ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಹೆಚ್ಚಾಗಿದ್ದು, ಆಕ್ಸಿಜನ್ ಕೊರತೆಯಿಂದಾಗಿ 20 ಮಂದಿ ಕೊರೊನಾ ರೋಗಿಗಳು ಉಸಿರು ನಿಲ್ಲಿಸಿದ್ದಾರೆ.
ಕಳೆದ ರಾತ್ರಿ ಆಕ್ಸಿಜನ್ ಕೊರತೆಯಿಂದ 20 ರೋಗಿಗಳು ಸಾವನ್ನಪ್ಪಿದ್ದಾರೆ. ಈಗ ಕೋವಿಡ್ ರೋಗಿಗಳಿಗೆ ಕೇವಲ 30 ನಿಮಿಷಗಳವರೆಗೆ ಮಾತ್ರ ಆಮ್ಲಜನಕ ನೀಡಬಹುದಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.
ಜೈಪುರ ಗೋಲ್ಡನ್ ಆಸ್ಪತ್ರೆಯ ವೈದ್ಯ ಡಿ ಕೆ ಬಲೂಜಾ ಈ ಕುರಿತು ಮಾತನಾಡಿದ್ದು, ಲಭ್ಯವಿರುವ ಆಮ್ಲಜನಕವನ್ನು ಕೇವಲ ಅರ್ಧ ಗಂಟೆ ಮಾತ್ರ ನೀಡಬಹುದಾಗಿದೆ. ಈಗ ಆಕ್ಸಿಜನ್ ಕೊರತೆಯಿಂದಾಗ 200ಕ್ಕೂ ಹೆಚ್ಚು ಜೀವಗಳು ಅಪಾಯದಲ್ಲಿವೆ. ಆಕ್ಸಿಜನ್ ಕೊರತೆಯಿಂದಾಗಿ ನಾವು ಕಳೆದ ರಾತ್ರಿ 20 ಜನರನ್ನು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸರಿಯಾದ ಸಮಯಕ್ಕೆ ಆಕ್ಸಿಜನ್ ದೊರೆಯದಿದ್ರೆ ಆ 200 ಕೊರೊನಾ ರೋಗಿಗಳನ್ನು ಕಳೆದುಕೊಳ್ಳುವ ಆತಂಕ ಈಗ ಎಲ್ಲರಲ್ಲೂ ಕಾಡುತ್ತಿದೆ.