ನವದೆಹಲಿ: ಕೊರೊನಾ ವೈರಸ್ ಎರಡನೇ ಅಲೆ ಕಳೆದೆರಡು ವಾರಗಳಿಂದ ಜೋರಾಗಿದ್ದು, ದಿನ ಕಳೆದಂತೆ ಹೆಚ್ಚಿನ ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಇಂದು ಕೂಡ ದೇಶದ ಕೆಲವು ನಗರಗಳಲ್ಲಿ ದಾಖಲೆಯ ಮಟ್ಟದಲ್ಲಿ ಪ್ರಕರಣಗಳು ಕಂಡು ಬಂದಿರುವ ಕಾರಣ ಕೇಂದ್ರ ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ.
-
There are 10 districts across the country that have the most number of active cases - Pune, Mumbai, Nagpur, Thane, Nashik, Aurangabad, Bengaluru Urban, Nanded, Delhi and Ahmednagar: Union Health Secretary Rajesh Bhushan#COVID19 pic.twitter.com/SkbzfPHgy6
— ANI (@ANI) March 30, 2021 " class="align-text-top noRightClick twitterSection" data="
">There are 10 districts across the country that have the most number of active cases - Pune, Mumbai, Nagpur, Thane, Nashik, Aurangabad, Bengaluru Urban, Nanded, Delhi and Ahmednagar: Union Health Secretary Rajesh Bhushan#COVID19 pic.twitter.com/SkbzfPHgy6
— ANI (@ANI) March 30, 2021There are 10 districts across the country that have the most number of active cases - Pune, Mumbai, Nagpur, Thane, Nashik, Aurangabad, Bengaluru Urban, Nanded, Delhi and Ahmednagar: Union Health Secretary Rajesh Bhushan#COVID19 pic.twitter.com/SkbzfPHgy6
— ANI (@ANI) March 30, 2021
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳು, ಕರ್ನಾಟಕದ ಬೆಂಗಳೂರು ನಗರ ಸೇರಿ 10 ಜಿಲ್ಲೆಗಳಲ್ಲಿ ಸೋಂಕಿತ ಪ್ರಕರಣ ಹೆಚ್ಚಾಗಿ ದಾಖಲಾಗುತ್ತಿವೆ. ಮಹಾರಾಷ್ಟ್ರದ ಪುಣೆ, ಮುಂಬೈ, ನಾಗ್ಪುರ, ನಾಶಿಕ್, ಔರಂಗಾಬಾದ್, ನಾಂದೇಡ, ದೆಹಲಿ ಹಾಗೂ ಅಹಮದನಗರನಲ್ಲಿ ಹೆಚ್ಚಿನ ಪ್ರಕರಣ ದಾಖಲಾಗಿವೆ ಎಂದು ವಿವರಿಸಿದರು.
ಪುಣೆಯಲ್ಲಿ 59,475, ಮುಂಬೈನಲ್ಲಿ 46,248, ನಾಗ್ಪುರ್ 45,322, ಥಾಣೆ 35,264, ನಾಶಿಕ್ 26,553, ಔರಂಗಾಬಾದ್ 21,282, ಬೆಂಗಳೂರು ಗ್ರಾಮಾಂತರ 16,259, ನಾಂದೇಡ 15,171, ದೆಹಲಿ 8,032 ಹಾಗೂ ಅಹಮದನಗರನಲ್ಲಿ 7,952 ಪ್ರಕರಣ ದಾಖಲಾಗಿವೆ.
ಇದನ್ನೂ ಓದಿ: ಚಿಕ್ಕಪ್ಪ ಕಮಲ್ ಹಾಸನ್ ಪರ ಸುಹಾಸಿನಿ ಮತ ಪ್ರಚಾರ: ವಿಡಿಯೋ
ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಸೋಂಕಿತ ಪ್ರಕರಣ ದಾಖಲಾಗುತ್ತಿರುವುದು ತಲೆನೋವಾಗಿ ಪರಿಣಮಿಸಿದ್ದು, ಇಂದು ಕೂಡ 27,918 ಕೇಸ್ ಕಾಣಿಸಿಕೊಂಡಿವೆ. 139 ಜನರು ಸಾವನ್ನಪ್ಪಿದ್ದಾರೆ. ಉಳಿದಂತೆ ತಮಿಳುನಾಡು, ಮಧ್ಯಪ್ರದೇಶ, ಛತ್ತೀಸ್ಗಢ, ಕರ್ನಾಟಕ ಹಾಗೂ ಪಂಜಾಬ್ನಲ್ಲೂ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 56,211 ಹೊಸ ಕೋವಿಡ್ ಪ್ರಕರಣ ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದ್ದು, 37,028 ಚೇತರಿಕೆ ಹಾಗೂ 217 ಜನರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.
ಏಪ್ರಿಲ್ 1ರಿಂದ ದೇಶಾದ್ಯಂತ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದೇ ವೇಳೆ, ಮಹಾರಾಷ್ಟ್ರದಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡುವ ನಿರ್ಧಾರವನ್ನು ತಳ್ಳಿ ಹಾಕಿದೆ.