೆ.
  16. ಭೂಮಿಯಲ್ಲಿನ ತೇವಾಂಶದಿಂದ ರಕ್ಷಿಸಲು 21 ಅಡಿ ಎತ್ತರದ ಸ್ತಂಭಗಳನ್ನು ಗ್ರಾನೈಟ್​​ನಿಂದ ನಿರ್ಮಿಸಲಾಗಿದೆ.
  17. ಒಳಚರಂಡಿ ಸಂಸ್ಕರಣಾ ಘಟಕ, ನೀರು ಸಂಸ್ಕರಣಾ ಘಟಕ, ಅಗ್ನಿ ಸುರಕ್ಷತಾ ಘಟಕ ಹಾಗೂ ಪ್ರತ್ಯೇಕ ವಿದ್ಯುತ್ ಕೇಂದ್ರಗಳಿವೆ.
  18. 25 ಸಾವಿರ ಜನರಿಗಾಗಿ ಭಕ್ತರ ಸೌಲಭ್ಯ ಕೇಂದ್ರ, ವೈದ್ಯಕೀಯ ಸೌಲಭ್ಯಗಳು ಮತ್ತು ಲಾಕರ್ ಸೌಲಭ್ಯಗಳು ಇವೆ.
  19. ಸಂಕೀರ್ಣದಲ್ಲಿ ಸ್ನಾನಗೃಹಗಳು, ಶೌಚಾಲಯಗಳು, ಕೈ ತೊಳೆಯುವ ಬೇಸಿನ್​ಗಳು, ನಲ್ಲಿಗಳ ಪ್ರತ್ಯೇಕ ವ್ಯವಸ್ಥೆ ಇದೆ.
  20. ದೇವಾಲಯವನ್ನು ದೇಶದ ಸಾಂಪ್ರದಾಯಿಕ ಮತ್ತು ಸ್ಥಳೀಯ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಪರಿಸರ, ಜಲ ಸಂರಕ್ಷಣೆಗೆ ನಿರ್ದಿಷ್ಟ ಒತ್ತು ನೀಡಿ 70 ಎಕರೆ ಪ್ರದೇಶದಲ್ಲಿ ಶೇಕಡಾ 70% ರಷ್ಟು ಹಸಿರು ನಿರ್ಮಿಸಲಾಗಿದೆ.

ಇದನ್ನೂ ಓದಿ: AI ಕಣ್ಗಾವಲಿನಲ್ಲಿ ರಾಮಮಂದಿರ; ಅಯೋಧ್ಯೆಯಲ್ಲಿ ಬಿಗಿ ಭದ್ರತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.