ETV Bharat / assembly-elections

ಬಸವನಬಾಗೇವಾಡಿ: ಶಿವಾನಂದ ಪಾಟೀಲ್ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್​ ಹಾಕುತ್ತಾ ಬಿಜೆಪಿ-ಜೆಡಿಎಸ್​?

ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆಯ ಬಿಸಿಯೇರುತ್ತಿದೆ. ಕಾಂಗ್ರೆಸ್​ ಪಕ್ಷದ ಘೋಷಿತ ಅಭ್ಯರ್ಥಿ ಶಿವಾನಂದ ಪಾಟೀಲ್ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಜೆಡಿಎಸ್ ಕೂಡಾ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ಬಿಜೆಪಿ ಕಾದು ನೋಡುವ ತಂತ್ರ ರೂಪಿಸಿದೆ.

Basavana Bagevadi Assembly Constituency Profile

author img

By

Published : Apr 7, 2023, 7:51 PM IST

ವಿಜಯಪುರ: ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ ಅಣ್ಣ ಬಸವಣ್ಣ ಜನಿಸಿದ ಶ್ರೇಷ್ಠ ತಾಣ ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರ ಈ ಬಾರಿ ಮಹತ್ವ ಪಡೆದುಕೊಂಡಿದೆ. ಸತತ ಎರಡು ಗೆಲುವಿನಿಂದಾಗಿ ಇದೀಗ ಹ್ಯಾಟ್ರಿಕ್ ವಿಜಯದ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್​ ತುರುಸಿನ ಮತಬೇಟೆ ನಡೆಸುತ್ತಿದ್ದಾರೆ.

Basavana Bagevadi Assembly Constituency Profile
ಶಿವಾನಂದ ಪಾಟೀಲ್

2023ರಲ್ಲಿ ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಒಂದೆಡೆ ಕಮಲ‌ ಅರಳಿಸಲು ಬಿಜೆಪಿ ತೀವ್ರ ಪೈಪೋಟಿ ನಡೆಸುತ್ತಿದ್ದರೆ ಮತ್ತೊಂದೆಡೆ ಜೆಡಿಎಸ್ ಕೂಡ ಪ್ರತಿತಂತ್ರ ರೂಪಿಸುತ್ತಿದೆ. 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲರಿಗೆ ಜೆಡಿಎಸ್ ಅಭ್ಯರ್ಥಿ ಅಪ್ಪುಗೌಡ ಪಾಟೀಲ‌ ಮನಗೂಳಿ ಪ್ರಬಲ ಪೈಪೋಟಿ ನೀಡಿ ಎರಡನೇ ಸ್ಥಾನ ಪಡೆದಿದ್ದರು. ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಈ ಬಾರಿ ಮೂರೂ ಪಕ್ಷಗಳು ಅಷ್ಟೇ ಪ್ರಮಾಣದ ಬಲಾಬಲ ಹೊಂದಿದ್ದು ಕ್ಷೇತ್ರ ರಾಜಕೀಯ ಚಟುವಟಿಕೆಗಳು ಬಿರುಸಾಗಿವೆ.

ಅಪ್ಪುಗೌಡ ಪಾಟೀಲ

ಬಸವನಬಾಗೇವಾಡಿ ರಾಜ್ಯದಲ್ಲೇ ತನ್ನದೇ ರೀತಿಯ ಪ್ರಾಮುಖ್ಯತೆ ಪಡೆದ ಮತಕ್ಷೇತ್ರ. ಪ್ರಸಿದ್ಧ ಹಾಗೂ ಪ್ರಾಚೀನ ಸ್ಥಳವೂ ಹೌದು. ಜಿಲ್ಲಾ ಕೇಂದ್ರದಿಂದ 43 ಕಿ.ಮೀ ದೂರದಲ್ಲಿರುವ ಈ ನಾಡು ಪವಿತ್ರ ಪುಣ್ಯಕ್ಷೇತ್ರವಾಗಲು ಕಾರಣವೇ ಭಕ್ತಿ ಭಂಡಾರಿ, ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ ಬಸವಣ್ಣ. ಅವರು ಹುಟ್ಟಿದ ಪುಣ್ಯಭೂಮಿ ಇತಿಹಾಸ ಪ್ರಸಿದ್ಧ ನಾಡಾಗಿ ವಿಶ್ವದ ಗಮನ ಸೆಳೆದಿದೆ. ಸಾಂಸ್ಕೃತಿಕ, ಸಾಹಿತ್ಯಿಕ ಶ್ರೀಮಂತಿಕೆಯಿಂದ ಕೂಡಿದ ತಾಣವಾಗಿದೆ. ನಿತ್ಯ ಸಾವಿರಾರು ಭಕ್ತರು ಆಗಮಿಸಿ ಬಸವಣ್ಣ ಹುಟ್ಟಿದ ಭೂಮಿಯ ದರ್ಶನ ಪಡೆಯುತ್ತಾರೆ.

ಇಂಥ ಕ್ಷೇತ್ರದಲ್ಲಿ ಎರಡು ಬಾರಿ ಸತತವಾಗಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಹಾಲಿ ಶಾಸಕ ಶಿವಾನಂದ ಪಾಟೀಲ್ ಈ ಸಲ ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಟಿಕೆಟ್​ ಕೂಡ ಘೋಷಣೆಯಾಗಿದೆ. ಈ ಮೊದಲು ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಸೋಮನಗೌಡ (ಅಪ್ಪುಗೌಡ) ಪಾಟೀಲ್ ಬಿಜೆಪಿ ಸೇರಿದ್ದು ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿ ವಿಜಯಪುರ ನಗರ‌ ಮತಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಚುನಾವಣೆ ಮುಗಿದ ಬಳಿಕ ಮತ್ತೆ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಲ್ಲದೇ ಮತಕ್ಷೇತ್ರದಲ್ಲಿ ನಿರಂತರ ಓಡಾಟ ಮಾಡಿಕೊಂಡಿದ್ದಾರೆ. ಬಿಜೆಪಿ ಪಕ್ಷದ ಪ್ರಬಲ ಟಿಕೆಟ್​ ಆಕಾಂಕ್ಷಿತರಲ್ಲಿ ಇವರು ಒಬ್ಬರಾಗಿದ್ದಾರೆ. ಜೆಡಿಎಸ್ ಪಕ್ಷದಿಂದ​ ಪರಮಾನಂದ ಬಸಪ್ಪ ತನಖೆದಾರ್​ ಎಂಬುವರಿಗೆ ಟಿಕೆಟ್​ ಘೋಷಣೆಯಾಗಿದ್ದು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಎಸ್.ಕೆ.ಬೆಳ್ಳುಬ್ಬಿ

ಮತದಾರರ ಮಾಹಿತಿ: ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಒಟ್ಟು 2,04,681 ಮತದಾರರು ಇದ್ದಾರೆ. ಇವರಲ್ಲಿ ಪುರುಷ 1,04,484, ಮಹಿಳಾ ಮತದಾರರು 1,00,186, ಇತರೆ ಮತದಾರರು 11 ಇದ್ದಾರೆ.

ಕ್ಷೇತ್ರದ ವೈಶಿಷ್ಟ್ಯ: ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಬಸವನಬಾಗೇವಾಡಿಯು 2008ರ ಕ್ಷೇತ್ರ ವಿಂಗಡಣೆ ಬಳಿಕ ಹೊಸದಾಗಿ ಉದಯಿಸಿತು. ಸದ್ಯ ಕಿತ್ತೂರು​ ಕರ್ನಾಟಕ ವ್ಯಾಪ್ತಿಗೆ ಒಳಪಟ್ಟಿದೆ. ಬಸವನಬಾಗೇವಾಡಿ ತಾಲೂಕು, ಬಾಗೇವಾಡಿ ಮತ್ತು 3 ಕೊಲ್ಹಾರ ವೃತ್ತಗಳು ಸೇರಿದಂತೆ ಹಲವು ಪ್ರಮುಖ ನಗರಗಳನ್ನು ಒಳಗೊಂಡಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 59.13% ಮತ್ತು ಜೆಡಿ (ಎಸ್​) 32.07% ಮತಗಳನ್ನು ಗಳಿಸಿತ್ತು. ಈ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿ ಶಿವಾನಂದ ಪಾಟೀಲ್ ಮೂರು ಬಾರಿ, ಬೆಳ್ಳುಬ್ಬಿ ಸಂಗಪ್ಪ ಕಲ್ಲಪ್ಪ ಎರಡು ಬಾರಿ, ಪಾಟೀಲ್ ಬಸನಗೌಡ ಸೋಮನಗೌಡ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಶಿವಾನಂದ ಎಸ್ ಪಾಟೀಲ್ ಅವರ ಆಸ್ತಿ ಮೌಲ್ಯವು ಐದು ವರ್ಷಗಳಲ್ಲಿ (2013 ರಿಂದ 2018) ಎಂಟು ಕೋಟಿಗಳಿಂದ ಹದಿನಾಲ್ಕು ಕೋಟಿಗೆ ಏರಿಕೆ ಆಗಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ 73.27 % ಮತಗಳು ಚಲಾವಣೆಯಾಗಿದ್ದರೆ 1684 ನೋಟಾ ಮತಗಳು ಚಲಾವಣೆಯಾಗಿದ್ದು ಗಮನಾರ್ಹದ ಸಂಗತಿ. 2018ರಲ್ಲಿ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 20,1271 ಮತದಾರರಿದ್ದರಿದ್ದು ಒಟ್ಟು ಮಾನ್ಯ ಮತಗಳ ಸಂಖ್ಯೆ 1,45,720 ಆಗಿದೆ. 1978 ರಿಂದ ಈವರೆಗೆ ಕಾಂಗ್ರೆಸ್​ ಆರು ಬಾರಿ ಗೆದ್ದರೆ, ಬಿಜೆಪಿ ಮತ್ತು ಜೆಎನ್​ಪಿ ತಲಾ ಎರಡು ಬಾರಿ ಗೆದ್ದಿದೆ.

ಕಳೆದ 3 ಚುನಾವಣೆಯ ಬಲಾಬಲ: 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಳ್ಳುಬ್ಬಿ ಸಂಗಪ್ಪ ಕಲ್ಲಪ್ಪ 48,481 ಮತಗಳನ್ನು ಪಡೆದು ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದರು. ಕಾಂಗ್ರೆಸ್​ ಅಭ್ಯರ್ಥಿ ಶಿವಾನಂದ ಪಾಟೀಲ್ 34,594 ಮತ ಪಡೆದು ಸೋಲು ಕಂಡಿದ್ದರು. 13,887 ಮತಗಳ ಅಂತರದಲ್ಲಿ ಬೆಳ್ಳುಬ್ಬಿ ಗೆಲುವಿನ ನಗೆ ಬೀರಿದ್ದರು. ಜೆಡಿಎಸ್ 15,370 ಮತ ಪಡೆದ​ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತ್ತು.

2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಶಿವಾನಂದ ಪಾಟೀಲ್​ 56,329 ಮತಗಳನ್ನು ಪಡೆದು ಬೆಳ್ಳುಬ್ಬಿ ವಿರುದ್ಧ ಸೇಡು ತೀರಿಸಿಕೊಂಡರು. ಬಿಜೆಪಿ ಅಭ್ಯರ್ಥಿ ಬೆಳ್ಳುಬ್ಬಿ ಸಂಗಪ್ಪ ಕಲ್ಲಪ್ಪ 36,653 ಮತ ಪಡೆದು ಸೋಲುಂಡರು. 19,676 ಮತಗಳ ಅಂತರದಲ್ಲಿ ಶಿವಾನಂದ ಪಾಟೀಲ್​ ಗೆಲುವು ಕಂಡಿದ್ದರು. 18,136 ಮತ ಪಡೆದಿದ್ದ ಜೆಡಿಎಸ್​ ಮೂರನೇ ಸ್ಥಾನಕ್ಕೆ ಇಳಿದಿತ್ತು.

ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರದ ವಿವರ

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಶಿವಾನಂದ ಪಾಟೀಲ್ 58,647 ಪಡೆದು ಎರಡನೇ ಬಾತರಿ ಗೆಲುವು ಕಂಡರು. ಜೆಡಿಎಸ್​ ಅಭ್ಯರ್ಥಿ ಸೋಮನಗೌಡ (ಅಪ್ಪುಗೌಡ) ಪಾಟೀಲ್ ಮನಗೂಳಿ 55,461 ಮತ ಪಡೆದು ಎರಡನೇ ಸ್ಥಾನಕ್ಕೆ ಕುಸಿದರೆ, ಬಿಜೆಪಿ ಅಭ್ಯರ್ಥಿ ಸಂಗರಾಜ್ ದೇಸಾಯಿ 31,480 ಮತ ಪಡೆದು ಮೂರನೇ ಸ್ಥಾನದಲ್ಲಿ ಬಂದರು. ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್​ 3,186 ಮತಗಳ ಅಂತದಿಂದ ಜಯಗಳಿಸಿದ್ದರು.

ಶಾಸಕ ಶಿವಾನಂದ ಪಾಟೀಲ್​ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು ಸಹಿತ ಮತಕ್ಷೇತ್ರದಲ್ಲಿ ಹಲವು ಸಮಸ್ಯೆಗಳು ಹಾಗೆಯೇ ಇವೆ. ಕೆಲ ಗ್ರಾಮೀಣ ಭಾಗದ ಜಮೀನುಗಳಿಗೆ ಹೋಗುವ ರಸ್ತೆಗಳು ಸರಿ ಇಲ್ಲ. ಪುನರ್ವಸತಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತದೆ. ಅತಿವೃಷ್ಟಿ ಸಂದರ್ಭದಲ್ಲಿ ಸ್ಥಳಾಂತರವಾದ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ರಸ್ತೆ ಅಗಲೀಕರಣ ಸೇರಿದಂತೆ ಮತದಾರರ ಹಲವು ಬೇಡಿಕೆಗಳು ಹಾಳೆಯಲ್ಲಿಯೇ ಉಳಿದಿವೆ.

ಈವರೆಗೆ ಗೆದ್ದು ಬೀಗಿದವರು:
1957 : ಸುಶೀಲಾಬಾಯಿ ಶಹಾ (ಕಾಂಗ್ರೆಸ್)
1962 : ಸುಶೀಲಾಬಾಯಿ ಶಹಾ (ಕಾಂಗ್ರೆಸ್)
1967 : ಪಿ.ಬಿ.ಸೋಮಗೌಡ (ಕಾಂಗ್ರೆಸ್)
1972 : ಬಿ.ಎಸ್.ಪಾಟೀಲ್ (ಕಾಂಗ್ರೆಸ್)
1978 : ಬಸನಗೌಡ ಪಾಟೀಲ್ (ಜನತಾ ಪಾರ್ಟಿ)
1983 : ಬಸನಗೌಡ ಪಾಟೀಲ (ಕಾಂಗ್ರೆಸ್)
1985 : ಕುಮಾರಗೌಡ ಪಾಟೀಲ್ (ಜನತಾ ಪಾರ್ಟಿ)
1989 : ಬಸನಗೌಡ ಪಾಟೀಲ್ (ಕಾಂಗ್ರೆಸ್)
1994 : ಬಸನಗೌಡ ಪಾಟೀಲ್ (ಕಾಂಗ್ರೆಸ್)
1999 : ಎಸ್. ಕೆ. ಬೆಳುಬ್ಬಿ (ಜನತಾ ಪಾರ್ಟಿ)
2004 : ಶಿವಾನಂದ ಪಾಟೀಲ್ (ಕಾಂಗ್ರೆಸ್)
2008 : ಎಸ್. ಕೆ. ಬೆಳುಬ್ಬಿ (ಜನತಾ ಪಾರ್ಟಿ)
2013 : ಶಿವಾನಂದ ಪಾಟೀಲ್ (ಕಾಂಗ್ರೆಸ್)
2018 : ಶಿವಾನಂದ ಪಾಟೀಲ್ (ಕಾಂಗ್ರೆಸ್)

ಇದನ್ನೂ ಓದಿ: ಕಿತ್ತೂರಿನ ಸಿಂಹಾಸನಕ್ಕಾಗಿ ಕೈ-ಕಮಲ ಪೈಪೋಟಿ: ಯಾರಿಗೆ ಒಲಿಯುತ್ತೆ ರಾಣಿ ಚನ್ನಮ್ಮನ ಕ್ಷೇತ್ರ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.