ETV Bharat / bharat

ಬಂಡಿಪೋರಾದಲ್ಲಿ ಸೇನೆಯ ಮಹತ್ವದ ಕಾರ್ಯಾಚರಣೆ.. ಇಬ್ಬರು ಹೈಬ್ರಿಡ್​ ಉಗ್ರರ ಬಂಧನ - ನಿಯಂತ್ರಿತ ಐಇಡಿ ವಶ

ಕೆನುಸಾ ಬಂಡಿಪೋರಾದಲ್ಲಿ ಐಇಡಿ ಸ್ಫೋಟದ ಸಂಚನ್ನು ಇತ್ತೀಚೆಗೆ ಸೋಪೋರ್ ಪೊಲೀಸರು ಭೇದಿಸಿದ್ದರು. ಈ ಸಂಬಂಧ ಕೆನುಸಾ ಬಂಡಿಪೋರಾದ ಇರ್ಷಾದ್ ಮತ್ತು ವಸೀಮ್ ರಾಜಾ ಎಂಬ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ.

2 hybrid militants involved in planting IED

author img

By

Published : Nov 7, 2022, 7:33 PM IST

ಶ್ರೀನಗರ(ಜಮ್ಮು ಕಾಶ್ಮೀರ): ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಹುದುಗಿಡಲು ಪ್ಲಾನ್​ ಮಾಡಿದ್ದ ಇಬ್ಬರು ಹೈಬ್ರಿಡ್ ಉಗ್ರರನ್ನು ಬಾರಾಮುಲ್ಲಾದಿಂದ ಬಂಧನ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಎರಡು ರಿಮೋಟ್ - ನಿಯಂತ್ರಿತ ಸುಧಾರಿತ ಸ್ಫೋಟಕ ಸಾಧನಗಳನ್ನು (IEDs) ಬಂಧಿತರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೆನುಸಾ ಬಂಡಿಪೋರಾದಲ್ಲಿ ಇತ್ತೀಚಿನ ಐಇಡಿ ಸ್ಫೋಟದ ಸಂಚನ್ನು ಸೋಪೋರ್ ಪೊಲೀಸರು ಭೇದಿಸಿದ್ದರು. ಈ ಸಂಬಂಧ ಕೆನುಸಾ ಬಂಡಿಪೋರಾದ ಇರ್ಷಾದ್ ಮತ್ತು ವಸೀಮ್ ರಾಜಾ ಎಂಬ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಡಿಟೋನೇಟರ್‌ಗಳೊಂದಿಗೆ 2 ರಿಮೋಟ್ ನಿಯಂತ್ರಿತ ಐಇಡಿ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 15 ರಂದು ಉತ್ತರ ಕಾಶ್ಮೀರ ಜಿಲ್ಲೆಯ ಬಂಡಿಪೋರಾದ ಕೆನುಸಾ - ಅಸ್ಟಾಂಗೊ ಪ್ರದೇಶದಲ್ಲಿ ಉಗ್ರರು ಸುಮಾರು 18 ಕೆಜಿ ತೂಕದ ಮತ್ತು ಎರಡು ಗ್ಯಾಸ್ ಸಿಲಿಂಡರ್‌ಗಳನ್ನು ಅಳವಡಿಸಿದ್ದರು. ಸ್ಫೋಟಕ ಸಾಧನವನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿ ನಾಶಪಡಿಸಿದ್ದು, ದೊಡ್ಡ ದುರಂತವೊಂದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನು ಓದಿ:ಬಿಹಾರ: ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.