ಕರ್ನಾಟಕ

karnataka

20 ಅಡಿ ಮೇಲಿನಿಂದ ಕೆಳಗೆ ಬಿದ್ದ ಗೂಡ್ಸ್ ವಾಹನ: ನಾಲ್ವರು ಗಾಯ

By ETV Bharat Karnataka Team

Published : Sep 5, 2024, 8:34 PM IST

GOODS VEHICLE FELL
20 ಅಡಿ ಮೇಲಿನಿಂದ ಕೆಳಗೆ ಬಿದ್ದ ಗೂಡ್ಸ್ ವಾಹನ (ETV Bharat)

ಚಿಕ್ಕಮಗಳೂರು: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನವೊಂದು ಸ್ಕಿಡ್ ಆಗಿ 20 ಅಡಿ ಎತ್ತರಿಂದ ಕೆಳಗೆ ಬಿದ್ದ ಘಟನೆ ಕೊಪ್ಪ ತಾಲೂಕಿನ ಜಲದುರ್ಗ ಗ್ರಾಮದಲ್ಲಿ ಸಂಭವಿಸಿದೆ. ವಾಹನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿದ್ದು, ತಿರುವಿನಲ್ಲಿ ಗಾಡಿ ಸ್ಕಿಡ್ ಆಗಿದೆ. ಮರಗಿಡಗಳಿಗೆ ಸಿಲುಕಿ ನಿಧಾನವಾಗಿ ವಾಹನ ಕೆಳಗೆ ಬಿದ್ದಿದೆ. ವಾಹನದಲ್ಲಿದ್ದ ನಾಲ್ವರಿಗೂ ಸಣ್ಣ-ಪುಟ್ಡ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಕೊಪ್ಪ ಪೊಲೀಸರು, ಪರಿಶೀಲನೆ ನಡೆಸಿದರು. ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಕುರಿತು ದೂರು ಕೂಡ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details