ETV Bharat / bharat

ಬ್ಯಾನ್​ ಆದ್ರೂ 1 ಬಿಲಿಯನ್ ಡೌನ್‌ಲೋಡ್​ ಆದ PUBG

PUBG ಮೊಬೈಲ್ ವಿಶ್ವಾದ್ಯಂತ 1 ಬಿಲಿಯನ್ ಡೌನ್‌ಲೋಡ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಹಿನ್ನೆಲೆ ಕಂಪನಿಯು ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 29 ರಷ್ಟು ಆದಾಯವನ್ನು ಹೆಚ್ಚಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

PUBG Mobile completes 1 billion downloads worldwide
ಬ್ಯಾನ್​ ಆದ್ರೂ 1 ಬಿಲಿಯನ್ ಡೌನ್‌ಲೋಡ್​ ಆದ PUBG
author img

By

Published : Mar 26, 2021, 3:24 PM IST

ಬೀಜಿಂಗ್: ವಿಶ್ವದ ಅತ್ಯಂತ ಜನಪ್ರಿಯ ವಿಡಿಯೋ ಗೇಮ್​ಗಳಲ್ಲಿ ಒಂದಾದ PUBG ಚೀನಾ ಹೊರತುಪಡಿಸಿ ಪ್ರಪಂಚದಾದ್ಯಂತ ಒಂದು ಶತಕೋಟಿ ಡೌನ್‌ಲೋಡ್‌ಗಳನ್ನೂ ದಾಟಿದೆ.

ಈ ಗೇಮ್​ ವಿಶ್ವದಾದ್ಯಂತದ ಅತ್ಯಂತ ಹೆಚ್ಚು ಜನಪ್ರಿಯ ಆಟಗಳಲ್ಲಿ ಒಂದಾಗಿದ್ದು, ಇಷ್ಟೊಂದು ಡೌನ್​​ಲೋಡ್​ ಆಗುವ ಮೂಲಕ ಹೊಸ ಮೈಲುಗಲ್ಲನ್ನು ಸಾಧಿಸಿದೆ. ಈ ಸಂಬಂಧ ಟ್ವೀಟ್​ ಮಾಡಿರುವ ಕಂಪನಿ, ಚೀನಾದ ಹೊರಗೆ 1 ಬಿಲಿಯನ್ ಡೌನ್‌ಲೋಡ್‌ಗಳನ್ನು ದಾಟಲು ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದೆ.

ಈ ಡೌನ್​ಲೋಡ್​ಗಳಲ್ಲಿ ಇದು ಮೂರನೇ ಸ್ಥಾನದಲ್ಲಿದ್ದು, ಅಗ್ರ ಎರಡು ಸ್ಥಾನದಲ್ಲಿ ಕಿಲೋ ಗೇಮ್ಸ್‌ನ ಸಬ್‌ವೇ ಸರ್ಫರ್ಸ್ ಮತ್ತು ಕಿಂಗ್ ಡಿಜಿಟಲ್ ಎಂಟರ್‌ಟೈನ್‌ಮೆಂಟ್‌ನ ಕ್ಯಾಂಡಿ ಕ್ರಷ್ ಇವೆ. ಕಂಪನಿಯು ತನ್ನ ಆನ್‌ಲೈನ್ ಗೇಮ್​ ಬಗ್ಗೆ ವರದಿ ಬಿಡುಗಡೆ ಮಾಡುವಾಗ ಈ ಮಾಹಿತಿ ನೀಡಿದೆ.

ನಾಲ್ಕನೇ ತ್ರೈಮಾಸಿಕದಲ್ಲಿ ತನ್ನ ಆದಾಯವು ಶೇಕಡಾ 29 ರಷ್ಟು ಏರಿಕೆಯಾಗಿದೆ ಎಂದು ಕಂಪನಿ ಹೇಳಿದೆ. ಅದೇ ತ್ರೈಮಾಸಿಕದಲ್ಲಿಎರಡು-ಹಿಟ್ ಆಟಗಳಾದ ಹಾನರ್ ಆಫ್ ಕಿಂಗ್ಸ್ ಮತ್ತು ಈ ಪಬ್ಜಿ ಗೇಮ್​ ಕ್ರಮವಾಗಿ ಚೀನಾ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೇಯಾಂಕಗಳನ್ನು ಮುಂದುವರೆಸಿವೆ ಎಂದು ಸಂಸ್ಥೆ ಉಲ್ಲೇಖಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.