ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ 10 ಅಡಿ ಉದ್ದದ ದೋಸೆ ಸಖತ್ ಫೇಮಸ್ ಆಗ್ತಿದೆ. ತನ್ನ ಗಾತ್ರ ಹಾಗೂ ರುಚಿಯಿಂದಾಗಿ ಜನರನ್ನು ಆಕರ್ಷಿಸುತ್ತಿದೆ.
ಬಿಂದಾಪುರದ ಶಕ್ತಿ ಸಾಗರ್ ರೆಸ್ಟೋರೆಂಟ್ನಲ್ಲಿ 10 ಅಡಿ ಉದ್ದದ ದೋಸೆ ಲಭ್ಯವಿದ್ದು, ಈ ದೋಸೆ ಸವಿಯಲು ಜನರು ಕುಟುಂಬ ಸಮೇತ ಆಗಮಿಸುತ್ತಿದ್ದಾರೆ.
ಈ ರೆಸ್ಟೋರೆಂಟ್‌ನ ಮಾಲೀಕ ಶೇಖರ್ ಕುಮಾರ್ ಶಿಕ್ಷಣ ಪಡೆದವರಲ್ಲ. ಅವರ ತಂದೆ ರಸ್ತೆಯಲ್ಲಿ ದೋಸೆ ಮಾಡಿ ಮಾರಾಟ ಮಾಡುತ್ತಿದ್ದರು. ತಂದೆ ದಾರಿಯನ್ನೇ ಹಿಡಿದ ಮಗ ಬೀದಿಬದಿ ದೋಸೆ ವ್ಯಾಪಾರಿಯಾಗಿ ಹಲವು ವರ್ಷಗಳ ಕಾಲ ದೋಸೆ ಮಾರಿದರು.
ಈ ಹಿಂದೆ ಕೂಡ ಅವರು ನಾಲ್ಕರಿಂದ ಏಳು ಅಡಿಗಳಷ್ಟು ಉದ್ದದ ದೋಸೆ ಮಾಡುತ್ತಿದ್ದರು. ಜನರು ಅದನ್ನು ತುಂಬಾ ಇಷ್ಟಪಡುತ್ತಿದ್ದರು. ಈಗ ಅವರು ರೆಸ್ಟೋರೆಂಟ್ ಆರಂಭಿಸಿದ್ದು, 10 ಅಡಿ ಉದ್ದದ ದೋಸೆ ತಯಾರಿಸುತ್ತಾರೆ.
ಈ ಉದ್ದದ ದೋಸೆ ಇಲ್ಲಿಗೆ ಬರುವ ಜನರಿಗೆ ತುಂಬಾ ಇಷ್ಟವಾಗುತ್ತದೆ, ಬಹಳ ರುಚಿಕರ ಹಾಗೂ ಇಲ್ಲಿ ಬಡಿಸುವ ವಿಧಾನ ಕೂಡ ಅಚ್ಚುಕಟ್ಟಾಗಿದೆ ಎಂದು ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.