ETV Bharat / assembly-elections

ಕೈ ತಪ್ಪಿದ ಬಿಜೆಪಿ ಟಿಕೆಟ್ - ರಾಜೀನಾಮೆಗೆ ಸವದಿ ನಿರ್ಧಾರ.. ನಾಳೆಯೇ ಅಂತಿಮ ತೀರ್ಮಾನ

ಬಿಜೆಪಿಯಲ್ಲಿ ಹಳೆ ತತ್ವ ಸಿದ್ಧಾಂತಕ್ಕೆ ಬೆಲೆ ಇಲ್ಲ. ಸದ್ಯ ಬಿಜೆಪಿ ಪಕ್ಷದಲ್ಲಿ ತುಂಬಾ ಬದಲಾವಣೆ ಆಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ್ ಸವದಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ರಾಜು ಕಾಗೆ ಲಕ್ಷ್ಮಣ ಸವದಿ ಭೇಟಿ
ರಾಜು ಕಾಗೆ ಲಕ್ಷ್ಮಣ ಸವದಿ ಭೇಟಿ
author img

By

Published : Apr 12, 2023, 9:48 AM IST

Updated : Apr 12, 2023, 1:22 PM IST

ರಾಜೀನಾಮೆಗೆ ಸವದಿ ನಿರ್ಧಾರ

ಅಥಣಿ(ಬೆಳಗಾವಿ): ಅಥಣಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿರುವ ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ಕೈ ತಪ್ಪುತಿದ್ದಂತೆ ಬಿಜೆಪಿಯಿಂದ ಹೊರಗಡೆ ಬರುವುದಕ್ಕೆ ನಿರ್ಧಾರ ಮಾಡಿದ್ದು, ನಾಳೆ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಬಿಜೆಪಿ ವರಿಷ್ಠರು ನನಗೆ ಕೊನೆ ಹಂತದಲ್ಲಿ ಟಿಕೆಟ್ ತಪ್ಪಿಸಿದ್ದಾರೆ. ಇದರಿಂದ ನನಗೆ ತೀವ್ರ ನೋವಾಗಿದೆ. ನಾಳೆ ಕಾರ್ಯಕರ್ತರ ಸಭೆ ಕರೆದು ಒಂದು ತೀರ್ಮಾನಕ್ಕೆ ಬರುತ್ತಿದ್ದೇನೆ. ಅಭಿಮಾನಿಗಳು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಎಂದು ಹೇಳಿದ್ದಾರೆ. ನಾಳೆ ಸಂಜೆ ಐದು ಗಂಟೆಗೆ ಒಂದು ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.

ಸಿಎಂ ಬೊಮ್ಮಾಯಿ ಅವರ ಮೇಲೆ‌ ನನಗೆ ಸಿಟ್ಟಿಲ್ಲ. ಅವರು ಇನ್ನು ಉನ್ನತ ಮಟ್ಟಕ್ಕೆ ಬೆಳೆಯಲಿ. ಈ ದೇಶದ ಪ್ರಧಾನಿ ಮಂತ್ರಿ ಆಗಲೆಂದು ಬಯಸುವೆ. ನಾನು ಎಲ್ಲಿಯೇ ಇರಲಿ, ಹೇಗಿಯೇ ಇರಲಿ, ನನಗೊಬ್ಬರು ಗುರುವಿದ್ದಾರೆ. ಅವರ ಹೆಸರು ಹೇಳಲು ಇಚ್ಛಿಸುವುದಿಲ್ಲ. ನನಗೆ ಅವರೇ ಗುರುಗಳು. ಅವರ ಬಗ್ಗೆ ಅಪಾರವಾದ ಪೂಜ್ಯ ಭಾವನೆ ಇದೆ. ಆ ಗುರು ಬಟ್ಟಲಿನಲ್ಲಿ ವಿಷ ಕೊಟ್ರು ಕುಡಿಯುವೆ. ನನ್ನ ನಿರ್ಧಾರವನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದೇನೆ ಅಂತಾ ಸವದಿ ಭಾವುಕರಾದರು.

ಲಕ್ಷ್ಮಣ ಸವದಿ ಬೆಂಬಲಕ್ಕೆ ಯಾವ ನಾಯಕರು ನಿಲ್ಲಲಿಲ್ಲ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಅವರು ಎಲ್ಲೆ ಇದ್ರು ಅವರು ನಮ್ಮ ಸ್ನೇಹಿತರು. ಅವರೇ ಲಕ್ಷ್ಮಣ ಸವದಿ ಒಂದು ಗಿಡದ ತಪ್ಪಲು ಎಂದಿದ್ದಾರೆ. ಹೀಗಾಗಿ ಈ ಗಿಡದ ತಪ್ಪಲಿನಿಂದ ಏನೂ ಪ್ರಯೋಜನ ಇಲ್ಲ ಎಂದು ಗೊತ್ತಾಗಿರಬಹುದು. ಆ ತಪ್ಪಲು ಎಲ್ಲಿ ಹೋಗುತ್ತೋ ಗೊತ್ತಿಲ್ಲ. ರಮೇಶ ಜಾರಕಿಹೊಳಿ ರಾಜ್ಯದಲ್ಲಿಯೇ ಬಲಾಢ್ಯರಿದ್ದಾರೆ. ರಮೇಶ ಜಾರಕಿಹೊಳಿಯವರಿಗೆ ಇನ್ನಷ್ಟು ಶಕ್ತಿ ನೀಡಲಿ. ಸ್ನೇಹಿತರಿಗೆ ಜಾರಕಿಹೊಳಿ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಮೇಶ್ ಜಾರಕಿಹೊಳಿಗೂ ಮುಂದಿನ ಸಿಎಂ ಆಗುವ ಯೋಗ ಇದೆ. ರಾಜ್ಯದ ಎಲ್ಲ ಸಮಕಾಲೀನ ನಾಯಕರಿಗೆ ಅಭಿನಂದನೆ ತಿಳಿಸುತ್ತೇನೆ. 20 ವರ್ಷಗಳ ಕಾಲದಲ್ಲಿ ನಾನು ಬಿಜೆಪಿಯಲ್ಲಿ ಏನಾದ್ರೂ ತಪ್ಪು ಮಾಡಿದ್ರೆ ಕ್ಷಮಿಸಿ ಎಂದರು.

ಟಿಕೆಟ್​ ಕೈತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ್​ ಸವದಿ ತೀವ್ರ ಅಸಮಾಧಾನಗೊಂಡಿದ್ದಾರೆ. ಹೈಕಮಾಂಡ್​ ನಿರ್ಧಾರದಿಂದ ಭಾವುಕರಾಗಿದ್ದ ಸವದಿ ಪಕ್ಷ ಬಿಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿತ್ತು. ಈ ಮಧ್ಯೆಯೇ ಕಾಂಗ್ರೆಸ್​ ಅವರನ್ನು ಸಂಪರ್ಕಿಸಿದ್ದು, ಸಂಚಲನ ಮೂಡಿಸಿದೆ. ಟಿಕೆಟ್ ಕೈ ತಪ್ಪುತ್ತಿದ್ದಂತೆ ಅಥಣಿ ನಿವಾಸದಲ್ಲಿ ಲಕ್ಷ್ಮಣ್ ಸವದಿ ಅವರನ್ನು ಕಾಂಗ್ರೆಸ್​ನ ರಾಜು ಕಾಗೆ ಅವರು ಇಂದು ಬೆಳಗ್ಗೆ ಭೇಟಿ ಮಾಡಿದರು. ಮಾಜಿ ಡಿಸಿಎಂ ಪಕ್ಷ ತೊರೆಯುವ ಚಿಂತನೆ ನಡೆಸಿದ್ದಾರೆ ಎಂಬ ಊಹಾಪೋಹದ ಮಧ್ಯೆಯೇ ಇಬ್ಬರು ನಾಯಕರ ಈ ಭೇಟಿ ರಾಜಕೀಯದಲ್ಲಿ ಹೊಸದೊಂದು ಚರ್ಚೆ ಹುಟ್ಟುಹಾಕಿದೆ.

ರಾಜು ಕಾಗೆ ಮತ್ತು ಲಕ್ಷ್ಮಣ್ ಸವದಿ ಅವರು ಕಳೆದ 20 ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ರಾಜು ಕಾಗೆ ಅವರು ಕಾಗವಾಡ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದಾರೆ. ಸ್ನೇಹಿತನಿಗೆ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿ ಕಾಂಗ್ರೆಸ್​ ಪಕ್ಷಕ್ಕೆ ಸೇರುವಂತೆ ಮಾತುಕತೆ ನಡೆಸಿದ್ದಾರೆ. ಇದರಿಂದ ಸವದಿ ಕಾಂಗ್ರೆಸ್​ ಸೇರಲಿದ್ದಾರೆ ವದಂತಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.

ಮಹೇಶ್​ ಕುಮಟಳ್ಳಿಗೆ ಟಿಕೆಟ್​: ಇತ್ತ, ಬಿಜೆಪಿ ನಿನ್ನೆ ರಾತ್ರಿ ಘೋಷಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಥಣಿ ಕ್ಷೇತ್ರದಿಂದ ಹಾಲಿ ಶಾಸಕ ಮಹೇಶ್​ ಕುಮಟಳ್ಳಿಗೆ ಟಿಕೆಟ್​ ಘೋಷಿಸಿದೆ. ಇವರ ಪರವಾಗಿ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಲಾಬಿ ನಡೆಸಿದ್ದರು.

ಓದಿ: ರಾಜಕಾರಣದಲ್ಲಿ ಗೌರವಯುತವಾಗಿ ಹೊರಹೋಗಬೇಕು: ಜಗದೀಶ್ ಶೆಟ್ಟರ್

Last Updated : Apr 12, 2023, 1:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.