ಪಾರಾದೀಪ್, ಒಡಿಶಾ : ಸುಮಾರು 15 ದಿನಗಳಿಂದ ಸಮುದ್ರದಲ್ಲಿ ಸಿಲುಕಿದ್ದ 20 ಬಾಂಗ್ಲಾದೇಶ ಮೂಲದ ಮೀನುಗಾರರನ್ನು ಒಡಿಶಾದ ಮೀನುಗಾರರು ರಕ್ಷಣೆ ಮಾಡಿರುವ ಘಟನೆ ಬಂಗಾಳ ಕೊಲ್ಲಿಯಲ್ಲಿ ನಡೆದಿದೆ.
ಡಿಸೆಂಬರ್ 7ರಂದು ಬಾಂಗ್ಲಾದೇಶದಿಂದ ಮೀನುಗಾರಿಕೆಗೆ ತೆರಳಿದ 20 ಮಂದಿ ಸಮುದ್ರದಲ್ಲಿ ಸಿಲುಕಿದ್ದರು. ಭಾರಿ ಬಿರುಗಾಳಿಯ ಕಾರಣದಿಂದ ಬೋಟ್ಗೆ ಹಾನಿಯಾದ ಕಾರಣ ಅವರು ದಡಕ್ಕೆ ಬರಲು ಸಾಧ್ಯವಾಗಿರಲಿಲ್ಲ ಎಂದು ತಿಳಿದು ಬಂದಿದೆ.
ತಾವು ತಂದಿದ್ದ ದವಸ-ಧಾನ್ಯಗಳು ಕೇವಲ 7 ದಿನಕ್ಕೆ ಖಾಲಿಯಾಗಿದ್ದವು. ತಾವು ಸಮುದ್ರದಲ್ಲಿ ಯಾವ ಜಾಗದಲ್ಲಿದ್ದೇವೆ ಎಂಬುದನ್ನು ತಿಳಿಯಲು ಕೂಡ ಅವರಿಂದ ಸಾಧ್ಯವಾಗಿರಲಿಲ್ಲ. ಈ ವೇಳೆ ಒಡಿಶಾ ಮೀನುಗಾರರು ಅವರ ಕಣ್ಣಿಗೆ ಬಿದ್ದಿದ್ದು, ಸಹಾಯಕ್ಕೆ ಮನವಿ ಮಾಡಿದ್ದರು.
ಈ ವಿಷಯವನ್ನು ಒಡಿಶಾ ಮೀನುಗಾರರು ಭಾರತೀಯ ಕೋಸ್ಟ್ಗಾರ್ಡ್ ಮತ್ತು ಮರೈನ್ ಕಾಪ್ಸ್ಗೆ ತಿಳಿಸಿದ್ದು, ಕಾರ್ಯಾಚರಣೆ ಕೈಗೊಂಡ ರಕ್ಷಣಾ ಪಡೆಗಳು ಬಾಂಗ್ಲಾ ಮೀನುಗಾರರನ್ನು ರಕ್ಷಿಸಿದ್ದಾರೆ. ಮೀನುಗಾರರಿಂದ 15 ಮೊಬೈಲ್ ಫೋನ್ ಮತ್ತು ನೋಟುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Myanmar Massacre: 30 ಮಂದಿಯನ್ನು ಕೊಂದ ಸೇನೆ.. ಮಾನವಹಕ್ಕುಗಳ ಸಂಘಟನೆ ಖಂಡನೆ