ETV Bharat / bharat

ಮಧ್ಯರಾತ್ರಿ ಹೊತ್ತಿ ಉರಿದ ಗ್ರೋತ್​ ಸೆಂಟರ್​..13ಕ್ಕೂ ಹೆಚ್ಚು ಜನಕ್ಕೆ ಸುಟ್ಟ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ!

ವಿಜಯನಗರಂ ಜಿಲ್ಲೆಯ ಬೊಬ್ಬಿಲಿ ಗ್ರೋತ್ ಸೆಂಟರ್‌ನಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಈ ಬೆಂಕಿ ಅವಘಡದಲ್ಲಿ ಸುಮಾರು 13ಕ್ಕೂ ಹೆಚ್ಚು ಯುವಕರು ಸುಟ್ಟ ಗಾಯಗಳಿಂದ ನರಳುತ್ತಿದ್ದಾರೆ.

fire incident at Andhra Pradesh, people injured in fire incident at Andhra Pradesh, Andhra Pradesh crime news, ಆಂಧ್ರಪ್ರದೇಶದಲ್ಲಿ ಬೆಂಕಿ ಅವಘಡ, ಆಂಧ್ರಪ್ರದೇಶದಲ್ಲಿ ಬೆಂಕಿ ಅವಘಡದಲ್ಲಿ ಹಲವರಿಗೆ ಗಾಯ, ಆಂಧ್ರಪ್ರದೇಶ ಅಪರಾಧ ಸುದ್ದಿ,
ಮಧ್ಯರಾತ್ರಿ ಹೊತ್ತಿ ಉರಿದ ಗ್ರೋತ್​ ಸೆಂಟರ್
author img

By

Published : Jan 29, 2022, 10:22 AM IST

ವಿಜಯನಗರಂ( ಆಂಧ್ರಪ್ರದೇಶ): ಜಿಲ್ಲೆಯ ಬೊಬ್ಬಿಲಿ ಗ್ರೋತ್ ಸೆಂಟರ್ ಬೆರ್ರಿ ಎಂಬ ಉದ್ಯಮದ ಪಕ್ಕದಲ್ಲಿರುವ ಕಾರ್ಮಿಕರ ಕೋಣೆಯಲ್ಲಿ ಗ್ಯಾಸ್ ಲೀಕ್ ಆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, 13 ಯುವಕರು ಸುಟ್ಟ ಗಾಯಗಳಿಂದ ನರಳುತ್ತಿದ್ದಾರೆ.

ಓದಿ: ಹಣಕಾಸು ಯೋಜನೆ: ನಿಮ್ಮ ಗುರಿಗಳನ್ನು ತಲುಪಲು ನೀವು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯಾ?

ಹೌದು, ಕಾರ್ಮಿಕರ ಕೋಣೆಯಲ್ಲಿ ಗ್ಯಾಸ್​ ಲೀಕ್​ ಆದ ಪರಿಣಾಮ ನೋಡ - ನೋಡುತ್ತಲೇ ಕೋಣೆ ತುಂಬೆಲ್ಲ ಬೆಂಕಿ ಆವರಿಸಿಕೊಂಡಿದೆ. ಯುವಕರು ಮನೆಯಿಂದ ಹೊರ ಬರಲು ಸಾಧ್ಯವಾಗದ ಹಿನ್ನೆಲೆ ಅಲ್ಲೇ ಸುಟ್ಟ ಗಾಯಗಳಿಂದ ನರಳಾಡಿದ್ದಾರೆ. ಈ ಅವಘಡದಲ್ಲಿ ಸುಮಾರು 13 ಕಾರ್ಮಿಕರು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಧ್ಯರಾತ್ರಿ ಹೊತ್ತಿ ಉರಿದ ಗ್ರೋತ್​ ಸೆಂಟರ್

ಸಂತ್ರಸ್ತರನ್ನು ವಿಜಯನಗರದ ತಿರುಮಲ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.