ETV Bharat / bharat

ಉತ್ತರ ಪ್ರದೇಶ : ಮನೆಯ ಗೋಡೆ ಕುಸಿದು ಸ್ಥಳದಲ್ಲೇ ಇಬ್ಬರು ಸಾವು, ಮೂವರಿಗೆ ಗಾಯ

ಶಿಥಿಲಗೊಂಡ ಗೋಡೆ ಕುಸಿದ ಪರಿಣಾಮ ಇಬ್ಬರು ಸಾವನಪ್ಪಿದ್ದಾರೆ. ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ಈ ಸಂಬಂಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಸಹಸ್ವಾನ್ ಠಾಣಾಧಿಕಾರಿ (ಎಸ್‌ಹೆಚ್‌ಒ) ತಿಳಿಸಿದ್ದಾರೆ..

author img

By

Published : Jan 17, 2022, 11:24 AM IST

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬುಡೌನ್(ಉತ್ತರಪ್ರದೇಶ) : ಮನೆಯ ಗೋಡೆ ಕುಸಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಬುಡೌನ್‌ನ ಇಬ್ರಾಹಿಂ ಗದಿ ಗ್ರಾಮದಲ್ಲಿ ನಡೆದಿದೆ.

ನರೇಶ್ ಪಾಲ್ (55) ಮತ್ತು ರಾಮ್ ಸಿಂಗ್ (60) ಎಂಬುವರು ಮೃತ ದುರ್ದೈವಿಗಳು. ಘಟನೆಯಲ್ಲಿ ಮನ್ವೀರ್, ರಾಯ್ ಸಿಂಗ್ ಮತ್ತು ಅತಿರಾಜ್ ಎಂಬ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ನರೇಶ್ ಪಾಲ್ ಅವರ ಸೊಸೆ ಶನಿವಾರ ರಾತ್ರಿ ಮಗುವಿಗೆ ಜನ್ಮ ನೀಡಿದ್ದರು. ಆ ಮಗು ಮೃತಪಟ್ಟ ಹಿನ್ನೆಲೆ ಮಗುವಿನ ಅಂತ್ಯಕ್ರಿಯೆಗಾಗಿ ಗ್ರಾಮಸ್ಥರು ಸೇರಿದ್ದರು.

ಮೈ ಕೊರೆಯುವ ಚಳಿ ಹಿನ್ನೆಲೆ ಮನೆಯ ಹೊರಗೆ ಗ್ರಾಮಸ್ಥರು ಬೆಂಕಿ ಹಾಕಿ ಸುತ್ತಲೂ ಕುಳಿತಿದ್ದರು. ಈ ವೇಳೆ ಗೋಡೆ ಕುಸಿದು ದುರ್ಘಟನೆ ನಡೆದಿದೆ ಎನ್ನಲಾಗ್ತಿದೆ.

ಶಿಥಿಲಗೊಂಡ ಗೋಡೆ ಕುಸಿದ ಪರಿಣಾಮ ಇಬ್ಬರು ಸಾವನಪ್ಪಿದ್ದಾರೆ. ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ಈ ಸಂಬಂಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಸಹಸ್ವಾನ್ ಠಾಣಾಧಿಕಾರಿ (ಎಸ್‌ಹೆಚ್‌ಒ) ತಿಳಿಸಿದ್ದಾರೆ.

ಇದನ್ನೂ ಓದಿ: ವಾರ್ಷಿಕ ಮೆರವಣಿಗೆ ವೇಳೆ ಪಳನಿ ದೇವಸ್ಥಾನದ 400 ವರ್ಷಗಳಷ್ಟು ಹಳೆಯದಾದ ಶೂಲಗಳು ನಾಪತ್ತೆ; ತನಿಖೆ ಶುರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.