ETV Bharat / bharat

ಪುಣೆ ಬಾಲಕಿ ಮೇಲೆ 13 ದುಷ್ಕರ್ಮಿಗಳಿಂದ ಗ್ಯಾಂಗ್‌ರೇಪ್​: ಅಮಾನವೀಯ ಘಟನೆ ವಿವರಿಸಿದ ಸಂತ್ರಸ್ತೆ! - ಚಂಡೀಗಢ ಇತ್ತೀಚಿನ ಸುದ್ದಿ

13 ಮಂದಿ ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೊಳಗಾಗಿ ರಕ್ಷಣೆಯಾಗಿರುವ ಬಾಲಕಿ ನಡೆದ ಘಟನೆಯನ್ನು ವಿವರವಾಗಿ ಪೊಲೀಸರಿಗೆ ತಿಳಿಸಿದ್ದಾಳೆ.

Girl rape
Girl rape
author img

By

Published : Sep 8, 2021, 8:37 PM IST

ಚಂಡೀಗಢ (ಹರಿಯಾಣ): 14 ವರ್ಷದ ಅಪ್ರಾಪ್ತೆಯ ಮೇಲೆ 13 ಮಂದಿ ಕಾಮುಕರು ಅತ್ಯಾಚಾರವೆಸಗಿರುವ ಅಮಾನವೀಯ ಪ್ರಕರಣ ಕಳೆದೆರಡು ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. ಈ ಘಟನೆ ಬೆಳಕಿಗೆ ಬಂದ ಬಳಿಕ ಬಾಲಕಿಯನ್ನು ರೈಲ್ವೆ ಪೊಲೀಸರು ರಕ್ಷಣೆ ಮಾಡಿದ್ದರು.

ಅಪ್ರಾಪ್ತೆ ಮೂಲತಃ ಮಹಾರಾಷ್ಟ್ರದ ಪುಣೆ ನಿವಾಸಿ. ಸ್ನೇಹಿತನೊಂದಿಗೆ ಚಂಡೀಗಢಕ್ಕೆ ಹೋಗುವ ಯೋಜನೆ ಹಾಕಿಕೊಂಡಿದ್ದಳು. ಅದರಂತೆ ಮುಂಬೈ ರೈಲ್ವೇ ನಿಲ್ದಾಣದಲ್ಲಿ ಭೇಟಿಯಾಗಲು ಇಬ್ಬರು ನಿರ್ಧರಿಸಿದ್ದರು. ಪೋಷಕರಿಗೆ ಮಾಹಿತಿ ನೀಡದೇ ಬಾಲಕಿ ಮುಂಬೈ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದಾಳೆ. ಆದರೆ ಅಷ್ಟೊತ್ತಿಗೆ ಆಕೆಯ ಸ್ನೇಹಿತ ಅಲ್ಲಿಗೆ ಬಂದಿರಲಿಲ್ಲ.

ಈ ವೇಳೆ ಆಟೋ ಚಾಲಕನೋರ್ವ ಬಾಲಕಿ ಬಳಿ ಬಂದು ನಿನ್ನ ಸ್ನೇಹಿತ ರೈಲ್ವೆ ನಿಲ್ದಾಣದ ಹೊರಗೆ ಕಾಯುತ್ತಿದ್ದಾನೆಂದು ಹೇಳಿ ಆಟೋ ಹತ್ತಿಸಿಕೊಂಡ. ಬಳಿಕ ತಂಪು ಪಾನೀಯದಲ್ಲಿ ಮತ್ತು ಬರುವ ಮಾತ್ರೆ ಹಾಕಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಆಟೋ ಚಾಲಕ ಹಾಗು ಆತನ 12 ಜನ ಸ್ನೇಹಿತರು ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದಾದ ಬಳಿಕ ಆರೋಪಿ ಆಟೋ ಚಾಲಕ ಮುಂಬೈ ರೈಲ್ವೇ ನಿಲ್ದಾಣದ ಟಿಕೆಟ್​ ಕೌಂಟರ್​ನ​ ಉದ್ಯೋಗಿಯ ಬಳಿ ಆಕೆಯನ್ನು ಬಿಟ್ಟು ಹೋಗಿದ್ದಾನೆ. ಆದ್ರೆ, ಆತನೂ ಕೂಡ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಚಂಡೀಗಢಕ್ಕೆ ಹೋಗುವ ರೈಲ್ವೇ ಟಿಕೆಟ್​ ನೀಡಿದ್ದಾನೆ ಎಂದು ಬಾಲಕಿ ತಿಳಿಸಿದ್ದಾಳೆ.

ಚಂಡೀಗಢಕ್ಕೆ ಬರುತ್ತಿದ್ದಂತೆ ಪೊಲೀಸರು ಪ್ರಶ್ನಿಸಿದಾಗ, ತನ್ನ ಮೇಲೆ ಅತ್ಯಾಚಾರ ನಡೆದಿರುವ ಸಂಗತಿಯನ್ನು ಬಾಲಕಿ ವಿವರಿಸಿದ್ದಾಳೆ. ಈ ವೇಳೆ ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಸಂಗೀತಾ ಜಂದ್ ಕೂಡ ಆಕೆಯ ಜೊತೆ ಮಾತನಾಡಿ, ತಮ್ಮ ವಶಕ್ಕೆ ಪಡೆದುಕೊಂಡಿದ್ದರು.

ಇದನ್ನೂ ಓದಿ: ತೆಲಂಗಾಣದಲ್ಲೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ: ತೇಜಸ್ವಿ ಸೂರ್ಯ

ಪುಣೆ ಪೊಲೀಸರೊಂದಿಗೆ ಮಾತುಕತೆ ನಡೆಸಿದ ಬಳಿಕ ಬಾಲಕಿಯನ್ನು ನಗರಕ್ಕೆ ವಾಪಸ್​ ಕಳುಹಿಸಲಾಗಿದೆ. ಈಗಾಗಲೇ ಪ್ರಕರಣದಲ್ಲಿ ಭಾಗಿಯಾಗಿರುವ 8 ಮಂದಿ ಕಾಮುಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. ಬಾಲಕಿಯನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.