ETV Bharat / bharat

ಆರ್ಥಿಕ ಬಿಕ್ಕಟ್ಟು: ರಾಮೇಶ್ವರಂಗೆ ಬಂದ 16 ಶ್ರೀಲಂಕಾ ತಮಿಳು ನಿರಾಶ್ರಿತರು

author img

By

Published : Mar 24, 2022, 12:44 PM IST

ನೆರೆಯ ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಆಹಾರ, ಉದ್ಯೋಗ ಕೊರತೆಯಿಂದ ಅಲ್ಲಿನ ಜನತೆ ಅಕ್ಕಪಕ್ಕದ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ.

Srilankan Tamils came to Rameshwaram as refugees
ರಾಮೇಶ್ವರಂಗೆ ಬಂದ ಶ್ರೀಲಂಕಾ ತಮಿಳು ನಿರಾಶ್ರಿತರು

ರಾಮೇಶ್ವರಂ(ತಮಿಳುನಾಡು): ನೆರೆಯ ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಉದ್ಯೋಗ ಹಾಗೂ ಆಹಾರದ ಕೊರತೆ ಕಾರಣ ಅಲ್ಲಿ ಬದುಕಲು ಸಾಧ್ಯವಾಗದೇ ಜನರು ಪಲಾಯನ ಮಾಡುತ್ತಿದ್ದು, ಸುಮಾರು 16 ಶ್ರೀಲಂಕಾ ತಮಿಳರು ರಾಮೇಶ್ವರಂಗೆ ಬಂದಿದ್ದಾರೆ.

ಶ್ರೀಲಂಕಾದಲ್ಲಿ ರಾಜಪಕ್ಸೆ ಸಹೋದರರ ಆಡಳಿತವು ಭ್ರಷ್ಟಾಚಾರದಿಂದ ಕೂಡಿದೆ ಎಂದು ಕೆಲ ಜನರ ಗುಂಪು ಆರೋಪಿಸಿದೆ. ಇತ್ತ ಕಳೆದ ಮಾರ್ಚ್​.17ರಂದು ಅಲ್ಲಿನ ಜನರು ದಿನಸಿ ದರವನ್ನು ಹೆಚ್ಚಿಸಿದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಕೂಡ ನಡೆಸಿದ್ದರು. ಇದನ್ನೆಲ್ಲ ಕಂಡು ಭಾರತ ಸರ್ಕಾರ, ಶ್ರೀಲಂಕಾ ಸರ್ಕಾರಕ್ಕೆ 7,500 ಕೋಟಿ ಸಾಲವನ್ನು ನೀಡಿ ಸಹಾಯ ಹಸ್ತ ಚಾಚಿದೆ.

Police force brought refugees to the camp
ನಿರಾಶ್ರಿತರನ್ನು ಶಿಬಿರಕ್ಕೆ ಕರೆ ತಂದ ಪೊಲೀಸ್​ ಪಡೆ

ರಾಮೇಶ್ವರಂ ಬಳಿಯ ಅರಿಚಲ್ ಮುನೈನಲ್ಲಿ 16 ಸದಸ್ಯರು ನಿರಾಶ್ರಿತರು ಶ್ರೀಲಂಕಾದಿಂದ ಬಂದಿದ್ದಾರೆ. ಕಳೆದ ಸೋಮವಾರ ಶ್ರೀಲಂಕಾದ ಮನ್ನಾರ್ ಜಿಲ್ಲೆಗೆ ಸೇರಿದ 10 ಜನರು ಮತ್ತು ಯಾಜಪಾನಂ ಮತ್ತು ಶ್ರೀಲಂಕಾದ ಮನ್ನಾರ್ ಜಿಲ್ಲೆಗೆ ಸೇರಿದ 6 ಮಂದಿ ರಾಮೇಶ್ವರಂಗೆ ಬಂದಿದ್ದಾರೆ. ಇನ್ನು ನಿರಾಶ್ರಿತರನ್ನು ಶ್ರೀಲಂಕಾ ಮತ್ತು ಭಾತರದ ಗಡಿ ಭಾಗ ಧನುಷ್ಕೋಡಿಯಲ್ಲಿ ಇರಿಸಿ ಬಳಿಕ ಭಾರತೀಯ ಪೊಲೀಸ್ ಪಡೆ ವಿಚಾರಣೆ ನಡೆಸಿ ಶಿಬಿರಕ್ಕೆ ಕರೆ ತಂದಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ತಲೆಗೆ ಕಲ್ಲು ಬಡಿದು ವ್ಯಕ್ತಿ ಸಾವು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.