ಹುಬ್ಬಳ್ಳಿ: ನಗರದ ಗಾಮನಗಟ್ಟಿ ಗ್ರಾಮದ ತಾರಿಹಾಳ ರಸ್ತೆಯ ಚರಂಡಿಯಲ್ಲಿ ನವಜಾತ ಶಿಶುವಿನ ಶವ ದೊರೆತಿದೆ. ಈ ಕುರಿತು ಸಾರ್ವಜನಿಕರು ನವನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಶಿಶುವಿನ ಮೃತದೇಹವನ್ನು ಚರಂಡಿಯಿಂದ ತೆಗೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಶಿಶುವನ್ನು ಚರಂಡಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಮೈಸೂರಲ್ಲಿ ಡೆಂಗ್ಯೂಗೆ ಮೊದಲ ಬಲಿ: 35 ವರ್ಷದ ಆರೋಗ್ಯಾಧಿಕಾರಿ ಸಾವು - HEALTH OFFICER DIES BY DENGUE