ಧಾರವಾಡ: ''ಕಾಂಗ್ರೆಸ್ನಿಂದ ಅಲ್ತಾಫ್ ಕಿತ್ತೂರಗೆ ಟಿಕೆಟ್ ಕೊಟ್ಟರೆ, ನಾನು ಹಾಗೂ ದೀಪಕ್ ಚಿಂಚೋರೆ ಜೆಡಿಎಸ್ ಪಕ್ಷಕ್ಕೆ ಬೆಂಬಲ ಕೊಡುತ್ತೇವೆ. ನಾನು ಗ್ರಾಮೀಣದಿಂದ ಹಾಗೂ ಪಶ್ಚಿಮದಿಂದ ಚಿಂಚೊರೆ ಜೆಡಿಎಸ್‌ನಿಂದ ಸ್ಪರ್ಧಿಸೋದು ಸಿದ್ಧ'' ಎಂದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಹೇಳಿದರು.
ಧಾರವಾಡ ಗ್ರಾಮೀಣ ಕ್ಷೇತ್ರದ ಟಿಕೆಟ್ ವಂಚಿತರಾದ ಇದೇ ಮೊದಲ ಬಾರಿ ನಗರಕ್ಕೆ ಆಗಮಿಸಿ ಬೆಂಬಲಿಗರೊಂದಿಗೆ ಜೊತೆ ಸಭೆ ಮಾಡಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
''ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ನಾನು ಅರ್ಜಿ ಹಾಕಿದ್ದೆ. ವಿನಯ್ ಕುಲಕರ್ಣಿ ಅವರ ಹೆಸರು ಈಗ ಫೈನಲ್ ಆಗಿದೆ. ಈಗ ದೆಹಲಿಯಿಂದ ಬಂದೆ, ನನ್ನ ಬೆಂಬಲಿಗರು ಇಲ್ಲಿ ಸೇರಿದ್ದಾರೆ. ಮುಂದಿನ ನಿರ್ಣಯ ನಾನು ಹೇಳುತ್ತೇನೆ. ಕುಮಾರಸ್ವಾಮಿ ನನಗೆ ಹಿಂದೆ ಟಿಕೆಟ್ ಕೊಟ್ಟಿದ್ದರು. ಆದರೆ, ಈಗ ನಾನು ಟಿಕೆಟ್ ಬಗ್ಗೆ ಕುಮಾರಸ್ವಾಮಿ ಜೊತೆ ಮಾತನಾಡಿಲ್ಲ. ಎರಡು ದಿನಗಳಲ್ಲಿ ನಾನು ಸಿದ್ದರಾಮಯ್ಯರನ್ನು ಭೇಟಿ ಮಾಡುವೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಅಭ್ಯರ್ಥಿ ಆಯ್ಕೆ ಆಗುವವರೆಗೆ ಕಾದು ನೋಡುತ್ತೇವೆ'' ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಜೆಡಿಎಸ್ ಸರ್ಕಾರ ಬಂದ್ರೆ 5 ಸಿಲಿಂಡರ್ ಉಚಿತ, ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕಲ್ ಮೊಪೆಡ್ ಬೈಕ್ : ಹೆಚ್ಡಿಕೆ ಘೋಷಣೆ
ದೀಪಕ್ ಚಿಂಚೋರೆಗೆ ಟಿಕೆಟ್ ಕೊಡಿ-ಇಸ್ಮಾಯಿಲ್ ತಮಟಗಾರ : ''ಪಶ್ಚಿಮ ಕ್ಷೇತ್ರದಲ್ಲಿ ದೀಪಕ್ ಚಿಂಚೊರೆಗೆ ಕೊಡಬೇಕು. ಇಲ್ಲದೇ ಹೋದಲ್ಲಿ ನಾವು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಬೇರೆ ಬೇರೆ ಪಕ್ಷಗಳ ಆಹ್ವಾನ ವಿಚಾರಕ್ಕೆ ಮಾತನಾಡಿದ ಅವರು, ಸಿ.ಎಂ. ಇಬ್ರಾಹಿಂ ಅವರು ಮಾತನಾಡಿದ್ದಾರೆ. ಆದರೆ, ಟಿಕೆಟ್ ಬಗ್ಗೆ ಏನೂ ಮಾತನಾಡಿಲ್ಲ. ಪಶ್ಚಿಮಕ್ಕೆ ಯಾರು ಅಭ್ಯರ್ಥಿ ಆಗ್ತಾರೆ ಎಂದು ನೋಡುತ್ತೇವೆ. ದೀಪಕ್ ಚಿಂಚೋರೆಗೆ ನಾನು ಟಿಕೆಟ್ ಕೊಡಿ ಎಂದು ಕೇಳಿದ್ದೇನೆ. ದೀಪಕ್ ಅವರಿಗೆ ಟಿಕೆಟ್ ಕೊಟ್ಟರೆ, ಮುಂದೆ ಪಕ್ಷ ನಮಗೆ ಏನು ಕೊಡಲಿದೆ ಎಂದು ನಾನು ವಿಚಾರ ಮಾಡುತ್ತೇನೆ'' ಎಂದರು.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ ಅವರ ಜತೆ ಕೆಲಸ ಮಾಡಲು ನಾನು ಸಿದ್ಧ: ಡಿ.ಕೆ. ಶಿವಕುಮಾರ್
''ಸಿದ್ದರಾಮೋತ್ಸವ ಹಾಗೂ ಹಲವು ಕಾರ್ಯಕ್ರಮ ನಡೆಸಲು ನಾವು ಬೇಕಾಗಿತ್ತು. ಆದರೆ, ಈಗ ತಮಟಗಾರ ಮತ್ತು ಚಿಂಚೊರೆ ಬೇಡವಾಗ್ತಿವಾ? ಹೀಗಾಗಿ ಮುಂದೆ ಏನು ಅನ್ನೊದು ನೋಡಬೇಕಾಗುತ್ತದೆ. ಪಕ್ಷದಲ್ಲಿ ಗೌರವ ಕೊಡ್ತಾರಾ ನೋಡೊಣ? ದೀಪಕ್ ಚಿಂಚೋರೆಗೆ ಕೊಟ್ಟರೆ ಮುಂದೆ ವಿನಯ ಕುಲಕರ್ಣಿಗೆ ಬೆಂಬಲ ನೀಡುವ ಬಗ್ಗೆ ವಿಚಾರ ಮಾಡುತ್ತೇವೆ. ಅಲ್ತಾಫ್ ಕಿತ್ತೂರು ನಾನು ಜೆಡಿಎಸ್‌ನಲ್ಲಿದ್ದಾಗ ಮೋಸ ಮಾಡಿದ್ದರು. ಆಗ ನಮಗೆ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಅಂಥವನು ಈಗ ಕಾಂಗ್ರೆಸ್‌ಗೆ ಬಂದಿದ್ದಾರೆ. ಪಶ್ಚಿಮಕ್ಕೆ ಅಲ್ತಾಫ ಕಿತ್ತೂರು ಆಕಾಂಕ್ಷಿ ಸಹ ಇದ್ದಾರೆ. ಅವರಿಗೆ ಟಿಕೆಟ್ ಕೊಟ್ಟರೆ, ನಾವು ಜೆಡಿಎಸ್‌ನಿಂದ ಸ್ಪರ್ಧೆ ಮಾಡ್ತೀವಿ ಎಂಬ ಮಾತನ್ನು ಅವರು ಹೇಳಿದರು.
ಇದನ್ನೂ ಓದಿ: ನಾಳೆ ಮೈಸೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ: ಈ ರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ನಿರ್ಬಂಧ