ಚಾಮರಾಜನಗರ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಸೋಲಿಗರ ಜೀವನ ಬಿಂಬಿಸಿದ್ದ ಚಾಮರಾಜನಗರದ ಸ್ತಬ್ಧಚಿತ್ರಕ್ಕೆ ಮೂರನೇ ಬಹುಮಾನ ದೊರೆತಿದೆ.
ದಸರಾ ಮಹೋತ್ಸವ-2024ರ ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ತಬ್ಧಚಿತ್ರ ಆಕರ್ಷಣೀಯ ಮೆರವಣಿಗೆಯಲ್ಲಿ 50ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಪಾಲ್ಗೊಂಡಿದ್ದವು. ಇದರ ಪೈಕಿ ಚಾಮರಾಜನಗರ ಜಿಲ್ಲೆಯ ಸ್ತಬ್ಧಚಿತ್ರಕ್ಕೆ ಮೂರನೇ ಸ್ಥಾನ ದೊರಕಿದೆ.
ಚಾಮರಾಜನಗರ ಸ್ತಬ್ಧಚಿತ್ರವು "ಸೋಲಿಗರ ಸೊಗಡು, ಒಮ್ಮೆ ನೀ ಬಂದು ನೋಡು" ಎಂಬ ಶೀರ್ಷಿಕೆಯಲ್ಲಿ ಸ್ತಬ್ಧ ಚಿತ್ರದಲ್ಲಿ ಪ್ರದರ್ಶಿಸಲಾಗಿತ್ತು. ಸಾವಿರಾರು ಹೆರಿಗೆ ಮಾಡಿಸಿದ ಜಲ್ಲೆ ಮಾದಮ್ಮ, ಬಿಳಿಗಿರಿರಂಗನ ಬೆಟ್ಟದ ಜೇನುತುಪ್ಪ, ಸೋಲಿಗರು ಆರಾಧಿಸುವ ದೊಡ್ಡ ಸಂಪಿಗೆ ಮರ, ಸಂಸ್ಕೃತಿಯ ಪ್ರತಿಬಿಂಬವಾದ ಗೊರುಕನ ನೃತ್ಯ, ರೊಟ್ಟಿ ಹಬ್ಬವನ್ನು ಪ್ರಸ್ತುತ ಪಡಿಸಲಾಗಿತ್ತು. ಈ ಮೂಲಕ ವಿಶ್ವ ವಿಖ್ಯಾತ ದಸರಾದಲ್ಲಿ ಲಕ್ಷಾಂತರ ಜನರಿಗೆ ಗಡಿಜಿಲ್ಲೆಯ ವನ್ಯಸಂಪತ್ತು, ಸೋಲಿಗ ಸಮುದಾಯದ ಸಂಸ್ಕೃತಿಯನ್ನು ಪರಿಚಯಿಸಲಾಗಿತ್ತು.
ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರದರ್ಶನಗೊಂಡ ವಾರ್ತಾ ಇಲಾಖೆಯ ಸ್ತಬ್ಧಚಿತ್ರ ಪ್ರಥಮ ಬಹುಮಾನ ಗಳಿಸಿದೆ.
ಇದನ್ನೂ ಓದಿ: ಮೈಸೂರು: ಜಂಬೂಸವಾರಿಯಲ್ಲಿ ಗಮನ ಸೆಳೆದ ಈ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ