ETV Bharat / bharat

ಜಮ್ಮು ಕಾಶ್ಮೀರ: ರಾಷ್ಟ್ರಗೀತೆಗೆ ಎದ್ದು ನಿಲ್ಲದೇ ಅಗೌರವ; 14 ಜನರ ಬಂಧನ - ಈಟಿವಿ ಭಾರತ ಕನ್ನಡ

ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲದೇ ಅಗೌರವ ತೋರಿದ ಜನರನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ರಾಷ್ಟ್ರಗೀತೆಗೆ ಅಗೌರವ ತೋರಿದ 14 ಜನರ ಬಂಧನ
ರಾಷ್ಟ್ರಗೀತೆಗೆ ಅಗೌರವ ತೋರಿದ 14 ಜನರ ಬಂಧನ
author img

By

Published : Jul 6, 2023, 1:43 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ರಾಷ್ಟ್ರಗೀತೆಗೆ ಅಗೌರವ ತೋರಿದ 14 ಜನರನ್ನು ಬಂಧಿಸಿರುವ ಘಟನೆ ಶ್ರೀನಗರದಲ್ಲಿ ನಡೆದಿದೆ. ಕಳೆದ ತಿಂಗಳು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಗಾಯನ ಸಂದರ್ಭ ಕೆಲವರು ಎದ್ದು ನಿಲ್ಲದೇ ಅಗೌರವ ತೋರಿಸಿದ್ದರು. ಇದೀಗ ಘಟನೆ ಸಂಬಂಧ ಎಲ್ಲರನ್ನೂ ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುರುವಾರ ಹೇಳಿದ್ದಾರೆ.

ಈ ಬಗ್ಗೆ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಾತನಾಡಿ, "ಜೂನ್ 25ರಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪೆಡಲ್ ಫಾರ್ ಪೀಸ್ ಸೈಕ್ಲಿಂಗ್ ಸಮಾರಂಭದ ಸಮಾರೋಪ ಸಮಾರಂಭ ಕಾರ್ಯಕ್ರಮ ಆಯೋಜಿಸಿದ್ದರು. ಲೆಫ್ಟಿನೆಂಟ್​ ಗವರ್ನರ್​ ಮನೋಜ್​ ಸಿನ್ಹಾ ಅವರು ಭಾಗಿಯಾಗಿದ್ದರು. ರಾಷ್ಟ್ರಗೀತೆ ಹೇಳುತ್ತಿದ್ದ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲವರು ಎದ್ದು ನಿಲ್ಲದೆ ಅಗೌರವ ತೋರಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಮ್ಮು ಮತ್ತು ಕಾಶ್ಮೀರ ಆಡಳಿತವು ಅಗೌರವ ಪ್ರದರ್ಶಿಸಿದವರ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅಲ್ಲದೇ ಕೆಲವು ಪೊಲೀಸ್​ ಸಿಬ್ಬಂದಿಯನ್ನು ಕೂಡಾ ಅಮಾನತುಗೊಳಿಸಲಾಗಿದೆ. ರಾಷ್ಟ್ರಗೀತೆ ಪ್ರಾರಂಭಕ್ಕೂ ಮುನ್ನ ಎಲ್ಲರೂ ಎದ್ದುನಿಂತಿರುವುದನ್ನು ಖಚಿತಪಡಿಸದೇ ಸಿಬ್ಬಂದಿ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಅಮಾನತು ಮಾಡಲಾಗಿದೆ" ಎಂದು ಅವರು ತಿಳಿಸಿದರು.

ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 107 ರ ಅಡಿ ಪ್ರಕರಣ ದಾಖಲಿಸಲಾಗಿದೆ. ಬಂಧನಕ್ಕೊಳಗಾದ ಎಲ್ಲರನ್ನೂ ಶ್ರೀನಗರದ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಈ ವರ್ಷದ 'ಪೆಡಲ್ ಫಾರ್ ಪೀಸ್' ಕಾರ್ಯಕ್ರಮದಲ್ಲಿ 8 ವಿಭಾಗಗಳಲ್ಲಿ 2,557 ಸೈಕ್ಲಿಸ್ಟ್‌ಗಳು ಭಾಗವಹಿಸಿದ್ದರು. ಲೆಫ್ಟಿನೆಂಟ್ ಗವರ್ನರ್ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದ್ದರು.

ಉತ್ತರಪ್ರದೇಶದಲ್ಲೂ ಇಂತಹದ್ದೇ ಘಟನೆ: ಉತ್ತರಪ್ರದೇಶದ ಮೀರತ್ ಜಿಲ್ಲೆಯ ಈದ್ಗಾ ಪ್ರದೇಶದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪದ ಮೇಲೆ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ರಾಷ್ಟ್ರಗೀತೆ ಮೊಳಗುವಾಗ ಯುವಕರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ತನಿಖೆಯ ವೇಳೆ, ಅವರಲ್ಲಿ ಇಬ್ಬರನ್ನು ಅದ್ನಾನ್ ಮತ್ತು ರುಹಾಲ್ ಎಂದು ಗುರುತಿಸಲಾಗಿತ್ತು. ರಾಷ್ಟ್ರಗೀತೆ ಗಾಯನದ ವೇಳೆ ಯುವಕರು ಗೇಲಿ ಮಾಡುತ್ತಿರುವುದು ಕಂಡುಬಂದಿತ್ತು. ಯುವಕನೊಬ್ಬ ರಾಷ್ಟ್ರಗೀತೆ ಪ್ರಾರಂಭದಲ್ಲಿ ಸೆಲ್ಯೂಟ್ ಸಲ್ಲಿಸಿ ರಾಷ್ಟ್ರಗೀತೆ ಆರಂಭವಾದ ಸ್ವಲ್ಪ ನಂತರ ಯುವಕ ನೃತ್ಯ ಮಾಡಿ ಅಗೌವರ ತೋರಿದ್ದ.

ಇದನ್ನೂ ಓದಿ: ರಾಷ್ಟ್ರಗೀತೆಗೆ ಅಗೌರವ: ಮೂವರು ಯುವಕರ ವಿರುದ್ಧ ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.