ETV Bharat / bharat

ಪಂಚಾಯ್ತಿ ಚುನಾವಣೆಯಲ್ಲಿ ಭಾಗಿಯಾಗಿದ್ದ 1,621 ಶಿಕ್ಷಕರ ಸಾವು.. ಹೊರಬಿತ್ತು ಸಂಪೂರ್ಣ ಲಿಸ್ಟ್​ - Teachers death in UP Election

ಕಳೆದ ಕೆಲ ತಿಂಗಳ ಹಿಂದೆ ಉತ್ತರ ಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಪಂಚಾಯ್ತಿ ಚುನಾವಣೆ ನಡೆದಿತ್ತು. ಇಲ್ಲಿ ಕೆಲಸ ಮಾಡಿರುವ ಸಾವಿರಾರು ಶಿಕ್ಷಕರು ಇದೀಗ ಕೊರೊನಾ ಸೋಂಕಿಗೆ ಬಲಿಯಾಗಿದ್ದಾಗಿ ತಿಳಿದು ಬಂದಿದೆ.

1,621 Govt teachers
1,621 Govt teachers
author img

By

Published : May 17, 2021, 9:19 PM IST

ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ಪಂಚಾಯ್ತಿ ಚುನಾವಣೆಯಲ್ಲಿ ಕೆಲಸ ನಿರ್ವಹಿಸಿರುವ 1,621 ಶಿಕ್ಷಕರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಅಲ್ಲಿನ ಪ್ರಾಥಮಿಕ ಶಿಕ್ಷಣ ಸಂಘ ಸಂಪೂರ್ಣ ಲಿಸ್ಟ್​ ರಿಲೀಸ್​​ ಮಾಡಿದೆ.

ಕೊರೊನಾ ಮಹಾಮಾರಿ ನಡುವೆ ಉತ್ತರ ಪ್ರದೇಶದ ಅನೇಕ ಪಂಚಾಯ್ತಿಗಳಿಗೆ ಚುನಾವಣೆ ನಡೆದಿದ್ದು, ಸಾವಿರಾರು ಶಿಕ್ಷಕರು ಚುನಾವಣಾ ಸಿಬ್ಬಂದಿಯಾಗಿ ಕೆಲಸ ಮಾಡಿದ್ದರು. ಲಭ್ಯವಾಗಿರುವ ಮಾಹಿತಿ ಪ್ರಕಾರ 75 ಜಿಲ್ಲೆಯಲ್ಲಿ 1,621 ಶಿಕ್ಷಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾಗಿ ಮಾಹಿತಿ ಲಭ್ಯವಾಗಿದ್ದು, ಇದಕ್ಕೆ ಮುಖ್ಯ ಕಾರಣವಾಗಿರುವುದು ಕೊರೊನಾ ಎಂಬುದಾಗಿ ತಿಳಿದು ಬಂದಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಶಿಕ್ಷಕರು ಸಾವು?

ಪ್ರಾಥಮಿಕ ಶಿಕ್ಷಣ ಸಂಘ ರಿಲೀಸ್ ಮಾಡಿರುವ ಪಟ್ಟಿ ಪ್ರಕಾರ ಆಜಂಘಡನಲ್ಲಿ ಅತಿ ಹೆಚ್ಚು ಶಿಕ್ಷಕರು ಅಂದರೆ 68 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಗೋರಖ್​ಪುರ್​ದಲ್ಲಿ 50, ಲಕಿಂಪುರ್​​ನಲ್ಲಿ 47, ರಾಯಬರೇಲಿ 53, ಜೌನ್​ಪುರ್​ 43, ಇಲಾಹಾಬಾದ್ 46, ಲಖನೌ 35, ಸೀತಾಪುರ್​ 39, ಉನ್ನಾವೋ 34, ಘಾಜಿಪುರ್​ 36 ಹಾಗೂ ಬಾರಬಂಕಿಯಲ್ಲಿ 34 ಶಿಕ್ಷಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಕೃಷಿ ರಾಸಾಯನಿಕಗಳ ಆಮದು ಕಡಿಮೆ ಮಾಡಬೇಕು: ಸಿಸಿಎಫ್‌ಐ

ಉಳಿದಂತೆ 23ಕ್ಕೂ ಅಧಿಕ ಜಿಲ್ಲೆಗಳಲ್ಲಿ 25ಕ್ಕೂ ಹೆಚ್ಚು ಶಿಕ್ಷಕರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಸಂಘದ ಅಧ್ಯಕ್ಷ ದಿನೇಶ್​ ಚಂದ್ರ ಶರ್ಮಾ ಮಾಹಿತಿ ನೀಡಿದ್ದಾರೆ. ಸಾವನ್ನಪ್ಪಿದವರ ಶಿಕ್ಷಕರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.