ETV Bharat / bharat

ಜಮ್ಮು ರೈಲು ನಿಲ್ದಾಣದ ಸಮೀಪ 18 ಡಿಟೋನೇಟರ್‌ಗಳು ತುಂಬಿದ್ದ ಬ್ಯಾಗ್​ ಪತ್ತೆ - ಡಿಟೋನೇಟರ್‌ಗಳು ತಂಬಿದ್ದ ಬ್ಯಾಗ್‌ ಪತ್ತೆ

18 ಡಿಟೋನೇಟರ್‌ಗಳು ತಂಬಿದ್ದ ಬ್ಯಾಗ್‌ ಪತ್ತೆಯಾಗಿರುವ ಘಟನೆ ಜಮ್ಮು ರೈಲು ನಿಲ್ದಾಣದ ಸಮೀಪ ನಡೆದಿದೆ.

18 detonators recovered at jammu railway station taxi stand police
ಜಮ್ಮು ರೈಲು ನಿಲ್ದಾಣದ ಸಮೀಪ 18 ಡಿಟೋನೇಟರ್‌ಗಳು ತುಂಬಿದ್ದ ಬ್ಯಾಗ್​ ಪತ್ತೆ
author img

By

Published : Oct 27, 2022, 5:46 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ರೈಲು ನಿಲ್ದಾಣದ ಟ್ಯಾಕ್ಸಿ ನಿಲ್ದಾಣದ ಬಳಿ ಗುರುವಾರ ಅನುಮಾನಾಸ್ಪದ ಬ್ಯಾಗ್‌ ಪತ್ತೆಯಾಗಿದ್ದು, ಇದರಲ್ಲಿದ್ದ 18 ಡಿಟೋನೇಟರ್‌ಗಳು ಸೇರಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅನುಮಾನಾಸ್ಪದ ಬ್ಯಾಗ್‌ ಕುರಿತ ಮಾಹಿತಿ ಸಿಕ್ಕ ಕೂಡಲೇ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸದ್ಯ ಬ್ಯಾಗ್ ವಶಪಡಿಸಿಕೊಂಡಿದ್ದೇವೆ. ಬ್ಯಾಗ್‌ನಲ್ಲಿ 2 ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಲಾದ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿಆರ್‌ಪಿ ಆರಿಫ್ ರಿಶು ತಿಳಿಸಿದ್ದಾರೆ.

ಬಾಕ್ಸ್‌ನಲ್ಲಿ ಸುಮಾರು 500 ಗ್ರಾಂ ವ್ಯಾಕ್ಸ್ ಮಾದರಿಯ ವಸ್ತುಗಳನ್ನು ಪ್ಯಾಕ್ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಗಿಲ್ಗಿಟ್, ಬಾಲ್ಟಿಸ್ತಾನ್ ನಮಗೆ ಸೇರಿದಾಗಲೇ ಸಮಗ್ರ ಅಭಿವೃದ್ಧಿ: ಪಿಓಕೆ ಮರುವಶದ ಸುಳಿವು ನೀಡಿದ ರಾಜನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.