ETV Bharat / bharat

ಮಕ್ಕಳ ಮುಂದೆ ತಾಯಿ ಮೇಲೆ ಕಾಮುಕರಿಂದ ಅತ್ಯಾಚಾರ - ಗ್ವಾಲಿಯರ್​ನಲ್ಲಿ ಮಹಿಳೆ ಮೇಲೆ ರೇಪ್​

ಇಬ್ಬರು ಚಿಕ್ಕ ಮಕ್ಕಳೊಂದಿಗೆ ಮಹಿಳೆ ಮನೆಯಲ್ಲಿದ್ದ ವೇಳೆ ನಡುರಾತ್ರಿ ಮನೆಯೊಳಗೆ ನುಗ್ಗಿ ಆಕೆಯ ಮೇಲೆ ಇಬ್ಬರು ಕಾಮುಕರು ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

Women Gangarape
Women Gangarape
author img

By

Published : May 17, 2021, 3:02 PM IST

ಗ್ವಾಲಿಯರ್​(ಮಧ್ಯಪ್ರದೇಶ): ಕಾಮುಕರಿಬ್ಬರು ಮಹಿಳೆ ಮೇಲೆ ಮಕ್ಕಳ ಮುಂದೆ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ನಡೆದಿದೆ. ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿ ಏಕಾಂಗಿಯಾಗಿದ್ದ ವೇಳೆ ಈ ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಬಿಜೌಲಿಯ ಸಿದ್ದಿಪುರಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೊರೊನಾ ಸೋಂಕಿಗೊಳಗಾಗಿರುವ ಗಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಹೀಗಾಗಿ ಮಹಿಳೆ ಇಬ್ಬರು ಚಿಕ್ಕ ಮಕ್ಕಳೊಂದಿಗೆ ಮನೆಯಲ್ಲಿದ್ದಳು. ಈ ವೇಳೆ, ಇಬ್ಬರು ಕಾಮುಕರು ಮನೆಯೊಳಗೆ ನುಗ್ಗಿದ್ದು, ಆಕೆಯ ಮೇಲೆ ಅತ್ಯಾಚಾರವೆಸಗಿ, ಪರಾರಿಯಾಗಿದ್ದಾರೆ. ಈ ಘಟನೆ ಶನಿವಾರ - ಭಾನುವಾರ ನಡುರಾತ್ರಿ 2 ಗಂಟೆಗೆ ನಡೆದಿದೆ. ಇಬ್ಬರು ದುಷ್ಕರ್ಮಿಗಳು ಕೈಯಲ್ಲಿ ಪಿಸ್ತೂಲ್​ ಹಿಡಿದು ಮಹಿಳೆಗೆ ಬೆದರಿಕೆ ಸಹ ಹಾಕಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಉಡುಪಿ: 40 ಗಂಟೆಯಿಂದ ಸಮುದ್ರದಲ್ಲಿ ಸಿಲುಕಿದ್ದ 9 ಮಂದಿಯ ರಕ್ಷಣೆ

ಘಟನೆ ನಡೆದ ಬಳಿಕ ಮಹಿಳೆ ಪೊಲೀಸ್​ ಠಾಣೆಗೆ ತೆರಳಿ ಮಹಿಳೆ ದೂರು ನೀಡಿದ್ದಾಳೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈಗಾಗಲೇ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

28 ವರ್ಷದ ಯುವತಿಯ ಗಂಡನಿಗೆ ಕೊರೊನಾ ಸೋಂಕು ತಗುಲಿದ್ದು, ಆತನ ಆರೋಗ್ಯದಲ್ಲಿ ದಿಢೀರ್​ ಏರುಪೇರು ಕಂಡು ಬಂದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆತನೊಂದಿಗೆ ಮಹಿಳೆ ಅತ್ತೆ ಆಸ್ಪತ್ರೆಯಲ್ಲಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.