ETV Bharat / bharat

ವಿದೇಶಿ ನ್ಯಾಯಮಂಡಳಿಗಳಲ್ಲಿ 1,40,050 ಪ್ರಕರಣ ಬಾಕಿ.. ಸದನದಲ್ಲಿ ಲಿಖಿತ ರೂಪದ ಮಾಹಿತಿ ನೀಡಿದ ಕೇಂದ್ರ - ವಿದೇಶಾಂಗ ನ್ಯಾಯಮಂಡಳಿ

ಕಳೆದ ಐದು ವರ್ಷಗಳಲ್ಲಿ ಒಟ್ಟು 1,36,064 ಪ್ರಕರಣಗಳನ್ನು ವಿದೇಶಿ ನ್ಯಾಯಮಂಡಳಿಗಳು ವಿಲೇವಾರಿ ಮಾಡಿವೆ. ಕಳೆದ ವರ್ಷ 11,873 ಪ್ರಕರಣ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದೆ..

1,40,050 cases pending at foreign tribunals: MoS Home
ವಿದೇಶಿ ನ್ಯಾಯಮಂಡಳಿಗಳಲ್ಲಿ 1,40,050 ಪ್ರಕರಣಗಳು ಬಾಕಿ ಉಳಿದಿವೆ
author img

By

Published : Mar 23, 2021, 3:08 PM IST

ನವದೆಹಲಿ : 2020ರ ಡಿಸೆಂಬರ್ 31ರವರೆಗೆ ವಿದೇಶಾಂಗ ನ್ಯಾಯಮಂಡಳಿಗಳಲ್ಲಿ ಒಟ್ಟು 1,40,050 ಪ್ರಕರಣ ಬಾಕಿ ಉಳಿದಿವೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ್ ರಾಯ್ ಲಿಖಿತ ರೂಪದ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.

ವಿದೇಶಿ ನ್ಯಾಯಮಂಡಳಿಗಳು ಪ್ರಸ್ತುತ ಅಸ್ಸೋಂನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಇದೇ ವೇಳೆ ಮಾಹಿತಿ ನೀಡಿದ್ದಾರೆ. ಭಾರತೀಯ ಜನತಾ ಪಕ್ಷದ ಲೋಕಸಭಾ ಸಂಸದ ಪಿ ಸಿ ಮೋಹನ್ ಅವರು ಕೇಳಿದ ಪ್ರಶ್ನೆಗೆ ಗೃಹ ಸಚಿವಾಲಯವು ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದೆ.

ಕಳೆದ ಐದು ವರ್ಷಗಳಲ್ಲಿ ಒಟ್ಟು 1,36,064 ಪ್ರಕರಣಗಳನ್ನು ವಿದೇಶಿ ನ್ಯಾಯಮಂಡಳಿಗಳು ವಿಲೇವಾರಿ ಮಾಡಿವೆ. ಕಳೆದ ವರ್ಷ 11,873 ಪ್ರಕರಣ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದೆ.

ವಿದೇಶಿ ನ್ಯಾಯಮಂಡಳಿಗಳು ಸೇರಿ ಎಲ್ಲವನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಕರೆತರಲು ಅಸ್ಸೋಂ ರಾಜ್ಯದಲ್ಲಿ ಇ-ವಿದೇಶಿಯರ ನ್ಯಾಯಮಂಡಳಿ ಪೋರ್ಟಲ್​ಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.