ಚಂಡೀಗಢ: ದೇಶವಲ್ಲದೇ ಪಾಶ್ಚಿಮಾತ್ಯ ರಾಷ್ಟ್ರಗಳ ರಾಜಕೀಯದಲ್ಲೂ ಭಾರತೀಯರು ಛಾಪು ಮೂಡಿಸುತ್ತಿದ್ದಾರೆ. ಆಸ್ಟ್ರೇಲಿಯಾದ ಫೆಡರಲ್ ಮತ್ತು ಸೆನೆಟ್ ಚುನಾವಣೆಗಳಲ್ಲಿ 17 ಭಾರತೀಯ ಮೂಲದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದರಲ್ಲಿ ಪಂಜಾಬ್ನ 6 ಮಂದಿ ಕಣದಲ್ಲಿದ್ದಾರೆ. ಸದನದ 151 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
6 ಪಂಜಾಬಿಗಳ ಪೈಕಿ ಕ್ವೀನ್ಸ್‌ಲ್ಯಾಂಡ್‌ನ ಗ್ರೀನ್ ಪಾರ್ಟಿಯಿಂದ ನವದೀಪ್ ಸಿಂಗ್ ಸಿಧು, ಒನ್ ನೇಷನ್ ಪಾರ್ಟಿಯ ನಾಯಕ ರಾಜನ್ ವೈದ್, ಮಕಿನ್, ಚಿಫಲ್‌ನಿಂದ ಲಿಬರಲ್ ಪಕ್ಷದ ಅಭ್ಯರ್ಥಿ ಜುಗನ್‌ದೀಪ್ ಸಿಂಗ್, ಗ್ರೀನ್‌ವೇಯಿಂದ ಲವ್‌ಪ್ರೀತ್ ಸಿಂಗ್ ನಂದಾ, ಟ್ರಿಮನ್ ಗಿಲ್ ಮತ್ತು ಹರ್ಮೀತ್ ಕೌರ್ ಚುನಾವಣಾ ಕಣದಲ್ಲಿದ್ದಾರೆ.
ಆಸ್ಟ್ರೇಲಿಯಾ ಸಂಸತ್ತಿಗೆ ನಡೆಯುತ್ತಿರುವ ಮತದಾನ ಇಂದು ಮುಕ್ತಾಯವಾಗಲಿದೆ. ಬಹುಮತ ಪಡೆಯಲು 151 ಸ್ಥಾನಗಳಲ್ಲಿ ಕನಿಷ್ಠ 76 ಸ್ಥಾನ ಮ್ಯಾಜಿಕ್ ನಂಬರ್ ಆಗಿದೆ.
ಓದಿ: 12ನೇ ಕ್ಲಾಸ್ ವಿದ್ಯಾರ್ಥಿಯಿಂದ ಸಿದ್ಧವಾಯ್ತು 'ಮಿನಿ ಟ್ರ್ಯಾಕ್ಟರ್'; ಖರ್ಚಾಗಿದ್ದು ಕೇವಲ ₹40 ಸಾವಿರ!