ಕೋಲಾರ: ಮಾಲ್ಟ್ ಮಿಶ್ರಿತ ಹಾಲು ಕುಡಿದ ಮಕ್ಕಳ ಆರೋಗ್ಯದಲ್ಲಿ ಏರುಪೇರಾದ ಘಟನೆ ಮುಳಬಾಗಿಲು ತಾಲೂಕು ಅಂಗೊಂಡಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಓರ್ವ ವಿದ್ಯಾರ್ಥಿಗೆ ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಬುಧವಾರ ಬೆಳಗ್ಗೆ ಮಾಲ್ಟ್ ಮಿಶ್ರಿತ ಹಾಲು ಕುಡಿದ 19 ವಿದ್ಯಾರ್ಥಿಗಳಲ್ಲಿ ಅಲರ್ಜಿ, ಮೈ ತುರಿಕೆ, ಮೈಮೇಲೆ ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಂಡಿವೆ. ಕೂಡಲೇ ಶಾಲೆಯಲ್ಲಿಯೇ ಎಲ್ಲಾ ಮಕ್ಕಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಬಿಇಓ ಗಂಗರಾಮಯ್ಯ ಹಾಗೂ ಟಿಹೆಚ್ಒ ಡಾ. ಸುಗುಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಬೈಕ್ನಲ್ಲಿ ಹೋಗ್ತಿದ್ದ ವೇಳೆ ತುಂಡರಿಸಿ ಬಿದ್ದ ವಿದ್ಯುತ್ ತಂತಿ: ಸ್ಥಳದಲ್ಲೇ ಯುವ ರೈತ ಸಾವು