ETV Bharat / bharat

ಹಿಜ್ಬುಲ್ ಮುಜಾಹಿದ್ದೀನ್ ನೇಮಕಾತಿ ಪ್ರಕರಣ: ಇಬ್ಬರಿಗೆ ಐದು ವರ್ಷ ಜೈಲು ಶಿಕ್ಷೆ - ಇಬ್ಬರಿಗೆ ಐದು ವರ್ಷ ಜೈಲು ಶಿಕ್ಷೆ

ಹಿಜ್ಬುಲ್ ಮುಜಾಹಿದ್ದೀನ್ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಜೈ ಜಿಲ್ಲೆಯಲ್ಲಿ 2018ರಲ್ಲಿ ಕೇಸ್​​ ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ದೋಷಿಗಳೆಂದು NIA ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

NIA special court sentenced 5 years in prison
NIA ವಿಶೇಷ ನ್ಯಾಯಾಲಯ ತೀರ್ಪು
author img

By

Published : Dec 26, 2022, 8:00 PM IST

ಗುವಾಹಟಿ (ಅಸ್ಸೋಂ): ಹಿಜ್ಬ್ ಉಲ್ ಮುಜಾಹಿದ್ದೀನ್ ನೇಮಕಾತಿಗೆ ಸಂಬಂಧಿಸಿದಂತೆ 2018 ರಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುವಾಹಟಿಯ ವಿಶೇಷ ಎನ್‌ಐಎ ನ್ಯಾಯಾಲಯವು ಇಬ್ಬರು ಆರೋಪಿಗಳನ್ನು ದೋಷಿ ಎಂದು ಘೋಷಿಸಿದೆ.

ಅಸ್ಸೋಂನ ಹೋಜೈ ಜಿಲ್ಲೆಯ ನಿವಾಸಿಗಳಾದ ಶಹನವಾಜ್ ಆಲಂ ಮತ್ತು ಒಮರ್ ಫಾರೂಕ್ ಅಪರಾಧಿಗಳು. ಇವರಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ, ಜೊತೆಗೆ ದಂಡವನ್ನು ಕಟ್ಟುವಂತೆ ನ್ಯಾಯಾಲಯ ಆದೇಶಿಸಿದೆ. ಆರೋಪಿಗಳ ವಿರುದ್ಧ ಐಪಿಸಿ 120 ಬಿ,18, 18 ಬಿ, 19, ಮತ್ತು ಯುಎ (ಪಿ) ಕಾಯ್ದೆಯ 38 ರ ಅಡಿ ದೋಷಿಗಳೆಂದು ಘೋಷಿಸಲಾಗಿದೆ. ಇಬ್ಬರಿಗೂ 5 ವರ್ಷಗಳ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ ಎಂದು ಡಿಸೆಂಬರ್ 24, 2022 ರಂದು ಎನ್ಐಎ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಪ್ರಕರಣವು ಆರಂಭದಲ್ಲಿ ಸೆಪ್ಟೆಂಬರ್ 14, 2018 ರಂದು ಹೋಜೈ ಜಿಲ್ಲೆಯ ಜಮುನಾಮುಖ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 124/2018 ರ ಅಡಿ ದಾಖಲಾಗಿತ್ತು. ಅಕ್ಟೋಬರ್ 5 ರಂದು ಎನ್ಐಎ ಮರು ನೋಂದಾಯಿಸಿದೆ. NIA ಮಾರ್ಚ್ 11, 2019 ರಂದು ಐವರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.

ಇದನ್ನೂ ಓದಿ: ಕನ್ಹಯ್ಯಾಲಾಲ್​ ಹತ್ಯೆಯಲ್ಲಿ ಪಾಕಿಸ್ತಾನ ಕೈವಾಡ ದೃಢ..ಎನ್​ಐಎ ಚಾರ್ಜ್​ಶೀಟ್​ನಲ್ಲಿ ಆರೋಪ

ಶಂಕಿತ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಕಮ್ರೂಜ್ ಜಮಾನ್ ಜೊತೆ ನಿಕಟ ಸಂಬಂಧ ಹೊಂದಿರುವ ಆರೋಪದ ಮೇಲೆ ಎಂ ಡಿ ಶಾನವಾಜ್ ಆಲಂ ಅಲಿಯಾಸ್ ಶಹನವಾಜ್ ಆಲಂನನ್ನು ಬಂಧಿಸಲಾಯಿತು.

ಆರೋಪಿಗಳಾದ ಕಮ್ರೂಜ್ ಜಮಾನ್, ಶಹನವಾಜ್ ಆಲಂ, ಸೈದುಲ್ ಆಲಂ, ಒಮರ್ ಫಾರೂಕ್ ಮತ್ತು ಇತರರು ಅಸ್ಸೋಂ ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮೂಲಕ ಜನರ ಮನಸ್ಸಿನಲ್ಲಿ ಭಯ ಹುಟ್ಟಿಸುವ ವಾತಾವರಣವನ್ನು ಸೃಷ್ಟಿಸಲು ಹಿಜ್ಬುಲ್ ಮುಜಾಹಿದ್ದೀನ್‌ನ ಸದಸ್ಯರನ್ನು ನೇಮಿಸಿಕೊಳ್ಳಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.