ಕರ್ನಾಟಕ

karnataka

32 ವರ್ಷದಿಂದ ದುರ್ಮಾಂಸ: ವೃದ್ಧೆಯ ಭುಜದಿಂದ 8 ಕೆಜಿ ಗಡ್ಡೆ ಹೊರತೆಗೆದ ಉಡುಪಿ ಜಿಲ್ಲಾಸ್ಪತ್ರೆ ವೈದ್ಯರು

By ETV Bharat Karnataka Team

Published : Jun 30, 2024, 5:31 PM IST

ವೃದ್ಧೆಯ ಬಲಭುಜದಲ್ಲಿ 8 ಕೆಜಿ ತೂಕದ ಗಡ್ಡೆ:
ವೃದ್ಧೆಯ ಬಲಭುಜದಲ್ಲಿ 8 ಕೆಜಿ ತೂಕದ ಗಡ್ಡೆ: (ETV Bharat)

ಉಡುಪಿ: ವೃದ್ಧೆಯೊಬ್ಬರ ಬಲಭುಜದಿಂದ ಸುಮಾರು 8 ಕೆಜಿ ದುರ್ಮಾಂಸದ ಗಡ್ಡೆಯನ್ನು ಬೇರ್ಪಡಿಸುವಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞರು ಯಶಸ್ವಿಯಾಗಿದ್ದಾರೆ. ಕಾರ್ಕಳದ ನಿವಾಸಿ 71 ವರ್ಷದ ಪುಷ್ಪಾ (71) ಎಂಬ ವೃದ್ಧೆ ಸುಮಾರು 32 ವರ್ಷಗಳಿಂದ ದುರ್ಮಾಂಸ ಗಡ್ಡೆಯಿಂದ ಬಳಲುತ್ತಿದ್ದರು. ಅವರ ಭುಜದ ಭಾಗದಲ್ಲಿ ಈ ಗಡ್ಡೆ ಇತ್ತು. ಅವರನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಉಡುಪಿ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸ ತಜ್ಞ ಡಾ. ಸುಜಿತ್ ಅವರು ತಮ್ಮ ತಂಡದೊಂದಿಗೆ ಸುಮಾರು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಈ ಗಡ್ಡೆಯನ್ನು ಹೊರತೆಗೆದಿದ್ದಾರೆ. ಆಸ್ಪತ್ರೆಯ ಜನರಲ್ ಸರ್ಜನ್ ಆಗಿರುವ ಡಾ. ಸುಜಿತ್ ಅವರ ನೇತೃತ್ವದಲ್ಲಿ ಅರವಳಿಕೆ ತಜ್ಞರಾದ ಡಾ. ಉಮೇಶ್‌ ಉಪಾಧ್ಯಾಯ ಹಾಗೂ ಡಾ. ವಿಶ್ವನಾಥ್ ಶೆಟ್ಟಿ ಹಾಗೂ ನುರಿತ ಶುಶ್ರೂಷಕ ಅಧಿಕಾರಿಗಳು ಸಹಕರಿಸಿದರು. ಸದ್ಯ ಮಹಿಳೆ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ABOUT THE AUTHOR

...view details