ETV Bharat / state

ಬೆಂಗಳೂರಿಗೆ ಟ್ರಾಲಿ ಬ್ಯಾಗ್​ಗಳಲ್ಲಿ ಕಳ್ಳಸಾಗಣೆ ಯತ್ನ: ಏರ್​ಪೋರ್ಟ್​ನಲ್ಲಿ 40 ವನ್ಯಜೀವಿಗಳ ರಕ್ಷಿಸಿದ ಕಸ್ಟಮ್ಸ್ ಅಧಿಕಾರಿಗಳು - RARE ANIMALS IN TROLLEY BAG

ಟ್ರಾಲಿ ಬ್ಯಾಗ್‌ಗಳಲ್ಲಿ ಅಕ್ರಮವಾಗಿ ವನ್ಯ ಜೀವಿಗಳನ್ನು ಸಾಗಿಸುತ್ತಿದ್ದ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಟ್ರ್ಯಾಲಿ ಬ್ಯಾಗ್​ಗಳಲ್ಲಿ ಪತ್ತೆಯಾದ ಅಪರೂಪದ ವನ್ಯಜೀವಿ Rare animals Bengaluru Airport
ಟ್ರ್ಯಾಲಿ ಬ್ಯಾಗ್​ಗಳಲ್ಲಿ ಪತ್ತೆಯಾದ ಅಪರೂಪದ ವನ್ಯಜೀವಿ (ETV Bharat)
author img

By ETV Bharat Karnataka Team

Published : Nov 16, 2024, 12:42 PM IST

ದೇವನಹಳ್ಳಿ: ವಿದೇಶದಿಂದ ಬೆಂಗಳೂರಿಗೆ ವನ್ಯಜೀವಿಗಳ ಕಳ್ಳ ಸಾಗಣೆ ಮಾಡುತ್ತಿದ್ದ ಜಾಲವನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬೇಧಿಸಿದ್ದಾರೆ. ಟ್ರಾಲಿ ಬ್ಯಾಗ್​​ನಲ್ಲಿ ಮರೆಮಾಚಿ ಕಳ್ಳಸಾಗಣಿಕೆಗೆ ಯತ್ನಿಸಿದ ಎರಡು ಪ್ರಕರಣಗಳಲ್ಲಿ 40 ವನ್ಯಜೀವಿಗಳನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಸಂರಕ್ಷಣೆ ಮಾಡಿದ್ದಾರೆ.

ನವೆಂಬರ್ 12ರಂದು ಕೌಲಾಲಂಪುರದಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ವಿಮಾನ ಸಂಖ್ಯೆ MH0192) ಆರೋಪಿಗಳು ಆಗಮಿಸಿದ್ದರು. ಕಳ್ಳಸಾಗಣೆ ಮಾಡುತ್ತಿರುವ ಕುರಿತು ಗುಪ್ತಚರ ಮಾಹಿತಿ ಪಡೆದ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಇಬ್ಬರು ಪ್ರಯಾಣಿಕರನ್ನು ವಿಚಾರಣೆ ಮಾಡಿ ಅವರ ಟ್ರಾಲಿ ಬ್ಯಾಗ್ ಗಳನ್ನ ಪರಿಶೀಲನೆ ಮಾಡಿದಾಗ ವನ್ಯಜೀವಿಗಳ ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.

ಟ್ರ್ಯಾಲಿ ಬ್ಯಾಗ್​ಗಳಲ್ಲಿ ಪತ್ತೆಯಾದ ಅಪರೂಪದ ವನ್ಯಜೀವಿ
ಟ್ರ್ಯಾಲಿ ಬ್ಯಾಗ್​ಗಳಲ್ಲಿ ಪತ್ತೆಯಾದ ಅಪರೂಪದ ವನ್ಯಜೀವಿ (ETV Bharat)
ಟ್ರ್ಯಾಲಿ ಬ್ಯಾಗ್​ಗಳಲ್ಲಿ ಪತ್ತೆಯಾದ ಅಪರೂಪದ ವನ್ಯಜೀವಿ
ಟ್ರ್ಯಾಲಿ ಬ್ಯಾಗ್​ಗಳಲ್ಲಿ ಪತ್ತೆಯಾದ ಅಪರೂಪದ ವನ್ಯಜೀವಿ (ETV Bharat)

ಟ್ರಾಲಿ ಬ್ಯಾಗ್​ಗಳಲ್ಲಿ ವನ್ಯ ಜೀವಿಗಳು: ಟ್ರಾಲಿ ಬ್ಯಾಗ್‌ಗಳಲ್ಲಿ ಮರೆಮಾಚಿ ಒಟ್ಟು 40 ವನ್ಯಜೀವಿ ಪ್ರಾಣಿಗಳನ್ನ ಕಳ್ಳಸಾಗಣೆಗೆ ಯತ್ನಿಸಲಾಗಿದೆ. ಒಂದರಲ್ಲಿ ಅಲ್ಡಾಬ್ರಾ ದೈತ್ಯ ಆಮೆಗಳು, ಕೆಂಪು ಕಾಲಿನ ಆಮೆಗಳು, ಹಲ್ಲಿಗಳು, ಶಿಂಗಲ್‌ಬ್ಯಾಕ್ ಸ್ಕಿಂಕ್‌ಗಳು, ಜುವೆನೈಲ್ ಘೇಂಡಾಮೃಗ ಇಗುವಾನಾಗಳು, ಅಲ್ಬಿನೋ ಬ್ಯಾಟ್ ಸೇರಿದಂತೆ 24 ಪ್ರಾಣಿಗಳು ಮತ್ತು ಎರಡನೇ ಬ್ಯಾಗ್​​ನಲ್ಲಿ ಲುಟಿನೊ ಇಗುವಾನಾ, ಅಗೈಲ್ ಗಿಬ್ಬನ್, ಬೇಬಿ ಅಮೆರಿಕನ್ ಅಲಿಗೇಟರ್‌ಗಳು, ಮರಿ ಚಿರತೆ ಆಮೆಗಳು, ಕೆಂಪು ಕಾಲಿನ ಆಮೆ ಸೇರಿದಂತೆ 16 ಜೀವಿಗಳು ಪತ್ತೆಯಾಗಿವೆ. ಎಲ್ಲಾ ಜೀವಿಗಳು ಜೀವಂತ ಸ್ಥಿತಿಯಲ್ಲಿವೆ. ಕಸ್ಟಮ್ಸ್ ಆಕ್ಟ್, 1962 ರ ಸೆಕ್ಷನ್ 110 ರ ಅಡಿಯಲ್ಲಿ ವನ್ಯಜೀವಿಗಳನ್ನು ರಕ್ಷಿಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅಡಿ ಇಬ್ಬರು ಪ್ರಯಾಣಿಕರನ್ನ ಬಂಧಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಧ್ಯವರ್ತಿಗಳ ಕಮಿಷನ್​​, ಚೌಕಾಶಿಯಿಂದ ರೈತರಿಗೆ ಮುಕ್ತಿ: ಬಿತ್ತನೆ ಬೀಜಗಳು ಆನ್​ಲೈನ್ ಮೂಲಕ ಮನೆ ಬಾಗಿಲಿಗೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.