ಬರೇಲಿ(ಉತ್ತರ ಪ್ರದೇಶ): ಮನೆಗೆ ಬೇಕಾಗಿದ್ದ ವಸ್ತುಗಳನ್ನು ಖರೀದಿಸಲು ಹತ್ತಿರದ ಮಾರುಕಟ್ಟೆಗೆ ತೆರಳಿದ್ದ ವೇಳೆ ಅಪ್ರಾಪ್ತೆಯ ಮೇಲೆ ಇಬ್ಬರು ಕಾಮುಕರು ಅತ್ಯಾಚಾರವೆಸಗಿದ್ದಾರೆ. ಉತ್ತರ ಪ್ರದೇಶದ ಶಹಜಹಾನ್ಪುರ್ದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.
14 ವರ್ಷದ ಬಾಲಕಿ ಮನೆಗೆ ಬೇಕಾಗಿದ್ದ ಕೆಲ ವಸ್ತುಗಳನ್ನು ಖರೀದಿ ಮಾಡಲು ಹತ್ತಿರದ ಮಾರುಕಟ್ಟೆಗೆ ತೆರಳಿದ್ದಳು. ಈ ವೇಳೆ ಲ್ಯಾಬ್ ಟೆಕ್ನಿಷಿಯನ್ ಹಾಗೂ ಸಿಬ್ಬಂದಿ ಕ್ಲಿನಿಕ್ನೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳನ್ನು ರಾಮಬಾಬು, ಆತನ ಸಹಾಯಕ ಸಿಬ್ಬಂದಿ ಎಂದು ಗುರುತಿಸಲಾಗಿದೆ. ನೋವಿನಿಂದ ಅಳುತ್ತಾ ಮನೆಗೆ ಬಂದಾಗ ಸತ್ಯಾಂಶ ಬಹಿರಂಗಗೊಂಡಿದೆ.
ಹೊಡೆದು, ಬೆದರಿಕೆ ಹಾಕಿದ ಆರೋಪಿಗಳು
ಬಾಲಕಿ ಮೇಲೆ ದುಷ್ಕೃತ್ಯವೆಸಗಿದ ನಂತರ ಆಕೆಯ ಮೇಲೆ ಹಲ್ಲೆ ಮಾಡಿರುವ ಕಾಮುಕರು ಘಟನೆ ಬಗ್ಗೆ ಬಾಯ್ಬಿಡದಂತೆ ಬೆದರಿಕೆ ಹಾಕಿದ್ದಾರೆ. ಬಾಲಕಿಗೆ ಈಗಾಗಲೇ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ಖಚಿತಗೊಂಡಿದೆ.
ಇದನ್ನೂ ಓದಿ: 21 ವರ್ಷಕ್ಕೆ ಬಿಹಾರದ ಗ್ರಾಮ ಪಂಚಾಯಿತಿ ಅಧ್ಯಕ್ಷೆ: ಈಕೆ ಪದವಿ ಪಡೆದಿದ್ದು ಕರ್ನಾಟಕದಲ್ಲಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಎಸ್ಹೆಚ್ಒ ಅಜಬ್ ಸಿಂಗ್, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಾಗಿದ್ದು, ಪೊಕ್ಸೊ ಕಾಯ್ದೆಯಡಿ ಅಪರಾಧಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಆರೋಪಿಗಳ ಬಂಧನ ಮಾಡಲಾಗುವುದು ಎಂದು ತಿಳಿಸಿದ್ದಾರೆ.