ETV Bharat / bharat

ತೆಲಂಗಾಣದಲ್ಲಿ ಒಂದೇ ದಿನ 14 ಒಮಿಕ್ರಾನ್​ ಕೇಸ್​ ಪತ್ತೆ.. ನಾನ್​ ರಿಸ್ಕ್​ ದೇಶಗಳಿಂದ ಬಂದ ಹೆಚ್ಚು ಜನಕ್ಕೆ ವೈರಸ್​ ದೃಢ! - ತೆಲಂಗಾಣ ಒಮಿಕ್ರಾನ್​ ಪ್ರಕರಣಗಳ ಸುದ್ದಿ

ತೆಲಂಗಾಣ ರಾಜ್ಯದಲ್ಲಿ ಒಂದೇ ದಿನ 14 ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.

omicron variant cases were registered, omicron variant cases were registered in Telangana state, Telangana omicron variant cases, Telangana omicron variant news, Telangana omicron variant update, ಒಮಿಕ್ರಾನ್​ ಪ್ರಕರಣಗಳು ದಾಖಲು, ತೆಲಂಗಾಣ ರಾಜ್ಯದಲ್ಲಿ ಒಮಿಕ್ರಾನ್​ ಪ್ರಕರಣಗಳು ದಾಖಲು, ತೆಲಂಗಾಣ ಒಮಿಕ್ರಾನ್​ ಪ್ರಕರಣಗಳು, ತೆಲಂಗಾಣ ಒಮಿಕ್ರಾನ್​ ಪ್ರಕರಣಗಳ ಸುದ್ದಿ, ತೆಲಂಗಾಣ ಒಮಿಕ್ರಾನ್​ ಪ್ರಕರಣಗಳ ಅಪ್​ಡೇಟ್​,
ತೆಲಂಗಾಣ ರಾಜ್ಯದಲ್ಲಿ ಒಂದೇ ದಿನ 14 ಒಮಿಕ್ರಾನ್​ ಪ್ರಕರಣಗಳು ಪತ್ತೆ... ಜನರಲ್ಲಿ ಹೆಚ್ಚಾದ ಭಯ!
author img

By

Published : Dec 23, 2021, 6:50 AM IST

Updated : Dec 23, 2021, 7:27 AM IST

ಹೈದರಾಬಾದ್(ತೆಲಂಗಾಣ)​: ರಾಜ್ಯದಲ್ಲಿ ಮತ್ತೆ 14 ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಪ್ರಕರಣಗಳು ಸೇರಿದಂತೆ ತೆಲಂಗಾಣ ರಾಜ್ಯದಲ್ಲಿ ಒಟ್ಟು 38 ಒಮಿಕ್ರಾನ್​ ಪ್ರಕರಣಗಳು ಕಂಡು ಬಂದಿವೆ. ನಾನ್​ ರಿಸ್ಕ್​ ದೇಶಗಳಿಂದ ಬಂದ 12 ಜನರಲ್ಲಿ ಒಮಿಕ್ರಾನ್​ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಿಸ್ಕ್​ ದೇಶಗಳಿಂದ ಬಂದ ಇಬ್ಬರಲ್ಲಿ ಒಮಿಕ್ರಾನ್​ ವೆರಿಯಂಟ್​ ಪತ್ತೆಯಾಗಿರುವುದು ತಿಳಿದು ಬಂದಿದೆ. ಇಲ್ಲಿಯವರೆಗೆ ರಿಸ್ಕ್​ ದೇಶದಿಂದ ಬಂದ ಆರು ಜನರಲ್ಲಿ ಒಮಿಕ್ರಾನ್​ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈವರೆಗೆ ನಾನ್​ ರಿಸ್ಕ್​ ದೇಶದಿಂದ ಬಂದ ಒಟ್ಟು 31 ಜನರಲ್ಲಿ ಒಮಿಕ್ರಾನ್​ ಪತ್ತೆಯಾಗಿದ್ದು, ಒಂದು ಕೇಸ್​ ಮಾತ್ರ ಒಮಿಕ್ರಾನ್ ಸೋಂಕಿತರ ಸಂಪರ್ಕದಿಂದ ಬಂದಿರುವುದು​ ಗೊತ್ತಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್​ಗೆ ಸೇರಿದ ಭಾರತಿ ವಿಷ್ಣುವರ್ಧನ್ ಕುರಿತಾದ ಸಾಕ್ಷ್ಯಚಿತ್ರ!

RTPCR test in airport: ಇದುವರೆಗೆ ರಿಸ್ಕ್​ ದೇಶಗಳಿಂದ ಬಂದ 9,381 ಪ್ರಯಾಣಿಕರನ್ನು ಏರ್​ಪೋರ್ಟ್​ನಲ್ಲಿ ಕೋವಿಡ್ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ 63 ಮಂದಿಗೆ ಕೋವಿಡ್ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಅಧಿಕಾರಿಗಳು ಅವರೆಲ್ಲರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್​ಗೆ ಕಳುಹಿಸಿದ್ದಾರೆ. ಅವರಲ್ಲಿ 22 ಮಂದಿ ಈಗಾಗಲೇ ಒಮಿಕ್ರಾನ್ ನೆಗೆಟಿವ್ ಪಡೆದಿದ್ದಾರೆ. ಉಳಿದವುಗಳಲ್ಲಿ 38 ಒಮಿಕ್ರಾನ್‌ ಪತ್ತೆಯಾಗಿವೆ. ಇನ್ನೂ ನಾಲ್ಕು ಫಲಿತಾಂಶಗಳು ಬರುವ ನಿರೀಕ್ಷೆಯಿದೆ.

corona cases in Telangana state : ತೆಲಂಗಾಣದಲ್ಲಿ ಕಳೆದ 24 ಗಂಟೆಗಳಲ್ಲಿ 37,353 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, 182 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಇದುವರೆಗೆ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 6,80,074ಕ್ಕೆ ಏರಿಕೆಯಾಗಿದೆ. ಈ ಕುರಿತು ವೈದ್ಯಕೀಯ ಆರೋಗ್ಯ ಇಲಾಖೆ ಬುಲೆಟಿನ್ ಬಿಡುಗಡೆ ಮಾಡಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಒಬ್ಬ ವ್ಯಕ್ತಿ ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿಯವರೆಗೆ ಸಾವಿನ ಸಂಖ್ಯೆ 4,017 ಕ್ಕೆ ಏರಿದೆ. ನಿನ್ನೆ ಕೊರೊನಾದಿಂದ 196 ಮಂದಿ ಚೇತರಿಸಿಕೊಂಡಿದ್ದು, ರಾಜ್ಯದಲ್ಲಿ ಪ್ರಸ್ತುತ 3,610 ಸಕ್ರಿಯ ಪ್ರಕರಣಗಳಿವೆ.

Last Updated : Dec 23, 2021, 7:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.