ಕರ್ನಾಟಕ

karnataka

By ETV Bharat Karnataka Team

Published : Aug 13, 2024, 9:16 PM IST

ETV Bharat / snippets

ಅಪ್ರಾಪ್ತೆ ಮೇಲೆ ಅತ್ಯಾಚಾರ: ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ ಕಾಮುಕನ ಬಂಧನ

SEXUALLY ASSAULT ON MINOR
ಸಾಂದರ್ಭಿಕ ಚಿತ್ರ (ETV Bharat)

ಧಾರವಾಡ: ಯುವಕನೊಬ್ಬ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಅದನ್ನು ವಿಡಿಯೋ ಸಹ ಮಾಡಿಕೊಂಡಿದ್ದಾನೆ. ಆ. 8ರಂದು ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕಾಮುಕ, ತಾನು ಸೆರೆ ಹಿಡಿದಿದ್ದ ಆ ವಿಡಿಯೋವನ್ನು ಬಳಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಹಲವು ವಾಟ್ಸ್‌ಆ್ಯಪ್​ ಗ್ರೂಪ್‌ಗೂ ಹಾಕಿದ್ದು, ಹಲವರು ಬೇರೆ ಗ್ರೂಪ್‌ಗೆ ಶೇರ್‌ ಮಾಡಿದ್ದಾರೆ.

ಯುವಕನನ್ನು ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ, ಬೇರೆ ಬೇರೆ ಗ್ರೂಪ್‌ಗಳಲ್ಲಿ ವಿಡಿಯೋ ಶೇರ್‌ ಮಾಡಿದ್ದ 9 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ದೌರ್ಜನ್ಯ ಎಸಗಿದ ಆರೋಪಿ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿನಿಯ ಮುಖಕ್ಕೆ ಕತ್ತರಿಯಿಂದ ಚುಚ್ಚಿ ಹಲ್ಲೆ; ಆರೋಪಿ ಅರೆಸ್ಟ್

ABOUT THE AUTHOR

...view details