ETV Bharat / bharat

ವ್ಯಕ್ತಿಯ ಹೊಟ್ಟೆಯಲ್ಲಿತ್ತು 100 ಗ್ರಾಂ ಪ್ಲಾಸ್ಟಿಕ್​, 3 ಅಡಿ ಉದ್ದದ ಪೈಪ್​.. ವೈದ್ಯಲೋಕಕ್ಕೆ ಅಚ್ಚರಿ - plastic in a man stomach

ಪಶ್ಚಿಮಬಂಗಾಳದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿದ್ದ 100 ಗ್ರಾಂ ಪ್ಲಾಸ್ಟಿಕ್​, 3 ಅಡಿ ಉದ್ದದ ಕಲ್ಮಶಗಳಿಂದ ಕೂಡಿದ ಪೈಪ್​ ಅನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದ ಘಟನೆ ಬೆಳಕಿಗೆ ಬಂದಿದೆ.

100-gm-plastic-3-feet
ವೈದ್ಯಲೋಕಕ್ಕೆ ಅಚ್ಚರಿ
author img

By

Published : Jun 6, 2022, 8:45 PM IST

ಬೋಲ್​ಪುರ(ಪಶ್ಚಿಮ ಬಂಗಾಳ): ಮನುಷ್ಯನ ಹೊಟ್ಟೆಯಲ್ಲಿ ಕರಳು, ಜಠರ ಇರುತ್ತವೆ. ಪ್ಲಾಸ್ಟಿಕ್​, ಪೈಪ್​ ಇರೋದು ಅಸಾಧ್ಯ. ವಿಚಿತ್ರ ಅಂದರೆ ಪಶ್ಚಿಮಬಂಗಾಳದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ 100 ಗ್ರಾಂ ಪ್ಲಾಸ್ಟಿಕ್​ ಮತ್ತು 3 ಅಡಿ ಉದ್ದದ ಪೈಪ್​ ಅನ್ನು ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದ ಘಟನೆ ನಡೆದಿದೆ.

ಬೋಲ್​ಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಹೊಟ್ಟೆ ನೋವೆಂದು ಚಿಕಿತ್ಸೆಗೆ ದಾಖಲಾದ ವ್ಯಕ್ತಿಯನ್ನು ತಪಾಸಣೆ ಮಾಡಿದಾಗ ಹೊಟ್ಟೆಯಲ್ಲಿ ಏನೋ ತುಂಬಿಕೊಂಡಂತೆ ಕಂಡುಬಂದಿದೆ. ಈ ವೇಳೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೇ ಅಚ್ಚರಿ ಪಡುವಂತೆ 100 ಗ್ರಾಂ ಪ್ಲಾಸ್ಟಿಕ್​ ಹೊಟ್ಟೆಯಲ್ಲಿ ಕಂಡು ಬಂದಿದೆ. ಇದಲ್ಲದೇ, ಕಲ್ಮಶಗಳಿಂದ ಕೂಡಿದ 3 ಅಡಿ ಉದ್ದ 3 ಇಂಚು ದಪ್ಪ ಇರುವ ಪೈಪ್​ನಂತೆ ಕಂಡು ಬಂದ ವಸ್ತುವನ್ನೂ ಕೂಡ ಹೊಟ್ಟೆಯಿಂದ ತೆಗೆಯಲಾಗಿದೆ.

ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು 'ನೆಕ್ರೋಟಿಕ್ ಸಿಗ್ಮೋಯ್ಡ್ ವೋಲ್ವೋಲಾಸ್' ಎಂದು ಕರೆಯುತ್ತಾರೆ. ಹೊಟ್ಟೆಯೊಳಗೆ ಗ್ಯಾಸ್ ಫ್ಲೂಯಿಡ್​ನಿಂದ ತುಂಬಿದ 3 ಅಡಿ ಉದ್ದ ಮತ್ತು 6 ಇಂಚು ಅಗಲದ ಪೈಪ್‌ನಂತಿದ್ದ ಕಲ್ಮಶವನ್ನು ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬೋಲ್​ಪುರ ಉಪವಿಭಾಗೀಯ ಆಸ್ಪತ್ರೆಯ ವೈದ್ಯ ಚಂದ್ರನಾಥ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಮಾತನಾಡಿ, ವ್ಯಕ್ತಿಯ ಹೊಟ್ಟೆಗೆ ಇಷ್ಟೊಂದು ಪ್ಲಾಸ್ಟಿಕ್ ಹೋಗಿ ಅದು ಪೈಪ್ ಆಗಿ ತಯಾರಾಗಿದ್ದು, ಹೇಗೆ ಎಂಬುದು ತಿಳಿಯುತ್ತಿಲ್ಲ. ಶಸ್ತ್ರಚಿಕಿತ್ಸೆಯ ನಂತರ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಓದಿ: 17ನೇ ವಯಸ್ಸಿಗೇ ಲೈಂಗಿಕ ಕಿರುಕುಳ ನೀಡಿದ್ದ 'ಅಂಕಲ್​': ನಟಿ ಕುಬ್ರಾ ಸೇಠ್ ಬಿಚ್ಚಿಟ್ಟರು ಕಹಿ ಅನುಭವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.