ರಾಜ್ಕೋಟ್(ಗುಜರಾತ್): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಅತೀ ವೇಗವಾಗಿ ಹಬ್ಬುತ್ತಿದೆ. ಪೊಲೀಸ್ ಇಲಾಖೆಯಲ್ಲೂ ಕೊರೊನಾ ಸೋಂಕು ಅತೀವ ಭಯ ಸೃಷ್ಟಿಸುತ್ತಿದೆ. ಹೀಗಾಗಿ ಪೊಲೀಸ್ ಆಯುಕ್ತರು ಈ ಸಾಂಕ್ರಾಮಿಕ ಕೊರೊನಾ ಚೈನ್ ಮುರಿಯಲು ಕರೆ ನೀಡಿದ್ದಾರೆ.
371 ಪೊಲೀಸರಿಗೆ ಕೊರೊನಾ..
ಇಲ್ಲಿಯವರೆಗೆ ಡಿಸಿಪಿ, ಪಿಐ, ಪಿಎಸ್ಐ ಸೇರಿದಂತೆ ಒಟ್ಟು 371 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಕೊರೊನಾ ಸೋಂಕಿನಿಂದ ಅನೇಕ ಪೊಲೀಸರು ಸಹ ಚೇತರಿಸಿಕೊಂಡಿದ್ದಾರೆ.
ಪ್ಲಾಸ್ಮಾ ನೀಡುವಂತೆ ಕಮಿಷನರ್ ಕರೆ..
ಕೊರೊನಾ ವಿರುದ್ಧ ಹೋರಾಡಲು ಮತ್ತು ಕೊರೊನಾ ಸೋಂಕಿತರ ರಕ್ಷಣಗೆ ಸರ್ಕಾರದ ಅನೇಕ ಸಂಘ ಸಂಸ್ಥೆಗಳು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಪ್ಲಾಸ್ಮಾ ದಾನ ಮಾಡಲು ಮುಂದೆ ಬರುವಂತೆ ಪೊಲೀಸ್ ಆಯುಕ್ತರು ಕರೆ ನೀಡಿದ್ದಾರೆ.
ಪ್ಲಾಸ್ಮಾ ದಾನ ಮಾಡುವ ಇಚ್ಛೆಯುಳ್ಳವರು ಪಿಎಸ್ಐ ಎಂ.ಎನ್ ಬೊರಿಸಾಗರ್ (8980041411) ನಂಬರ್ಗೆ ಕರೆ ಮಾಡುವಂತೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪಿಎಸ್ಐ ಹೇಳಿದ್ದೇನು?
ಈಗಾಗಲೇ ಕೊರೊನಾದಿಂದ ಗುಣಮುಖರಾದ 14 ಪೊಲೀಸರಿಂದ ಪ್ಲಾಸ್ಮಾ ಪಡೆಯಲಾಗಿದೆ. ಪೊಲೀಸರು ಪ್ಲಾಸ್ಮಾ ದಾನ ಮಾಡುವುದನ್ನು ಮುಂದುವರೆಸುತ್ತಿದ್ದಾರೆ. ಆದರೆ ಅವರಲ್ಲಿ ಕೇವಲ ಶೇ.50ರಷ್ಟು ಜನರು ಮಾತ್ರ ತಮ್ಮ ಪ್ಲಾಸ್ಮಾವನ್ನು ದಾನ ಮಾಡಬಹುದಾಗಿದೆ. ಏಕೆಂದರೆ ಅವರ ಆ್ಯಂಟಿಬಾಡಿಸ್ ಹೊಂದಿಕೆಯಾಗುತ್ತಿಲ್ಲ. ಪ್ರತಿದಿನ ಕನಿಷ್ಠ ಆರು ಪೊಲೀಸರು ಸ್ವಯಂಪ್ರೇರಣೆಯಿಂದ ತಮ್ಮ ಪ್ಲಾಸ್ಮಾವನ್ನು ದಾನ ಮಾಡುತ್ತಿದ್ದಾರೆ ಎಂದು ಪಿಎಸ್ಐ ಹೇಳಿದರು.