ತುಮಕೂರು:ಸೀಮೆಎಣ್ಣೆ ಸುರಿದು ಹೆಂಡತಿಗೆ ಬೆಂಕಿ ಹಚ್ಚಿ ನಾಪತ್ತೆಯಾಗಿದ್ದ ಆರೋಪಿಯನ್ನು 27 ವರ್ಷಗಳ ನಂತರ ನೊಣವಿನಕೆರೆ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ತಿಪಟೂರು ತಾಲೂಕು ಕುಡುವನಘಟ್ಟ ಗ್ರಾಮದಲ್ಲಿ 1997ರ ಮೇ 5ರಂದು ನಡೆದಿತ್ತು. ಕ್ಷುಲ್ಲಕ ಕಾರಣಕ್ಕೆ ಪತ್ನಿ ಗೌರಮ್ಮನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದು ಪತಿ ನಿಂಗಪ್ಪ ಪರಾರಿಯಾಗಿದ್ದ. ಈತನಿಗೆ ಆಗ 35 ವರ್ಷ ವಯಸ್ಸಾಗಿತ್ತು.