ಹುಬ್ಬಳ್ಳಿ:ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹಬ್ಬದ ಋತುವಿನಲ್ಲಿ ಹೆಚ್ಚಿನ ದಟ್ಟಣೆ ಸರಿದೂಗಿಸಲು ದಕ್ಷಿಣ ರೈಲ್ವೆಯು ಈಗಾಗಲೇ ಎರ್ನಾಕುಲಂ ಮತ್ತು ಯಲಹಂಕ ನಿಲ್ದಾಣಗಳ ನಡುವೆ ಓಡಿಸಲಾಗುತ್ತಿದ್ದ ವಿಶೇಷ ರೈಲುಗಳ ಸೇವೆಯನ್ನು ಹೆಚ್ಚುವರಿ ನಾಲ್ಕು ಟ್ರಿಪ್ಗಳಿಗೆ ವಿಸ್ತರಿಸಲು ಸೂಚಿಸಿದೆ. ವಿವರಗಳು ಈ ಕೆಳಗಿನಂತಿವೆ.
1. ರೈಲು ಸಂಖ್ಯೆ 06101 ಎರ್ನಾಕುಲಂ-ಯಲಹಂಕ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ ವಿಶೇಷ ರೈಲನ್ನು ಈ ಹಿಂದೆ ಸೆಪ್ಟೆಂಬರ್ 18ರವರೆಗೆ ಓಡಿಸಲು ಸೂಚಿಸಲಾಗಿತ್ತು. ಈಗ ನಾಲ್ಕು ಹೆಚ್ಚುವರಿ ಟ್ರಿಪ್ಗಳೊಂದಿಗೆ ಸೆಪ್ಟೆಂಬರ್ 22ರಿಂದ 29ರ ವರೆಗೆ ವಿಸ್ತರಿಸಲಾಗಿದೆ.