ETV Bharat / bharat

ದೆಹಲಿಯ ಡೈರಿ ಫಾರ್ಮ್​ಗೆ ಬೆಂಕಿ ತಗುಲಿ 20 ಗೋವುಗಳ ಸಜೀವ ದಹನ

author img

By

Published : May 14, 2022, 5:39 PM IST

ದೆಹಲಿಯ ಸಾವ್ಡಾ ಗ್ರಾಮದ ಡೈರಿ ಫಾರ್ಮ್​ಗೆ ಬೆಂಕಿ ತಗುಲಿ 20 ಗೋವುಗಳು ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ನಡೆದಿದೆ.

20-cows-burnt
ಗೋವುಗಳು ಸಜೀವ ದಹನ

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಸರಣಿ ಬೆಂಕಿ ಅವಘಡಗಳು ಸಂಭವಿಸುತ್ತಿವೆ. ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿಯಿರುವ ಕಟ್ಟಡವೊಂದರಲ್ಲಿ ಶುಕ್ರವಾರ ಭಾರಿ ಬೆಂಕಿ ಕಾಣಿಸಿಕೊಂಡು 27 ಮಂದಿ ಸಜೀವ ದಹನವಾಗಿದ್ದಾರೆ. ಇದರ ಬೆನ್ನಲ್ಲೇ ಶನಿವಾರ ಡೈರಿ ಫಾರ್ಮ್​ ಬೆಂಕಿಗೆ ಆಹುತಿಯಾಗಿ ಸುಮಾರು 20 ಗೋವುಗಳು ಮೃತಪಟ್ಟ ದಾರುಣ ಘಟನೆ ನಡೆದಿದೆ.

ದೆಹಲಿಯ ಸಾವ್ಡಾ ಗ್ರಾಮದ ಡೈರಿ ಫಾರ್ಮ್‌ನಲ್ಲಿ ಈ ಅವಘಡ ಸಂಭವಿಸಿದೆ. ಮಧ್ಯಾಹ್ನ 1.25 ರ ಸುಮಾರಿಗೆ ಡೈರಿ ಫಾರ್ಮ್​ಗೆ ಬೆಂಕಿ ಹೊತ್ತಿಕೊಂಡಿದೆ. ಫಾರ್ಮ್​ನಲ್ಲಿ ನೂರಾರು ಗೋವುಗಳು ಇದ್ದವು. ಇದರಲ್ಲಿ 20 ಗೋವುಗಳು ಬೆಂಕಿಗೆ ಆಹುತಿಯಾಗಿವೆ.

ಫಾರ್ಮ್​ಗೆ ಬೆಂಕಿ ಹೊತ್ತಕೊಂಡ ಸುದ್ದಿ ತಿಳಿದ ತಕ್ಷಣ 7 ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ ಅಗ್ನಿ ಜ್ವಾಲೆಯನ್ನು ನಂದಿಸುತ್ತಿವೆ. ಬೆಂಕಿ ಹೊತ್ತಿಕೊಂಡ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಓದಿ: ಅಮೃತಸರ್​ ಗುರು ನಾನಕ್ ದೇವ್​ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ದುರಂತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.