ನಿರ್ಮಲ್: ಪ್ರಾಣಿ ಪ್ರಪಂಚವೇ ಒಂದು ವಿಸ್ಮಯ. ಮೊಗೆದಷ್ಟೂ ಅದು ವಿಸ್ತೃತವೇ. ತೆಲಂಗಾಣದ ನಿರ್ಮಲ್ ಎಂಬ ಜಿಲ್ಲೆಯ ಕಡೆಂ ಮಂಡಲದ ಉಡುಂಪುರ್ ವ್ಯಾಪ್ತಿಯ ಪೆದ್ದವಾಗು ಸಮೀಪದ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಅಪರೂಪದ ಕಪ್ಪೆಯೊಂದು ಪತ್ತೆ ಆಗಿದೆ. ಇಲ್ಲಿಯ ಕವ್ವಾಲ್ ಹುಲಿ ಸಂರಕ್ಷಣಾ ವ್ಯಾಪ್ತಿಯಲ್ಲಿ ಡಿಆರ್ಒ ಪ್ರಕಾಶ್ ಮತ್ತು ಎಫ್ಬಿಒ ಪ್ರಸಾದ್ ಎಂಬುವವರು ಗಸ್ತು ತಿರುಗುತ್ತಿದ್ದಾಗ ಈ ಕಪ್ಪೆ ಕಂಡು ಬಂದಿದೆ. ಅಪರೂಪದ ಕಪ್ಪೆಯ ಚಿತ್ರವನ್ನು ಸೆರೆ ಹಿಡಿದ ಅರಣ್ಯಾಧಿಕಾರಿಗಳು ಅದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ಇಂಡಿಯನ್ ಪೇಂಟೆಡ್ ಫ್ರಾಗ್ ಮತ್ತು ಶ್ರೀಲಂಕಾ ಬುಲ್ಫ್ರಾಗ್ ಎಂದು ಕರೆಯಲಾಗುತ್ತದೆ. ಇದು ಕೆಲವೇ ಪ್ರದೇಶಗಳಲ್ಲಿ ಕಂಡು ಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣದ ಕಡೆಂ ಅರಣ್ಯದಲ್ಲಿ ಅಪರೂಪದ ಕಪ್ಪೆ ಪತ್ತೆ: ಏನಿದರ ವಿಶೇಷತೆ!
Published : Jun 19, 2024, 12:55 PM IST
ಅಪರೂಪದ ಕಪ್ಪೆ ಪತ್ತೆ (ETV Bharat)
ಈ ಕಪ್ಪೆಗಳು ಬೇಸಿಗೆ ಸಮಯದಲ್ಲಿ ತಂಪಾದ ಸ್ಥಳಗಳಲ್ಲಿ ಮಣ್ಣಿನೊಳಗೆ ಅಡಗಿಕೊಳ್ಳುತ್ತವೆ. ಮಳೆಗಾಲ ಆರಂಭವಾದ ಬಳಿಕ ಮೊಟ್ಟೆಗಳನ್ನು ಇಡಲು ಮಾತ್ರ ಹೊರಬರುತ್ತವೆ.
ಇದನ್ನೂ ಓದಿ:ಗಂಡು - ಹೆಣ್ಣಿನ ಧ್ವನಿಯಲ್ಲಿ ವಟಗುಟ್ಟುವ ಹೊಸ ಪ್ರಭೇದದ 'ಮ್ಯೂಸಿಕ್ ಕಪ್ಪೆ' ಪತ್ತೆ