ಜೈಪುರ(ರಾಜಸ್ಥಾನ): ರಾಜಧಾನಿಯ ಹರ್ಮಾಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೈಬರ್ ಹ್ಯಾಕಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸೈಬರ್ ಹ್ಯಾಕರ್ 13 ವರ್ಷದ ಬಾಲಕನಿಗೆ ಬೆದರಿಕೆ ಹಾಕುವ ಮೂಲಕ ಆತನ ಪೋಷಕರ 3 ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಿದ್ದಾನೆ.
ಸೈಬರ್ ಹ್ಯಾಕರ್ ಬಾಲಕನಿಗೆ ಬೆದರಿಕೆ ಹಾಕುತ್ತಿದ್ದನಂತೆ. ಬೇರೆ ಬೇರೆ ಟಾಸ್ಕ್ ಗಳನ್ನು ನೀಡಿ, ಟಾಸ್ಕ್ ಪೂರ್ಣಗೊಳಿಸದಿದ್ದರೆ ಪೋಷಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. ಇದರಿಂದ ಬೆದರಿದ ಬಾಲಕ ಹ್ಯಾಕರ್ ಹೇಳಿದ ಎಲ್ಲಾ ಕೆಲಸಗಳನ್ನು ಮಾಡುತ್ತಲೇ ಇದ್ದ. ಆದರೆ, ನಿನ್ನೆ(ಸೋಮವಾರ) ಸಂಜೆ ಈ ವಿಷಯ ಬಯಲಾಗಿದೆ. ಸೈಬರ್ ಹ್ಯಾಕರ್‌ಗಳನ್ನು ಪತ್ತೆಹಚ್ಚಲು ಪೊಲೀಸ್ ಕಮಿಷನರೇಟ್‌ನ ಸೈಬರ್ ಸೆಲ್ ಜಮಾಯಿಸಿದ್ದು, ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: 8ನೇ ತರಗತಿಯಲ್ಲಿ ಓದುತ್ತಿರುವ 13 ವರ್ಷದ ಬಾಲಕ ಪರಿಚಯಸ್ಥರ ಮೊಬೈಲ್‌ನಲ್ಲಿ ಆನ್‌ಲೈನ್ ಆಟವಾಡುತ್ತಿರುತ್ತಾನೆ. ಈ ಸಮಯದಲ್ಲಿ, ಅವನಿಗೆ ಕೆಲವರು ಸ್ನೇಹಿತರಾದರು. ಅವರಲ್ಲಿ ಯಾರೋ ಲಿಂಕ್ ಕಳುಹಿಸಿ ಅದರಲ್ಲಿ ಪೋಷಕರ ಫೋನ್ ಸಂಖ್ಯೆ ಮತ್ತು ಇತರ ಮಾಹಿತಿಯನ್ನು ಭರ್ತಿ ಮಾಡಲು ಹೇಳಿದ್ದಾರೆ. ಬಳಿಕ ತಮ್ಮ ಸಂಬಂಧಿಕರ ಮೊಬೈಲ್ ಸಂಖ್ಯೆಗಳು ಮತ್ತು ಮೊಬೈಲ್‌ನಲ್ಲಿರುವ ಒಟಿಪಿಯನ್ನು ಸೈಬರ್ ಹ್ಯಾಕರ್‌ಗಳೊಂದಿಗೆ ಹಂಚಿಕೊಂಡಿದ್ದಾರೆ.
ಇದಾದ ನಂತರ ಸೈಬರ್ ಹ್ಯಾಕರ್ ತನ್ನ ಕುಟುಂಬ ಸದಸ್ಯರ ಮೊಬೈಲ್ ನಲ್ಲಿ ಹ್ಯಾಕಿಂಗ್ ಆ್ಯಪ್ ಇನ್ ಸ್ಟಾಲ್ ಮಾಡಿಕೊಂಡಿದ್ದಾನೆ. ಈ ಮೂಲಕ ಬಾಲಕನ ಕುಟುಂಬಸ್ಥರ ಮೂರು ಮೊಬೈಲ್ ಗಳನ್ನು ಹ್ಯಾಕ್ ಮಾಡಿ ಅವರ ಸಾಮಾಜಿಕ ಜಾಲತಾಣ ಖಾತೆ ತೆರೆದು ಪರಿಚಯಸ್ಥರ ಮೊಬೈಲ್‌ನಲ್ಲಿ ಅಶ್ಲೀಲ ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ. ಆಗ ಬಾಲಕನ ಕುಟುಂಬಸ್ಥರ ಮೊಬೈಲ್ ನಲ್ಲಿ ವಿಚಿತ್ರ ಅನಿಮೇಷನ್ ಗಳು ಬರತೊಡಗಿವೆ.
ಸೈಬರ್ ಹ್ಯಾಕರ್‌ಗಳು ನಿರಂತರವಾಗಿ ಬಾಲಕನನ್ನು ಬೆದರಿಸುತ್ತಿದ್ದರು ಮತ್ತು ಕುಟುಂಬಸ್ಥರಿಗೆ ತನ್ನ ಮೇಲೆ ಅನುಮಾನ ಬರಬಾರದು ಹಾಗೂ ಯಾರೋ ತಮ್ಮ ಮೇಲೆ ಗೂಢಚಾರಿಕೆ ನಡೆಸುತ್ತಿದ್ದಾರೆ ಎಂಬ ಭಾವನೆ ಮನೆಯವರಿಗೆ ಬರಲಿ ಎಂದು ಸೈಬರ್ ಹ್ಯಾಕರ್ ಟಾಸ್ಕ್ ನೀಡಿದ್ದಾನೆ. ಮನೆಯ ಪ್ರತಿಯೊಂದು ಮೂಲೆಯಲ್ಲಿ ಟೇಪ್ನೊಂದಿಗೆ ಸಾಧನವನ್ನು ಗೋಡೆಯ ಮೇಲೆ ಅಂಟಿಸಲು ಹೇಳಿದ್ದಾರೆ.
ಮೊಬೈಲ್‌ನಲ್ಲಿ ವಿಚಿತ್ರ ಅನಿಮೇಷನ್‌ಗಳು ಮತ್ತು ಮನೆಯ ಗೋಡೆಗಳಿಗೆ ಚಿಪ್ ಮತ್ತು ವೈರ್ ಅಂಟಿಕೊಂಡಿದ್ದರಿಂದ, ಬಾಲಕನ ಕುಟುಂಬಸ್ಥರು ತಮ್ಮ ಮೇಲೆ ಯಾರೋ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಭಾವಿಸಿದರು. ಈ ಸಂಬಂಧ ಅವರು ಸೋಮವಾರ ಸಂಜೆ ಹರ್ಮಾಡಾ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಪೊಲೀಸರು ಅವರು ಭೇಟಿ ನೀಡಿ ತನಿಖೆ ಆರಂಭಿಸಿದಾಗ ವಿಚಾರ ಬಯಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕ್ಷಿಪ್ರ ಕ್ರಾಂತಿಯೇ?..11 ಶಾಸಕರ ಜೊತೆ ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ನಾಪತ್ತೆ