ಮೇಷ
ಕೆಲವೊಮ್ಮೆ ನೀವು ಒತ್ತಡದಲ್ಲಿರುವುದು ಒಳ್ಳೆಯದು ಏಕೆಂದರೆ ಇದು ನಿಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಹೊರತರುತ್ತದೆ. ನಿಮ್ಮ ಕೆಲಸದಲ್ಲಿ ಎಲ್ಲಾ ನಿಮ್ಮ ಸಹೋದ್ಯೋಗಿಗಳನ್ನೂ ಮೀರುತ್ತೀರಿ. ಆದರೆ, ಫಲಿತಾಂಶಗಳು ನಿಮ್ಮ ನಿರೀಕ್ಷೆಗಳಿಗೆ ಹೊಂದಿಕೊಳ್ಳುವುದಿಲ್ಲ. ಫಲಿತಾಂಶಗಳು ರಾತ್ರೋರಾತ್ರಿ ಬರುವುದಿಲ್ಲವಾದ್ದರಿಂದ ನೀವು ತಾಳ್ಮೆಯಿಂದ ಇರಬೇಕು.
ವೃಷಭ
ನಿಮ್ಮದೇ ಮೈಲಿಗಲ್ಲುಗಳನ್ನು ಯೋಜಿಸುವುದು ಮತ್ತು ಮಿತ್ರರ ಯಶಸ್ಸನ್ನು ಸಂಭ್ರಮಿಸುವುದು ಇಂದಿನ ಕಾರ್ಯಸೂಚಿ. ವ್ಯಾಪಾರ ಅಥವಾ ಕೆಲಸದಲ್ಲಿ ನಿಮ್ಮ ಆಲೋಚನೆಗಳು ಪ್ರಗತಿಪರವಾಗಿರುತ್ತವೆ ಮತ್ತು ಯಾವುದೇ ಯೋಜನೆಗಳು ನಿಮ್ಮ ಭವಿಷ್ಯಕ್ಕೆ ಸದೃಢ ತಳಹದಿ ನಿರ್ಮಿಸುತ್ತವೆ. ಸಾಮಾಜಿಕ ಸಭೆಗಳು ಮತ್ತು ಪಾರ್ಟಿಗಳು ಉಲ್ಲಾಸ ತರುತ್ತವೆ.
ಮಿಥುನ
ನೀವು ನಿಮ್ಮ ಹಣಕಾಸು, ಜಂಟಿಯಾಗಿ ಹೊಂದಿರುವ ಸಂಪತ್ತುಗಳು ಮತ್ತು ಸ್ಥಿರಾಸ್ತಿಯ ವಿಷಯಗಳ ಕುರಿತು ಆತಂಕಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಇಂದು ನೀವು ಕೊಂಚ ಅವಿಶ್ರಾಂತರಾಗುತ್ತೀರಿ. ಅತ್ಯಂತ ನಿರ್ಲಕ್ಷಿಸಬಹುದಾದ ಸಮಸ್ಯೆಗಳೂ ನಿಮ್ಮ ಮನಸ್ಸು ಹಾಳು ಮಾಡಬಹುದು. ನೀವು ಹಣಕಾಸಿನ ವಿಷಯಗಳಲ್ಲಿ ರಿಸ್ಕ್ ತೆಗೆದುಕೊಳ್ಳಬಹುದು.
ಕರ್ಕಾಟಕ
ಜನರು ನಿಮ್ಮನ್ನು ಸುತ್ತುವರಿಯುತ್ತಾರೆ. ನಿಮ್ಮ ಮನರಂಜನೆಯಿಂದ ಅವರನ್ನು ತೊಡಗಿಸಿಕೊಳ್ಳುತ್ತೀರಿ. ಸಾಮಾಜಿಕ ಸಂಪರ್ಕಗಳು ನಿಮಗೆ ಲಾಭ ತರುತ್ತವೆ. ವಿದ್ಯಾರ್ಥಿಗಳು ನಿರೀಕ್ಷೆ ಮೀರುತ್ತಾರೆ ತಮ್ಮಕೆಲಸಕ್ಕೆ ಗಮನ ನೀಡುತ್ತಾರೆ. ಒಟ್ಟಾರೆ ಎಲ್ಲರಿಗೂ ಇದು ಒಳ್ಳೆಯ ದಿನವಾಗಿದೆ.
ಸಿಂಹ
ಕೆಲ ಭರವಸೆಗಳು ಖಾಸಗಿ ಮಾತುಗಳಂತೆ. ಎಂದಿಗೂ ವಾಸ್ತವಗೊಳ್ಳುವುದಿಲ್ಲ. ಇಂದು ಅದೇ ರೀತಿಯಲ್ಲಿದೆ, ನೀವು ಏನನ್ನು ಬಯಸುತ್ತೀರೋ ಅದಕ್ಕೆ ಎಷ್ಟೋ ಹತ್ತಿರ ಮತ್ತು ಎಷ್ಟೋ ದೂರವಿದ್ದೀರಿ. ನೀವು ಉದಾರ ವಿಜೇತ ಮತ್ತು ವಿನಯಶೀಲ ಸೋತವರು. ನೆನಪಿಟ್ಟುಕೊಳ್ಳಿ, ಪ್ರತಿದಿನವೂ ಭಾನುವಾರವಲ್ಲ; ಅಲ್ಲದೆ ನೀವು ಪ್ರತಿ ಸಲವೂ ಗೆಲ್ಲಲು ಸಾಧ್ಯವಿಲ್ಲ. ನಿರಾಸೆಗಳನ್ನು ತಪ್ಪಿಸಲು ನಿಮ್ಮ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಿ. ಬದಲಾವಣೆಯ ಗಾಳಿಗೆ ಕಾಯಿರಿ- ಅದು ಹೆಚ್ಚೇನೂ ಸಮಯ ತೆಗೆದುಕೊಳ್ಳುವುದಿಲ್ಲ.
ಕನ್ಯಾ
ಇಂದು, ನಿಮ್ಮ ದಕ್ಷತೆ ಐಡಿಯಾಗಳನ್ನು ಹುಟ್ಟುಹಾಕುತ್ತದೆ. ನಿಮಗೆ ಇನ್ನೊಬ್ಬರ ಸಮಸ್ಯೆಗಳನ್ನು ಗುಣಪಡಿಸುವ ಕೈಗಳಿವೆ. ನೀವು ಬಹಳ ಅರ್ಥ ಮಾಡಿಕೊಳ್ಳುವ ಸ್ವಭಾವದವರು. ಮತ್ತು ಜನರ ಮನಸ್ಸನ್ನು ಓದುವುದು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಅದ್ಭುತಗಳನ್ನು ಮಾಡಬಲ್ಲದು.
ತುಲಾ
ನಿಮ್ಮ ಶ್ರಮಶೀಲ ಸ್ವಭಾವವು ನಿಮ್ಮ ಆತ್ಮಸಾಕ್ಷಿಯ ಮಾತು ಕೇಳುವ ಸಮಯ ಎಂಬುದಿದ್ದರೆ, ಅದು ಈ ದಿನ ಆಗಲಿದೆ. ನಿಮ್ಮ ಆಂತರಿಕ ಧ್ವನಿಯ ಮಾತು ಕೇಳಿದರೆ ಮತ್ತು ಉತ್ಸಾಹದಿಂದ ಬೆಂಬಲಿಸಿದರೆ ತಪ್ಪಾಗುವುದು ಕಷ್ಟಸಾಧ್ಯ. ಬೆಳಗಿನ ಕಠಿಣ ಪರಿಶ್ರಮ ಮತ್ತು ಮಧ್ಯಾಹ್ನದ ಒತ್ತಡ ಸಂಜೆಯ ಸಂತೋಷಕ್ಕೆ ದಾರಿ ನೀಡುತ್ತವೆ. ನೀವೇನು ಮಾಡುತ್ತೀರೋ ಅದನ್ನು ಆನಂದಿಸಿ.
ವೃಶ್ಚಿಕ
ನಿಮ್ಮ ತಾರೆಗಳ ಜೋಡಣೆ ಇಂದು ನಿಮಗೆ ರಚನಾತ್ಮಕ ಅನುಕೂಲಕರ ದಿನವನ್ನು ಉತ್ಪಾದಿಸುವಂತಿದೆ. ನೀವು ಹಿರಿಯರು ಮತ್ತು ಕಿರಿಯರು ಪ್ರತಿಯೊಬ್ಬರನ್ನೂ ಸಮಾನರಂತೆ ಕಾಣುವ ತಂಡದ ಪ್ರಾಮುಖ್ಯತೆಯನ್ನು ಅರಿತಿದ್ದೀರಿ. ಇದು ನಿಮ್ಮ ಪರಿಸರವನ್ನು ಸಾಮರಸ್ಯಕರವಾಗಿಸುತ್ತದೆ.
ಧನು
ನಿಮ್ಮ ಒಳಗಿರುವ ಋಷಿ ಇಂದು ನಾಯಕತ್ವ ವಹಿಸುತ್ತಾನೆ. ನೀವು ಮನಃಶಾಂತಿಗೆ ನಿಮ್ಮದೇ ಔಷಧ ಸೂಚಿಸಿಕೊಳ್ಳಲಿದ್ದೀರಿ. ನೀವು ಇಂದು ಜ್ಞಾನಿ ಮತ್ತು ಸಂತೃಪ್ತರು, ನಿಮ್ಮ ಸುತ್ತಲೂ ನೀವು ಪ್ರೀತಿಯ ಸಂದೇಶ ಹರಡುತ್ತೀರಿ. ಒಟ್ಟಾರೆ, ಇಂದು ನಿಮಗೆ ಶಾಂತಿಯುತ ದಿನ ಕಾದಿದೆ.
ಮಕರ
ನಿಮ್ಮ ಅಸಾಧಾರಣ ಬೌದ್ಧಿಕ ಸಾಮರ್ಥ್ಯ ನಿಮಗೆ ಉತ್ಸಾಹಕರ ಫಲಿತಾಂಶಗಳನ್ನು ನೀಡುವುದೇ ಅಲ್ಲದೆ ನಿಮ್ಮ ಹತ್ತಿರದ ಸಹವರ್ತಿಗಳಿಗೆ ನಿಮ್ಮ ಮೌಲಿಕ ಸಲಹೆಯಿಂದ ಅವರ ವೃತ್ತಿಯಲ್ಲಿ ಮಹತ್ತರವಾಗಿ ಪ್ರಗತಿ ಕಾಣಲು ನೆರವಾಗುತ್ತದೆ. ಅಸಂಖ್ಯ ಸಮಸ್ಯೆಗಳು ನಿಮ್ಮ ದಾರಿಯಲ್ಲಿವೆ, ಆದರೆ ನಿಮಗೆ ಆತಂಕಪಡಲು ಕಾರಣವಿಲ್ಲ. ನೀವು ಅವುಗಳ ಪ್ರತಿಯೊಂದನ್ನೂ ಸುಲಭವಾಗಿ ನಿವಾರಿಸುತ್ತೀರಿ. ಸರಿಯಾದ ಸಮಯದಲ್ಲಿ ಕೆಲಸ ಪೂರ್ತಿಗೊಳಿಸಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಎನಿಸಿಕೊಳ್ಳಲಿದ್ದೀರಿ.
ಕುಂಭ
ನಿಮ್ಮ ಸಂವಹನ ಕೌಶಲ್ಯಗಳು ಇಂದು ಅದ್ಭುತಗಳನ್ನು ಮಾಡುತ್ತವೆ. ನಿಮ್ಮ ಮಾತುಗಾರಿಕೆ ನಿಮಗೆ ಪುರಸ್ಕಾರಗಳನ್ನು ತಂದುಕೊಡುತ್ತವೆ ಮತ್ತು ಸಭೆಗಳಲ್ಲಿ ಅತ್ಯಂತ ಅನುಕೂಲಕರವಾಗುತ್ತವೆ. ವಾಸ್ತವವಾಗಿ ನಿಮ್ಮ ವಾದಗಳು ಬಹಳ ಮನ ಒಲಿಸುವಂತಿರುತ್ತವೆ. ಜನರು ನಿಮ್ಮೊಂದಿಗೆ ಒಪ್ಪದೇ ಇರುವಾಗ ಕ್ಷೋಭೆಗೊಳ್ಳದೇ ಇರುವುದು ಒಳ್ಳೆಯದು.
ಮೀನ
ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಪವಿತ್ರವಾದ ಸಮಯ, ಇಂದು ನಿಮ್ಮ ಭವಿಷ್ಯಕ್ಕೆ ಗಮನಾರ್ಹ ಹೂಡಿಕೆ ಮಾಡುವುದನ್ನು ಕಾಣುತ್ತೀರಿ. ನಿಮ್ಮ ಕುಟುಂಬ ನಿಮ್ಮ ಯಶಸ್ಸಿಗೆ ತಳಹದಿ, ಮತ್ತು ಅದನ್ನು ಮನದಲ್ಲಿಟ್ಟುಕೊಳ್ಳುವುದು ನಿಮಗೆ ಕೆಲವು ಪ್ರಮುಖ ಒಳನೋಟಗಳನ್ನು ನೀಡುತ್ತದೆ. ನಿಮ್ಮ ನಗು ಇಂದು ಹಲವು ಹೃದಯಗಳನ್ನು ಗೆಲ್ಲುತ್ತದೆ.