ಗಯಾ(ಬಿಹಾರ): ನಕ್ಸಲೀಯರ ಕಾರ್ಯಾಚರಣೆ ಮತ್ತೊಮ್ಮೆ ವಿಫಲಗೊಳಿಸುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದ್ದು, ಗಯಾದ ವಿವಿಧ ಅರಣ್ಯ ಪ್ರದೇಶಗಳಲ್ಲಿ ದಾಖಲೆಯ 150 ಐಇಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಿಹಾರದ ಗಯಾ - ಔರಂಗಾಬಾದ್ ಜಿಲ್ಲೆಯ ಗಡಿಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಗಯಾದ ನಕ್ಸಲೀಯರ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ನಡೆಸಿದ ಪೊಲೀಸರು ಅಪಾರ ಪ್ರಮಾಣದ ಸ್ಫೋಟಕ ವಶಪಡಿಸಿಕೊಂಡಿದ್ದಾರೆ. 150 ಐಇಡಿ, ಜನರೇಟರ್, ಎಚ್‌ಪಿ ಲೇಸರ್ ಪ್ರಿಂಟರ್, ಸ್ಟೆಬಿಲೈಸರ್ ಪೆಟ್ರೋಲ್ ಮತ್ತು ಆಹಾರ ಪದಾರ್ಥ ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ ಅಪಾರ ಪ್ರಮಾಣದ ಕ್ಯಾನ್ ಸಹ ಸಿಕ್ಕಿವೆ.
ಇದನ್ನೂ ಓದಿರಿ: ದೇಶದ ಅತ್ಯಂತ ಹಳೆಯ ಹುಲಿಗಳಲ್ಲಿ ಒಂದಾದ ರಾಯಲ್ ಬೆಂಗಾಲ್ 'ರಾಜಾ' ನಿಧನ
ಮೂಲಗಳ ಮಾಹಿತಿ ಪ್ರಕಾರ, ಭದ್ರತಾ ಪಡೆಗಳು ಗಯಾ - ಔರಂಗಾಬಾದ್ ಜಿಲ್ಲೆಯ ಗಡಿಯ ಛಕರ್ಬಂಧ ಮತ್ತು ಮದನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪರ್ವತ ಮತ್ತು ಅರಣ್ಯ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ಅನೇಕ ಸ್ಥಳಗಳಲ್ಲಿ IED ಸಿಕ್ಕಿವೆ. ನಕ್ಸಲೀಯರ ಅಡಗುತಾಣದಿಂದ ಅಪಾರ ಪ್ರಮಾಣದ ಸ್ಫೋಟಕ ವಶಪಡಿಸಿಕೊಳ್ಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ಗಡಿ ನಕ್ಸಲ್ ಪ್ರದೇಶವಾದ ಗಯಾ ಮತ್ತು ಔರಂಗಾಬಾದ್ನಲ್ಲಿ ಮಾವೋವಾದಿಗಳು ಹೆಚ್ಚಿನ ಹಿಡಿತ ಸಾಧಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಅವರ ಕಾರ್ಯ ಮೇಲಿಂದ ಮೇಲೆ ಭದ್ರತಾ ಪಡೆಯಿಂದ ವಿಫಲಗೊಳ್ಳುತ್ತಿದೆ.